Advertisement
ಮಂಗಳೂರು ವಿ.ವಿ. ವ್ಯಾಪ್ತಿಯ ಪುರುಷರ ವಿಭಾಗದಲ್ಲಿ 31 ಕಾಲೇಜಿನ 178 ಸ್ಪರ್ಧಿಗಳು, ಮಹಿಳೆಯರ ವಿಭಾಗದಲ್ಲಿ 18 ಕಾಲೇಜಿನ 78 ಸ್ಪರ್ಧಿಗಳು ಭಾಗವಹಿಸಿದ್ದು, ಇದೇ ಮೊದಲ ಬಾರಿ ಎನ್ನುವಂತೆ ದಾಖಲೆಯ ಒಟ್ಟು 249 ಸ್ಪರ್ಧಿಗಳು ಕುಸ್ತಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಾರೆ. ಉಡುಪಿಯ 12 ಕಾಲೇಜುಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿವೆ. ಪುರುಷರ ವಿಭಾಗದಲ್ಲಿ 57 ಕೆ.ಜಿ.ಯಿಂದ 125 ಕೆ.ಜಿ.ವರೆಗೆ, ಮಹಿಳಾ ವಿಭಾಗದಲ್ಲಿ 43 ಕೆ.ಜಿ.ಯಿಂದ 74 ಕೆ.ಜಿ.ವರೆಗೆ ಒಟ್ಟು 8 ವಿಭಾಗದಲ್ಲಿ ಸ್ಪರ್ಧೆ ನಡೆಯುತ್ತಿದೆ.
ಪೂರ್ಣಪ್ರಜ್ಞ ಶಿಕ್ಷಣ ಸಮೂಹದ ಅಧ್ಯಕ್ಷ, ಶ್ರೀ ಅದಮಾರು ಮಠದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಕ್ರೀಡಾಕೂಟ ಉದ್ಘಾಟಿಸಿ, ಆಶೀರ್ವ ದಿಸಿದರು. “ನಗರವಾಸಿಗಳು ಪೇಟೆಯ ತಿಂಡಿ, ಆಹಾರದಿಂದ ಬೇಸತ್ತು, ಹಳ್ಳಿಯ ಊಟಕ್ಕೆ ಹೆಚ್ಚಿನ ಪ್ರಾಮುಖ್ಯ ನೀಡುತ್ತಿದ್ದು, ಹಾಗೇ ನಮ್ಮ ಗ್ರಾಮೀಣ ಆಟಗಳಾದ ಕುಸ್ತಿ, ಲಗೋರಿ, ಹಗ್ಗದ ಆಟಗಳಿಗೆ ಪ್ರಾಶಸ್ತ್ಯ ಸಿಗಬೇಕಿದೆ. ಸೋತವರಿಂದ ನಾವು ಗೆದ್ದಿದ್ದೇವೆ ಅನ್ನುವುದನ್ನು ಗೆದ್ದವರು ಮರೆಯಬಾರದು. ಪುರಾಣದ ಶ್ರೀ ಕೃಷ್ಣ- ಬಲರಾಮ, ಹನುಮಂತ, ಭೀಮಸೇನ, ಆಚಾರ್ಯ ಮಧ್ವರು ಇವರೆಲ್ಲ ಕುಸ್ತಿ ಆಟದಲ್ಲಿ ಪರಿಣತಿ ಪಡೆದಿದ್ದರು’ ಎಂದರು. ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲ ಡಾ| ಬಿ. ಜಗದೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿ.ವಿ. ದೈಹಿಕ ಶಿಕ್ಷಣ ನಿರ್ದೇಶಕ ಡಾ| ಕಿಶೋರ್ ಕುಮಾರ್ ಸಿ.ಕೆ., ದ.ಕ. ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಪೂರ್ಣಪ್ರಜ್ಞ ಶಿಕ್ಷಣ ಸಮೂಹದ ಕಾರ್ಯದರ್ಶಿ ಡಾ| ಜಿ. ಎಸ್. ಚಂದ್ರಶೇಖರ್, ಕೋಶಾಧಿಕಾರಿ ಪ್ರದೀಪ್ ಕುಮಾರ್, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಸುಕುಮಾರ್ ಉಪಸ್ಥಿತರಿದ್ದರು. ಕಾಲೇಜಿನ ಶ್ರೀಕಾಂತ್ ರಾವ್ ಸ್ವಾಗತಿಸಿದರು. ಶಿವಕುಮಾರ್ ವಂದಿಸಿದರು.
Related Articles
8 ಬೇರೆ ಬೇರೆ ವಿಭಾಗದಲ್ಲಿ 10 ಕಾಲೇಜುಗಳಾದ ಉಡುಪಿಯ ಪೂರ್ಣಪ್ರಜ್ಞ, ಎಂಜಿಎಂ, ಮೂಡಬಿದಿರೆ ಯ ಆಳ್ವಾಸ್, ಆಳ್ವಾಸ್ ಬಿಪಿಎಡ್, ಮಂಗಳೂರಿನ ಕಾರ್‌ಸ್ಟ್ರೀಟ್ ಕಾಲೇಜು, ಬ್ರಹ್ಮಾವರದ ಎಸ್‌ಎಂಎಸ್, ಬಸೂÅರಿನ ಎಸ್‌ಬಿಎಂ, ಕುಂದಾಪುರದ ಡಾ| ಬಿ.ಬಿ. ಹೆಗ್ಡೆ, ಕೋಟದ ಸರಕಾರಿ ಪ್ರಥಮ ದರ್ಜೆ ಕಾಲೇಜು, ಕಾರ್ಕಳದ ಎಸ್‌ವಿಎಸ್‌ನ ವಿದ್ಯಾರ್ಥಿಗಳು ಸೆಮಿಫೈನಲ್‌ಗೇರಿದ್ದು, ಹೆಚ್ಚಿನ ಸ್ಪರ್ಧೆಯಲ್ಲಿ ಆಳ್ವಾಸ್ ವಿದ್ಯಾರ್ಥಿಗಳು ಪ್ರಾಬಲ್ಯ ಮೆರೆದಿದ್ದಾರೆ.
Advertisement