Advertisement

ಈಶ್ವರ ದೇವಸ್ಥಾನದಲ್ಲಿ ಬಿಜೆಪಿಯಿಂದ ಪೂಜೆ

03:57 PM Dec 14, 2021 | Team Udayavani |

ರಾಯಚೂರು: ಕಾಶಿಯಲ್ಲಿ ಪ್ರಧಾನಿ ನರೇಂದ್ರ ಮೋದಿ “ದಿವ್ಯ ಕಾಶಿ ಭವ್ಯ ಕಾಶಿ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಹಿನ್ನೆಲೆಯಲ್ಲಿ ನಗರದ ಬಸವೇಶ್ವರ ಕಾಲೋನಿಯಲ್ಲಿ ಈಶ್ವರ ದೇವಸ್ಥಾನದಲ್ಲಿ ಬಿಜೆಪಿಯಿಂದ ಈಶ್ವರನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

Advertisement

ಕಾಶಿಯಿಂದ ನೇರ ಪ್ರಸಾರ ಕಾರ್ಯಕ್ರಮ ವೀಕ್ಷಿಸಿದ ಬಳಿಕ ನಗರ ಶಾಸಕ ಡಾ| ಶಿವರಾಜ್‌ ಪಾಟೀಲ್‌ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ದೇಶದ ಪವಿತ್ರ ಕ್ಷೇತ್ರಗಳ ಜೀರ್ಣೋದ್ಧಾರ ಕಾರ್ಯಕ್ಕೆ ಪಣ ತೊಟ್ಟಿರುವುದು ನಿಜಕ್ಕೂ ಶ್ಲಾಘನೀಯ. 12 ಜ್ಯೋತಿರ್ಲಿಂಗಗಳಲ್ಲಿ ಕಾಶಿ ಕೂಡ ಒಂದಾಗಿದ್ದು, ಇದು ಹಿಂದುಗಳ ಪವಿತ್ರ ಕ್ಷೇತ್ರವಾಗಿದೆ. ದೇವಸ್ಥಾನ ಅತ್ಯುನ್ನತ ರೀತಿಯಲ್ಲಿ ಪುನರುಜ್ಜೀವನ ಮಾಡುತ್ತಿರುವುದು ಒಳ್ಳೆಯ ನಿರ್ಧಾರ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೇವರು ಇನ್ನೂ ಆಯುರಾರೋಗ್ಯ ಕರುಣಿಸಲಿ ಎಂದು ಹಾರೈಸಿದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಎನ್‌. ಶಂಕ್ರಪ್ಪ ಮಾತನಾಡಿ, ಹಿಂದುಗಳು ಸಹಿಷ್ಣುಗಳು ಎನ್ನುವುದು ಇತಿಹಾಸ ತೆರದು ನೋಡಿದರೆ ತಿಳಿಯಲಿದೆ. ಹಿಂದುಗಳ ಮೇಲೆ ಸಾಕಷ್ಟು ದಾಳಿಗಳು ನಡೆದಿರುವ ಘಟನೆಗಳೇ ಇವೆ ವಿನಃ ಎಲ್ಲಿಯೂ ಹಿಂದೂಗಳೇ ದಾಳಿ ನಡೆಸಿದ ನಿದರ್ಶನಗಳಿಲ್ಲ. ಅಯೋಧ್ಯೆಯಲ್ಲಿಯೂ ರಾಮ ಮಂದಿರ ಶಾಂತಿಯುತವಾಗಿಯೇ ಮರುಸ್ಥಾಪಿಸಲಾಗುತ್ತಿದೆ. ಕಾಶಿಯಲ್ಲಿ ಬಹುಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿರುವುದು ಇಡೀ ದೇಶದ ಹಿಂದೂಗಳು ಗರ್ವ ಪಡುವ ವಿಷಯ. ಹಿಂದುಗಳ ಪವಿತ್ರ ಕ್ಷೇತ್ರದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮ ಬಹಳ ಮಹತ್ವ ಪಡೆದಿದೆ. ಇದೊಂದು ಅವಿಸ್ಮರಣೀಯ ದಿನ ಎಂದು ಬಣ್ಣಿಸಿದರು.

ಸೋಮವಾರಪೇಟೆ ಮಠದ ಶ್ರೀ ಅಭಿನವ ರಾಚೋಟಿ ವೀರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಈ ವೇಳೆ ಆರ್‌ ಡಿಎ ಅಧ್ಯಕ್ಷ ವೈ. ಗೋಪಾಲರೆಡ್ಡಿ, ಡಾ| ಶಿವಬಸಪ್ಪ ಮಾಲಿಪಾಟೀಲ್‌, ಬಿ. ಗೋವಿಂದ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next