Advertisement

ಭಾರತೀಯ ಕುಸ್ತಿ ಒಕ್ಕೂಟ: ಆ.12ಕ್ಕೆ ಬಹು ನಿರೀಕ್ಷಿತ ಚುನಾವಣೆ

11:03 PM Jul 21, 2023 | Team Udayavani |

ಹೊಸದಿಲ್ಲಿ: ಅಂತೂ ಭಾರತೀಯ ಕುಸ್ತಿ ಒಕ್ಕೂಟದ ಚುನಾ ವಣೆಯ ದಿನಾಂಕ ಅಂತಿಮಗೊಂಡಿದೆ. ಆ.12ರಂದು ಬಹು ನಿರೀಕ್ಷಿತ ಚುನಾವಣೆ ನಡೆಯಲಿದೆ. ಆ.7ಕ್ಕೆ ಅಭ್ಯರ್ಥಿ ಗಳ ಅಂತಿಮಪಟ್ಟಿ ಹೊರಬೀಳಲಿದೆ. ಗಮನಿಸಬೇಕಾದ ಸಂಗತಿಯೆಂದರೆ ಬಣಗಳಾಗಿ ಇಬ್ಭಾಗವಾಗಿರುವ ಮಹಾ ರಾಷ್ಟ್ರ ಸಂಸ್ಥೆಗೆ ಚುನಾವಣೆಯಲ್ಲಿ ಪಾಲ್ಗೊಳ್ಳದಂತೆ ನಿರ್ಬಂಧಿಸಲಾಗಿದೆ.

Advertisement

ಈ ಚುನಾವಣೆಗೆ ಹಲವು ಬಾರಿ ದಿನಾಂಕ ನಿಗದಿಯಾಗಿ ಮುಂದೂ ಡಲ್ಪಟ್ಟಿತ್ತು. ಒಂದಲ್ಲ ಒಂದು ಸಮಸ್ಯೆ ಗಳು ಕಾಡುತ್ತಲೇ ಇದ್ದವು. ಆರಂಭದಲ್ಲಿ ಮಧ್ಯಾಂತರ ಸಮಿತಿ ಜು. 6ಕ್ಕೆ ಚುನಾವಣೆ ಎಂದು ನಿಗದಿ ಮಾಡಿತ್ತು. ಆದರೆ ಅಮಾನ್ಯಗೊಂಡ ಮಹಾರಾಷ್ಟ್ರ, ಹರಿಯಾಣ, ತೆಲಂಗಾಣ, ರಾಜಸ್ಥಾನ, ಹಿಮಾಚಲ ಪ್ರದೇಶಗಳು ತಮಗೂ ಅವಕಾಶ ಕೊಡಬೇಕೆಂದು ಆಗ್ರಹಿಸಿದ್ದ ರಿಂದ ಜು.11ಕ್ಕೆ ಮುಂದೂ ಡಿಕೆಯಾ ಯಿತು. ಇನ್ನೇನು ನಡೆಯು ತ್ತದೆ ಎನ್ನು ವಾಗ ಅಸ್ಸಾಂ ಸಂಸ್ಥೆ ತನಗೆ ಮತದಾನಕ್ಕೆ ಅವಕಾಶ ಕೊಡಬೇಕೆಂದು ಆಗ್ರಹಿಸಿತು. ಹೀಗಾಗಿ ಗುವಾಹಾಟಿ ಉಚ್ಚ ನ್ಯಾಯಾಲಯ ಚುನಾವಣೆಗೆ ತಡೆ ನೀಡಿತು. ಮತ್ತೆ ಮುಂದೆ ಹೋಯಿತು.

ಅಂತಿಮವಾಗಿ ಸ್ವತಃ ಸರ್ವೋಚ್ಚ ನ್ಯಾಯಾಲಯ ಮಧ್ಯಪ್ರವೇಶ ಮಾಡಿ ಎಲ್ಲ ತಡೆಗಳನ್ನು ನಿವಾರಿಸಿ, ಚುನಾವಣೆ ನಡೆಸಬೇಕೆಂದು ಆದೇಶಿಸಿತು. ಚುನಾ ವಣೆಯಲ್ಲಿ 24 ರಾಜ್ಯಸಂಸ್ಥೆಗಳ 48 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಆ. 1ರಂದು ನಾಮಪತ್ರಗಳನ್ನು ಸಲ್ಲಿಸ ಲಾಗುತ್ತದೆ. ಒಂದು ವೇಳೆ ಅವಿರೋಧ ವಾಗಿ ಆಯ್ಕೆಯಾಗುವ ಪರಿಸ್ಥಿತಿ ಯಿಲ್ಲವಾದರೆ ಆ.12ಕ್ಕೆ ಮತದಾನ ನಡೆಸಿ ಫ‌ಲಿತಾಂಶ ಪ್ರಕಟಿಸಲಾಗುತ್ತದೆ.

ಈ ಚುನಾವಣೆ ಹಿಂದಿನ ಅಧ್ಯಕ್ಷ ಬೃಜ್‌ ಭೂಷಣ್‌ ಶರಣ್‌ ಸಿಂಗ್‌ ಅವರಿಗೆ ಭಾರೀ ಹೊಡೆತವಾಗಿ ಪರಿಣಮಿಸಿದೆ. ಅವರನ್ನು ಚುನಾವಣೆಯಿಂದ ಹೊರಗಿ ಟ್ಟಿದ್ದಲ್ಲದೇ ಅವರ ಆತ್ಮೀಯರು ಯಾರಿಗೂ ಸ್ಪರ್ಧಿಸುವಂತಿಲ್ಲವೆಂದು ತಾಕೀತು ಮಾಡಲಾಗಿದೆ. ಸದ್ಯ ಬೃಜ್‌ ಭೂಷಣ್‌ ವಿರುದ್ಧ ನ್ಯಾಯಾಲಯದಲ್ಲಿ ಗಂಭೀರ ತನಿಖೆ ನಡೆಯುತ್ತಿದೆ. ಇದು ಅವರ ರಾಜಕೀಯ ಭವಿಷ್ಯಕ್ಕೂ ಅಪಾಯಕಾರಿಯಾಗಬಹುದು.

Advertisement

Udayavani is now on Telegram. Click here to join our channel and stay updated with the latest news.

Next