Advertisement
ಮೊದಲು ಬ್ಯಾಟಿಂಗ್ ನಡೆಸಿದ ಗುಜರಾತ್ 8 ವಿಕೆಟಿಗೆ 152 ರನ್ ಗಳಿಸಿದರೆ, ಯುಪಿ 5 ವಿಕೆಟಿಗೆ 144 ರನ್ ಮಾಡಿತು. ಮಂಗಳವಾರ ಆರ್‌ಸಿಬಿ-ಮುಂಬೈ ಮುಖಾಮುಖಿ ಆಗಲಿದ್ದು, ಇದನ್ನು ಮಂಧನಾ ಪಡೆ ಗೆದ್ದರೆ ಪ್ಲೇ ಆಫ್ ಅಧಿಕೃತವಾಗಲಿದೆ.
ಗುಜರಾತ್ ತಂಡದ ಮೊತ್ತ ನೂರೈವತ್ತರ ಗಡಿ ದಾಟಲು ಕಾರಣ ನಾಯಕಿ ಬೆತ್ ಮೂನಿ ಸಿಡಿಸಿದ ಅಜೇಯ 74 ರನ್. 52 ಎಸೆತ ನಿಭಾಯಿಸಿದ ಮೂನಿ 10 ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿದರು. ಇದರಲ್ಲಿ 5 ಬೌಂಡರಿಗಳನ್ನು ಸೋಫಿ ಎಕ್Éಸ್ಟೋನ್ ಅವರ ಕೊನೆಯ ಓವರ್‌ನಲ್ಲಿ ಬಾರಿಸಿದ್ದು ವಿಶೇಷ. ಮತ್ತೋರ್ವ ಓಪನರ್ ಲಾರಾ ವೋಲ್ವಾರ್ಟ್ 43 ರನ್ ಹೊಡೆದರು. ಮೊದಲ ವಿಕೆಟಿಗೆ 7.5 ಓವರ್‌ಗಳಲ್ಲಿ 60 ರನ್ ಒಟ್ಟುಗೂಡಿತು. ಅನಂತರ ಯುಪಿ ಬೌಲರ್ ನಿಯಂತ್ರಣ ಸಾಧಿಸುವಲ್ಲಿ ಯಶಸ್ವಿಯಾದರು. ಆರ್‌ಸಿಬಿ ರನ್‌ರೇಟ್ ಮೀರಿಸಬೇಕಾದರೆ 13.2 ಓವರ್‌ಗಳಲ್ಲಿ ಗೆಲ್ಲಬೇಕಿದ್ದ ಯುಪಿ ಆರಂಭ ದಿಂದಲೇ ಕುಸಿತ ಕಾಣಲಾರಂಭಿಸಿತು. 4 ಓವರ್ ಆಗುವಷ್ಟರಲ್ಲಿ 16 ರನ್ನಿಗೆ 4 ವಿಕೆಟ್ ಬಿತ್ತು. ದೀಪ್ತಿ ಶರ್ಮ ಏಕಾಂಗಿಯಾಗಿ ಹೋರಾಡಿ ಸತತ 3ನೇ ಅರ್ಧ ಶತಕ ಬಾರಿಸಿದರು (ಅಜೇಯ 87).