Advertisement

WPL; ಇಂದು ಆರ್‌ಸಿಬಿ-ಡೆಲ್ಲಿ ಫೈನಲ್‌ ಕದನ

11:38 PM Mar 16, 2024 | Team Udayavani |

ಹೊಸದಿಲ್ಲಿ: ವನಿತಾ ಪ್ರೀಮಿಯರ್‌ ಲೀಗ್‌ (ಡಬ್ಲ್ಯುಪಿಎಲ್‌) ಅಂತಿಮ ಘಟಕ್ಕೆ ತಲುಪಿದೆ. ರವಿವಾರ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ನಡುವಿನ ಪ್ರಶಸ್ತಿ ಕದನಕ್ಕೆ ಅರುಣ್‌ ಜೇಟ್ಲಿ ಮೈದಾನ ಸಾಕ್ಷಿಯಾಗಲಿದೆ. ಇಲ್ಲಿ ಯಾರು ಗೆದ್ದರೂ ಚೊಚ್ಚಲ ಟ್ರೋಫಿಯ ಸಂಭ್ರಮ. ಹೀಗಾಗಿ ಮೊದಲ ಚಾಂಪಿಯನ್‌ ಪಟ್ಟ ಅಲಂಕರಿಸಲು ಬೆಂಗಳೂರು ಮತ್ತು ಡೆಲ್ಲಿ ಎದುರು ನೋಡುತ್ತಿವೆ.

Advertisement

ಲೀಗ್‌ ಹಂತದಲ್ಲಿ ಆಡಿದ 8 ಪಂದ್ಯಗಳಲ್ಲಿ 6 ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದ ಮೆಗ್‌ ಲ್ಯಾನಿಂಗ್‌ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್‌ ಎರಡನೇ ಬಾರಿಗೆ ನೇರವಾಗಿ ಫೈನಲ್‌ಗೇರಿದ ಸಾಧನೆ ಮಾಡಿತ್ತು. ಶುಕ್ರವಾರದ ಎಲಿಮಿನೇಟರ್‌ನಲ್ಲಿ ಹಾಲಿ ಚಾಂಪಿಯನ್ಸ್‌ ಮುಂಬೈ ಇಂಡಿಯನ್ಸ್‌ ಎದುರು ರೋಚಕ 5 ರನ್‌ಗಳ ಗೆಲುವನ್ನಾಚರಿಸಿರುವ ಸ್ಮತಿ ಮಂಧಾನ ನೇತೃತ್ವದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮೊದಲ ಬಾರಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದ ಖುಷಿಗೆ ಪಾತ್ರವಾಗಿದೆ.

ಕಳೆದ ಋತುವಿನ ಫೈನಲ್‌ನಲ್ಲಿ ಸ್ಪರ್ಧಿಸಿದ್ದ ಡೆಲ್ಲಿ ತಂಡವು ಮುಂಬೈ ವಿರುದ್ಧ 7 ವಿಕೆಟ್‌ಗಳಿಂದ ಸೋತು ರನ್ನರ್‌ ಅಪ್‌ ಸ್ಥಾನ ಪಡೆದಿತ್ತು. ಆದರೆ ಆರ್‌ಸಿಬಿ, ಕಳೆದ ಬಾರಿ ಲೀಗ್‌ ಹಂತದಲ್ಲೇ ಹೊರಬಿದ್ದು ನಿರಾಶೆ ಅನುಭವಿಸಿತ್ತು. WPLನಲ್ಲಿ ಡೆಲ್ಲಿ-ಆರ್‌ಸಿಬಿ ಒಟ್ಟು 4 ಬಾರಿ ಮುಖಾಮುಖೀಯಾಗಿವೆ. ಇದರಲ್ಲಿ ಡೆಲ್ಲಿ ನಾಲ್ಕು ಪಂದ್ಯ ಗೆದ್ದು ಬಲಿಷ್ಠ ತಂಡವಾಗಿ ಕಾಣಿಸಿಕೊಂಡಿದೆ. ಆದರೆ ಆರ್‌ಸಿಬಿಯ ಈಗನ ಪ್ರದರ್ಶನ ಗಮನಿಸಿದರೆ, ಈ ಬಾರಿ ಕಪ್‌ ಗೆಲ್ಲಲು ಬೆಂಗಳೂರಿಗೂ ಅವಕಾಶವಿದ್ದು, ಫೈನಲ್‌ ಹಣಾಹಣಿ ರೋಚಕ ಎನಿಸುವ ಎಲ್ಲ ಸಾಧ್ಯತೆಗಳಿವೆ.
ಅಂಕಣ ಗುಟ್ಟು

ದಿಲ್ಲಿಯ ಅರುಣ್‌ ಜೇಟ್ಲಿ ಪಿಚ್‌ ಬ್ಯಾಟಿಂಗ್‌ ಮತ್ತು ಬೌಲಿಂಗ್‌ಗೆ ಸಹಕರಿಸುವ ಸಾಧ್ಯತೆಯಿದೆ. ಪಂದ್ಯದ ಆರಂಭದಲ್ಲಿ ಇದು ವೇಗಿಗಳಿಗೆ ಅನುಕೂಲ ಒದಗಿಸಿದರೂ ಪಂದ್ಯ ಮುಂದುವರಿದಂತೆ ಸ್ಪಿನ್ನರ್‌ಗಳು ಲಾಭ ಪಡೆಯಬಲ್ಲರು. ಈ ಮೈದಾನದಲ್ಲಿ 150-160 ರನ್‌ ಗಳಿಸುವ ತಂಡ ಗೆಲ್ಲುವ ಸಾಧ್ಯತೆ ಹೆಚ್ಚು. ಪಂದ್ಯದ ವೇಳೆ ಮಳೆ ಸಾಧ್ಯತೆ ಇಲ್ಲ.

ಮುಖಾಮುಖಿ
ಒಟ್ಟು ಪಂದ್ಯ: 4
ಡೆಲ್ಲಿ ಜಯ: 4
ಆರ್‌ಸಿಬಿ ಜಯ: 0

Advertisement
Advertisement

Udayavani is now on Telegram. Click here to join our channel and stay updated with the latest news.

Next