Advertisement

ಧೋನಿ ಕ್ರಿಕೆಟಿಗೇ ವಿದಾಯ ಹೇಳಿದ್ದರೆ ಧರಣಿ ನಡೆಸುತ್ತಿದ್ದೆ :ಗಾವಸ್ಕರ್

04:11 PM Jan 05, 2017 | udayavani editorial |

ಮುಂಬಯಿ : ಜಾರ್ಖಂಡ್‌ನ‌ ಕ್ರಿಕೆಟ್‌ ಮಾಂತ್ರಿಕ ಎಂ ಎಸ್‌ ಧೋನಿ ಒಂದು ವೇಳೆ ಕ್ರಿಕೆಟಿಗೇ ವಿದಾಯ ಹೇಳಿದ್ದರೆ ನಾನು ಅದನ್ನು ಪ್ರತಿಭಟಿಸಿ ಆತನ ಮನೆಯ ಮುಂದೆ ಧರಣಿ ನಡೆಸುತ್ತಿದ್ದೆ ಎಂದು ಭಾರತೀಯ ಕ್ರಿಕೆಟ್‌ ರಂಗದ ಲಿಟ್ಲ ಮಾಸ್ಟರ್‌ ಸುನೀಲ್‌ ಗಾವಸ್ಕರ್‌ ಹೇಳಿದ್ದಾರೆ.

Advertisement

ಧೋನಿ ಸೀಮಿತ ಓವರ್‌ಗಳ ಕ್ರಿಕೆಟ್‌ನ ಕಪ್ತಾನಿಕೆಯನ್ನು  ಮಾತ್ರವೇ ಬಿಟ್ಟುಕೊಟ್ಟಿರುವುದು ಸಮಾಧಾನದ ವಿಷಯ; ಏಕೆಂದರೆ ಜಾರ್ಖಂಡ್‌ನ‌ ಈ ಕ್ರಿಕೆಟ್‌ ಮಾಂತ್ರಿಕನಲ್ಲಿ ದೇಶದ ಕ್ರಿಕೆಟಿಗ ಇನ್ನೂ ಮಹೋನ್ನತ ಕೊಡುಗೆ ನೀಡುವಷ್ಟು ಸಂಪನ್ಮೂಲವಿದೆ ಎಂದು ಗಾವಸ್ಕರ್‌ ಹೇಳಿದ್ದಾರೆ.

“ಧೋನಿ ಒಂದೊಮ್ಮೆ ಆಟಗಾರನಾಗಿ ಕ್ರಿಕೆಟಿಗೆ ವಿದಾಯ ಹೇಳಿರುತ್ತಿದ್ದರೆ ನಾನು ಆತನು ಕ್ರಿಕೆಟಿಗೆ ಮರಳಬೇಕೆಂದು ಒತ್ತಾಯಿಸಿ ಆತನ ಮನೆಯ ಮುಂದೆ ಧರಣಿ ಕೂರುತ್ತಿದ್ದೆ; ಒಬ್ಬ ಆಟಗಾರನಾಗಿ ಧೋನಿ ಈಗಲೂ ಎದುರಾಳಿಯ ಪಾಲಿನ ವಿನಾಶಕನೇ ಆಗಿದ್ದಾರೆ. ಕೇವಲ ಒಂದು ಓವರ್‌ನಲ್ಲಿ ಅವರು ತಂಡದ ಅದೃಷ್ಟವನ್ನು ಖುಲಾಯಿಸುವ ಶಕ್ತಿ ಹೊಂದಿದ್ದಾರೆ. ನಿಜಕ್ಕಾದರೆ ಭಾರತ ತಂಡಕ್ಕೆ ಅವರು ತೀರ ಅಗತ್ಯ. ತಂಡದಲ್ಲಿ ಆತ ಆಟಗಾರನಾಗಿ ಉಳಿಯಲು ತೀರ್ಮಾನಿಸಿರುವುದೇ ನನಗೆ ಅತೀವ ಸಂತಸ ಉಂಟುಮಾಡಿದೆ’ ಎಂದು ಗಾವಸ್ಕರ್‌ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next