Advertisement

ಬೆಲೆಯೇರಿಕೆಯಿಂದ ಹಣದುಬ್ಬರವೂ ಏರಿಕೆ

08:31 PM Nov 15, 2021 | Team Udayavani |

ನವದೆಹಲಿ: ಸಗಟು ಹಣದುಬ್ಬರ ಪ್ರಮಾಣ ಅಕ್ಟೋಬರ್‌ನಲ್ಲಿ ಶೇ.12.54ಕ್ಕೇರಿದೆ. ಇದಕ್ಕೆ ಮುಖ್ಯ ಸಿದ್ಧ ಉತ್ಪನ್ನಗಳು ಮತ್ತು ಕಚ್ಚಾ ಪೆಟ್ರೋಲಿಯಂಗಳ ಮೇಲಿನ ಬೆಲೆಯೇರಿಕೆಯಾಗಿದ್ದು.

Advertisement

ಈ ವರ್ಷ ಏಪ್ರಿಲ್‌ನಲ್ಲಿ ಎರಡಂಕೆಗೆ ತಲುಪಿದ್ದ ಸಗಟು ಹಣದುಬ್ಬರ ಸತತ 7 ತಿಂಗಳು ಕಳೆದರೂ ಎರಡಂಕೆಯಲ್ಲೇ ಇದೆ. ಸೆಪ್ಟೆಂಬರ್‌ ತಿಂಗಳಲ್ಲಿ ಹಣದುಬ್ಬರ ಪ್ರಮಾಣ ಶೇ.10.66ರಷ್ಟಿತ್ತು.

ಆದರೆ ಕಳೆದ ವರ್ಷ 2020 ಅಕ್ಟೋಬರ್‌ನಲ್ಲಿ ಈ ಪ್ರಮಾಣ ಕೇವಲ ಶೇ.1.31ರಷ್ಟಿತ್ತು. ಅದೇ ಪ್ರಮಾಣ ಈ ವರ್ಷ ಅಕ್ಟೋಬರ್‌ನಲ್ಲಿ ಬಹಳ ಹೆಚ್ಚಾಗಿದೆ.

ಇದನ್ನೂ ಓದಿ:ಬುಸ್ ನಾಗಪ್ಪ ದೆಹಲಿಗೂ ಹೋಯಿತು: ಕೇಂದ್ರ ಸಚಿವ ನಾರಾಯಣಸ್ವಾಮಿ ಲೇವಡಿ

ಖನಿಜ ತೈಲಗಳು, ಲೋಹಗಳು, ಆಹಾರೋತ್ಪನ್ನ, ಕಚ್ಚಾ ಪೆಟ್ರೋಲಿಯಂ ತೈಲ, ಜೈವಿಕ ಅನಿಲ, ರಾಸಾಯನಿಕಗಳು ಮತ್ತದರ ಉತ್ಪನ್ನಗಳ ಬೆಲೆಯಲ್ಲಿ ಭಾರೀ ಏರಿಕೆಯಾಗಿರುವುದೇ ಇದಕ್ಕೆ ಕಾರಣ.

Advertisement
Advertisement

Udayavani is now on Telegram. Click here to join our channel and stay updated with the latest news.

Next