Advertisement

ನವರಾತ್ರಿ ಎರಡನೇ ದಿನದ ಆರಾಧನೆ- ಸ್ಥಿರಬುದ್ಧಿ ಕರುಣಿಸುವ ಬ್ರಹ್ಮಚಾರಿಣೀ

11:57 PM Oct 15, 2023 | Team Udayavani |

ಆದಿಶಕ್ತಿ ದುರ್ಗಾದೇವಿಯ ಒಂಬತ್ತು ರೂಪಗಳಲ್ಲಿ ಎರಡನೇ ರೂಪವಾದ ಬ್ರಹ್ಮಚಾರಿಣೀಯ ಕುರಿತು

Advertisement

ದಧಾನಾ ಕರಪದ್ಮಾಭ್ಯಾಮಕ್ಷಮಾಲಾಕಮಂಡಲೂ |
ದೇವಿ ಪ್ರಸೀದತು ಮಯಿ ಬ್ರಹ್ಮಚಾರಿಣ್ಯನುತ್ತಮಾ ||

ಇವಳು ತನ್ನ ಕೈಯಲ್ಲಿ ಕಮಲ, ಅಕ್ಷಮಾಲೆ, ವರದ ಹಸ್ತ ಮತ್ತು ಕಮಂಡಲವನ್ನು ಹಿಡಿದಿರುವಳು ಇವಳು. “ಹೇ ದೇವಿ ಬ್ರಹ್ಮಚಾರಿಣಿ, ನಿನ್ನ ಸ್ವರೂಪ ಭವ್ಯವಾದುದು ಹಾಗೂ ಜ್ಯೋತಿರ್ಮಯವಾದುದು. ದಯವಿಟ್ಟು ನನ್ನ ಮೇಲೆ ಕೃಪೆ ಮಾಡು.’

ಹಿಮವಂತನ ಪುತ್ರಿಯಾಗಿ ಜನಿಸಿದ ಶೈಲಜಾದೇವಿ ನಾರದರ ಉಪದೇಶದಂತೆ ಶಿವನನ್ನು ಪಡೆಯಲು ಅತ್ಯಂತ ಕಠಿಣ ತಪಸ್ಸನ್ನು ಕೈಗೊಂಡಳು. ಆದ್ದರಿಂದ ಈಕೆಯನ್ನು ಬ್ರಹ್ಮಚಾರಿಣೀ ಅಥವಾ ತಪಶ್ಚಾರಿಣೀ ಎಂದೂ ಕರೆಯುತ್ತಾರೆ. ಇಲ್ಲಿ ಬ್ರಹ್ಮ ಎಂದರೆ ತಪಸ್ಸು ಎಂದರ್ಥ. ಆಚರಣೀ ಎಂದರೆ ಕೈಗೊಂಡವಳು.

ಸಹಸ್ರ ವರ್ಷಗಳ ತಪಸ್ಸಿನಿಂದ ಈಕೆಯ ಶರೀರವೇನೋ ಕೃಶವಾಯಿತು. ಆದರೆ ಅದು ತಪಸ್ಸಿನಿಂದ ಜ್ಯೋತಿರ್ಮಯವಾಯಿತು, ಅತ್ಯಂತ ಪರಿಶುದ್ಧವಾಯಿತು. ಈಕೆಯ ತಪಸ್ಸಿನ ಪ್ರಭಾವದಿಂದಾಗಿ ಮೂರು ಲೋಕಗಳಲ್ಲೂ ಹಾಹಾಕಾರವುಂಟಾಯಿತು. ಆಗ ಸ್ವಯಂ ಬ್ರಹ್ಮದೇವನೇ ಪ್ರತ್ಯಕ್ಷನಾಗಿ, “ಹೇ ದೇವಿ! ಇಂದಿನವರೆಗೂ ಯಾರೂ ಇಂತಹ ಘೋರ ತಪಸ್ಸನ್ನು ಆಚರಿಸಿರಲಿಲ್ಲ. ಖಂಡಿತವಾಗಿಯೂ ನಿನ್ನ ಮನಸ್ಸಿನ ಅಭೀಷ್ಟ ನೆರವೇರುವುದು. ಶಿವನು ನಿನ್ನ ಪತಿಯಾಗುವನು. ಈಗ ನಿನ್ನ ತಪಸ್ಸನ್ನು ನಿಲ್ಲಿಸಿ, ಮನೆಗೆ ತೆರಳು” ಎಂದನು. ನಂತರ ಪರಶಿವನು ಶೈಲಜಳನ್ನು ವಿವಾಹವಾದನು.

Advertisement

ಈಕೆಯ ಪೂಜೆಯಿಂದ ಭಕ್ತಿ, ವೈರಾಗ್ಯಗಳು ಹೆಚ್ಚುತ್ತವೆ. ಯಶಸ್ಸು ಪ್ರಾಪ್ತವಾಗುತ್ತದೆ. ನವರಾತ್ರಿಯ ಎರಡನೇ ದಿವಸ ಸಾಧಕನು ಅವಳನ್ನು ಅರ್ಚಿಸಿದರೆ ಅವನ ಮನಸ್ಸು ಸ್ವಾಧಿಷ್ಠಾನ ಚಕ್ರದಲ್ಲಿ ನೆಲೆಗೊಳ್ಳುತ್ತದೆ. ದೇವಿಯ ಆಶೀರ್ವಾದದಿಂದ ಸಾಧಕನಿಗೆ ಸ್ಥಿರಬುದ್ಧಿಯು ಉಂಟಾಗುತ್ತದೆ ಎಂದು ತಂತ್ರಶಾಸ್ತ್ರಗಳು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next