Advertisement

ವೈಡ್‌, ನೋಬಾಲ್‌ಗ‌ಳಿಗೂ ಡಿಆರ್‌ಎಸ್‌!

11:54 PM Mar 06, 2023 | Team Udayavani |

ಮುಂಬಯಿ: ಮೈದಾನದ ಅಂಪಾಯರ್‌ಗಳ ಸ್ವಾತಂತ್ರ್ಯವನ್ನು ಇನ್ನಷ್ಟು ಕಿತ್ತುಕೊಳ್ಳಲಾಗುತ್ತಿದೆ. ಪ್ರಸಕ್ತ ಋತುವಿನ ಐಪಿಎಲ್‌ನಲ್ಲಿ ನೋಬಾಲ್‌ ಹಾಗೂ ವೈಡ್‌ ಬಾಲ್‌ಗ‌ಳ ಅನುಮಾನಗಳನ್ನು ಪರಿಹರಿಸಲು ತೃತೀಯ ಅಂಪಾಯರ್‌ಗೆ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಿದ್ದೇ ಇದಕ್ಕೆ ಕಾರಣ.

Advertisement

“ವೈಡ್‌ ಅಥವಾ ನೋಬಾಲ್‌ಗೆ ಸಂಬಂಧಿಸಿದಂತೆ ಆನ್‌ಫೀಲ್ಡ್‌ ಅಂಪಾ ಯರ್ ತೆಗೆದುಕೊಂಡ ಯಾವುದೇ ನಿರ್ಧಾರವನ್ನು ಮರು ಪರಿಶೀಲನೆ ಮಾಡಲು ಆಟಗಾರರಿಗೆ ಅವಕಾಶ ಕಲ್ಪಿಸಲಾಗಿದೆ’ ಎಂಬುದಾಗಿ ಹೊಸ ನಿಯಮ ತಿಳಿಸುತ್ತದೆ.

ಈಗಾಗಲೇ ವನಿತಾ ಪ್ರೀಮಿಯರ್‌ ಲೀಗ್‌ನಲ್ಲಿ ಇದನ್ನು ಜಾರಿಗೆ ತರಲಾಗಿದೆ. ಮುಂಬೈ ಇಂಡಿಯನ್ಸ್‌ ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಮೊದಲ ಸಲ ವೈಡ್‌ ವಿರುದ್ಧ ಮೇಲ್ಮನವಿ ಸಲ್ಲಿಸಿ ಯಶಸ್ವಿಯಾಗಿದ್ದರು.

ಹಾಗೆಯೇ ರವಿವಾರ ರಾತ್ರಿ ಗುಜರಾತ್‌ ತಂಡದ ಅನ್ನಾಬೆಲ್‌ ಸದರ್‌ಲ್ಯಾಂಡ್‌ ಎಸೆತವೊಂದರ ವಿರುದ್ಧ ಬ್ಯಾಟರ್‌ ಗ್ರೇಸ್‌ ಹ್ಯಾರಿಸ್‌ ವೈಡ್‌ಗಾಗಿ ಮೇಲ್ಮನವಿ ಸಲ್ಲಿಸಿದ್ದರು. ಅಂತಿಮ ಓವರ್‌ನ 4ನೇ ಎಸೆತ ತೀರಾ ಹೊರಗಿನಿಂದ ಹಾದುಹೋಗಿತ್ತು. ಇದಕ್ಕೆ ಮೈದಾನದ ಅಂಪಾಯರ್‌ ವೈಡ್‌ ನೀಡಿರಲಿಲ್ಲ. ಆಗ ಪಂದ್ಯ ನಿರ್ಣಾಯಕ ಘಟ್ಟದಲ್ಲಿತ್ತು. ಡಿಆರ್‌ಎಸ್‌ ಪ್ರಕಾರ ಆ ಎಸೆತ ವೈಡ್‌ ಎನಿಸಿತು. ಹೆಚ್ಚುವರಿ ಎಸೆತದಲ್ಲಿ ಹ್ಯಾರಿಸ್‌ ಬೌಂಡರಿ ಬಾರಿಸಿದರು. 5ನೇ ಎಸೆತವನ್ನು ಸಿಕ್ಸರ್‌ಗೆ ಬಡಿದಟ್ಟಿ ಯುಪಿ ಗೆಲುವನ್ನು ಸಾರಿದರು.

Advertisement

Udayavani is now on Telegram. Click here to join our channel and stay updated with the latest news.

Next