Advertisement
ಬನಹಟ್ಟಿಯ ನೀರಿನ ಟಾಕಿ ಹಾಗು ಅಶೋಕ ಕಾಲನಿಯಲ್ಲಿ ಉದ್ಯಾನವಗಳಿವೆ. ಧೂಳೂ ತಿನ್ನುತ್ತಿರುವ ಆಸನಗಳು, ಒಣಗಿ ನಿಂತು ಯಾವ ಕ್ಷಣದಲ್ಲಾದರೂ ನೆಲಕಚ್ಚುವ ಸ್ಥಿತಿಯಲ್ಲಿರುವ ವೃಕ್ಷಗಳು, ಆಗಾಗ ಕಾಣಿಸಿಕೊಳ್ಳುವ ವಿಷ ಜಂತುಗಳು. ಈ ದೃಶ್ಯ ಕಂಡು ಬರುವದು ಸಾಮಾನ್ಯವಾಗಿವೆ. ಸತತ ಮೂರ್ನಾಲ್ಕು ವರ್ಷಗಳಿಂದ ಉದ್ಯಾನವನಕ್ಕೆ ಬೀಗ ಹಾಕಿದ ಕಾರಣ ನಿರ್ವಹಣೆ ಇಲ್ಲದೆ ಮರ-ಗಿಡಗಳು ಸಂಪೂರ್ಣ ಒಣಗಿದರೆ, ಇಲ್ಲಿನ ಆಸನಗಳು ಧೂಳು ತಿನ್ನುತ್ತಿವೆ. ಅಲ್ಲದೆ ಆಗಾಗ ವಿಷ ಜಂತುಗಳು ಸಹ ಕಾಣಿಸಿಕೊಳ್ಳುತ್ತಿವೆ.
Related Articles
Advertisement
‘ಸಿಬ್ಬಂದಿ ಕೊರತೆ ಕಾರಣ ಉದ್ಯಾನವನ ನಿರ್ವಹಣೆ ಸಮಸ್ಯೆಯಾಗುತ್ತಿದೆ. ಸಾರ್ವಜನಿಕರು ಜವಾಬ್ದಾರಿಯಿಂದ ನಿರ್ವಹಣೆ ಮಾಡಿದಲ್ಲಿ ಉದ್ಯಾನವನಕ್ಕೆ ಮುಕ್ತ ಅವಕಾಶ ಕಲ್ಪಿಸುವೆ. ಖಾಸಗಿ ಲೇಔಟ್‌ಗಳಲ್ಲಿನ ಉದ್ಯಾನವನಗಳ ಬಗ್ಗೆ ಸಮಗ್ರ ಮಾಹಿತಿ ಪಡೆದಿದ್ದು, ಶೀಘ್ರವೇ ಉದ್ಯಾನವನ ನಿರ್ವಹಣೆಗೆ ಎಲ್ಲವನ್ನೂ ವಶಪಡಿಸಲಾಗುವದು.’-ಶ್ರೀನಿವಾಸ ಜಾಧವ, ಪೌರಾಯುಕ್ತರು, ರಬಕವಿ-ಬನಹಟ್ಟಿ.
`ರಬಕವಿ-ಬನಹಟ್ಟಿ-ಹೊಸೂರ-ರಾಮಪೂರ ಪಟ್ಟಣಗಳಲ್ಲಿ ಮಾದರಿ ಉದ್ಯಾನವನಕ್ಕೆ ಕ್ರಮ ಕೈಗೊಂಡಿದ್ದು, ಬರುವ ಸಾಮಾನ್ಯ ಸಭೆಯಲ್ಲಿ ಉದ್ಯಾನವನ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡುವ ಮೂಲಕ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು.’-ಸಂಜಯ ತೆಗ್ಗಿ, ಅಧ್ಯಕ್ಷರು, ರಬಕವಿ-ಬನಹಟ್ಟಿ.
-ಕಿರಣ ಶ್ರೀಶೈಲ ಆಳಗಿ