Advertisement

Congress Partyಯಿಂದ ರಾಜ್ಯಕ್ಕೆ ದುರ್ದೆಸೆ: ಸಿ.ಟಿ.ರವಿ ಟೀಕೆ

06:11 PM Aug 18, 2023 | Team Udayavani |

ಮೈಸೂರು: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯಕ್ಕೆ ದುರ್ದೆಸೆ ಶುರುವಾಗಿದೆ ಎಂದು ಮಾಜಿ ಶಾಸಕ ಸಿ.ಟಿ.ರವಿ ಟೀಕಿಸಿದ್ದಾರೆ.

Advertisement

ಮಾಧ್ಯಮ ಪ್ರತಿನಿಧಿಗಳೊಂದಿ ಮಾತನಾಡಿ, ಬಿಜೆಪಿ ಅಧಿಕಾರ ಇದ್ದಾಗ ಕೆ.ಆರ್.ಎಸ್ ಭರ್ತಿಯಾಗದ ಸ್ಥಿತಿ ಇರಲಿಲ್ಲ. ಈಗ ರೈತರಿಗೆ ನೀರಿಲ್ಲ, ಜಲಾಶಯ ಖಾಲಿಯಾಗಿದೆ. ಪವರ್ ಕಟ್, ಲೋಡ್ ಶೆಡಿಂಗ್ ಶುರುವಾಗಿದೆ. ಶೂನ್ಯ ಬಿಲ್ ಅಂತಾರೆ, ಕರೆಂಟೇ ಇಲ್ಲದ ಮೇಲೆ ಶೂನ್ಯ ಬಿಲ್ ಬರುತ್ತೆ ಎಂದು ಲೇವಡಿ ಮಾಡಿದರು.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದಿಂದ ಇಂತಹ ದುರ್ದೆಸೆ ಇರುವ ಸಂದರ್ಭದಲ್ಲಿ ಆ ಪಕ್ಷಕ್ಕೆ ಬೇರೆಯವರು ಹೋಗ್ತಾರಾ? ಹೋಗೋರನ್ನು ರಾಜಕೀಯ ಜಾಣ್ಮೆ ಇರೋರು, ಬುದ್ದಿವಂತರು ಎಂದು ಹೇಳಲ್ಲ. ಹೋಗುವವರಿಗೆ ದೂರಾಲೋಚನೆ ಇದೆ‌ ಎಂದು ಹೇಳಲಾಗಲ್ಲ ಎಂದು ಸೂಚ್ಯವಾಗಿ ತಿಳಿಸಿದರು.

ಸರ್ಕಾರ ಬಂದಾಗಿನಿಂದ ಅಲ್ಲಿನ ಹಿರಿಯ ಶಾಸಕರಿಗೇ ಸಮಾಧಾನ ಇಲ್ಲ. ಇಲ್ಲಿಂದ ಹೋದವರಿಗೆ ಏನ್ ಸಮಾಧನಾನ ಸಿಗುತ್ತೆ ಎಂದ ಅವರು ಎಸ್.ಟಿ.ಸೋಮಶೇಖರ್ ಅವರ ಜೊತೆ ಮಾತನಾಡುತ್ತೇನೆ. ಅವರ ಭಾವನೆ ಏನಿದೆ ಎಂದು ತಿಳಿದುಕೊಂಡು ಉಳಿದವರ ಜತೆ ಮಾತನಾಡುತ್ತೇನೆ ಎಂದರು.

ಚುನಾವಣೆ ಮುಗಿದು 3 ತಿಂಗಳಾಗಿದೆ. ನಾವು ಸೋತಿರುವವರೆ ಇನ್ನೊಬ್ಬರ ಕಡೆ ಬೊಟ್ಟು ಮಾಡುತ್ತಿಲ್ಲ. ನಾವು ಸೋತಿರೋದಕ್ಕೆ ತಪ್ಪು ನಮ್ಮದು ಅಂತ ಹೇಳ್ತಿದ್ದೇವೆ. ಸೋಮಶೇಖರ್ ಜೊತೆ ಪೋನ್‌ ನಲ್ಲಿ ಮಾತಮಾಡಿದ್ದೇನೆ. ಕೂತು ಮಾತನಾಡಿದ ನಂತರ ಎಲ್ಲವೂ ಬಗೆಹರಿಯುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

ಯತ್ನಾಳ್ ಭವಿಷ್ಯದ ಬಗ್ಗೆ ಆತಂಕ
”ಯತ್ನಾಳ್ ಹೇಳಿರುವ ಭವಿಷ್ಯದ ಬಗ್ಗೆ ಕಾಂಗ್ರೆಸ್ ಗೆ ಆತಂಕ ಇರಬಹುದು. ಐದಾರು ತಿಂಗಳಲ್ಲಿ ಈ ಸರ್ಕಾರ ಇರುತ್ತೋ ಇಲ್ಲವೋ ಗೊತ್ತಿಲ್ಲ ಎಂದು ಯತ್ನಾಳ್ ಹೇಳಿದ್ದಾರೆ. ಜನ ನಮಗೆ ಎರಡು ಬಾರಿಯೂ ಸ್ಪಷ್ಟ ಬಹುಮತ ಕೊಡ್ಲಿಲ್ಲ. ಅವರಿಗೆ ನಿರ್ಭಿತವಾಗಿರಿ ಎಂದು 135 ಸ್ಥಾನ ಕೊಟ್ಟಿದ್ದಾರೆ. ಆದರೂ ಅವರಿಗೆ ಭಯ ಕಾಡ್ತಿದೆ ಅಂದ್ರೇ ಒಳಗೆ ಏನೋ ಸರಿಯಿಲ್ಲ ಅನ್ನಿಸುತ್ತೆ. ಉಳಿದ ಸಂಗತಿ ನೀವು ಹೇಳಬೇಕು. ಆಡು ಮುಟ್ಟದ ಸೊಪ್ಪಿಲ್ಲ ಪತ್ರಕರ್ತರಿಗೆ ತಿಳಿಯದ ವಿಷಯವಿಲ್ಲ ಅಂತ ಹೊಸ ಗಾದೆ. ಅವರನ್ನು ಅಲುಗಾಡಿಸುವ ತಾಕತ್ತು ನಮಗಿಲ್ಲ. ಅವ್ರ ಪಕ್ಷದ ಒಳಗಡೆ ಭೂಕಂಪವಾದ್ರೆ ನಮಗೆ ಗೊತ್ತಿಲ್ಲ” ಎಂದು ಮಾರ್ಮಿಕವಾಗಿ ನುಡಿದರು.

Advertisement

Udayavani is now on Telegram. Click here to join our channel and stay updated with the latest news.

Next