Advertisement
ಡೆಂಗ್ಯೂ ಹರ ಡುವ ಈಡಿಸ್ ಸೊಳ್ಳೆ ಸ್ವತ್ಛ ನೀರಿನಲ್ಲಿ ಉತ್ಪತ್ತಿಯಾಗುತ್ತದೆ. 2 ದಿನಗಳಿಂದ ಮಳೆ ಕೂಡ ಬಿಡುವು ನೀಡಿ ಆಗಾಗ್ಗೆ ಬಿಟ್ಟು ಬಿಟ್ಟು ಸುರಿ ಯುತ್ತಿದೆ. ಇದೀಗ ಸೊಳ್ಳೆ ಉತ್ಪತ್ತಿಗೆ ಅನುಕೂಲಕರವಾದ ವಾತಾ ವರಣ ನಗರದಲ್ಲಿದೆ. ಈ ನಡುವೆ ನಗರದ ಅಲ್ಲಲ್ಲಿ ನೀರು ನಿಂತಿರುವುದು ಡೆಂಗ್ಯೂ ಆತಂಕಕ್ಕೆ ಕಾರಣವಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ನೀರು ನಿಲ್ಲುತ್ತಿರುವ ಬಗ್ಗೆ ಪಾಲಿಕೆ ಗಮನಕ್ಕೆ ತರಬೇಕು ಎಂದು ಪಾಲಿಕೆ ಹೇಳಿ ವಾರ ಕಳೆದಿದೆ. ಆದರೆ, ಸರಕಾರಿ ಕಚೇರಿ, ಕಾಮಗಾರಿ ಸ್ಥಳದಲ್ಲಿ ನೀರು ನಿಂತಿದ್ದು, ಅವರಿಗೆ ದಂಡ ಹಾಕುವವರು ಯಾರು? ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.
Related Articles
Advertisement
ದ. ಕ. ಜಿಲ್ಲೆಗೆ ಹೋಲಿಸಿದರೆ ಮಂಗಳೂರು ನಗರ ದಲ್ಲಿಯೇ ಡೆಂಗ್ಯೂ ಆತಂಕ ಹೆಚ್ಚಿದೆ. ಡೆಂಗ್ಯೂ ಜ್ವರ ನಿಯಂತ್ರ ಣಕ್ಕೆ ಪ್ರತೀ ಶುಕ್ರವಾರ ಲಾರ್ವಾ ಉತ್ಪತ್ತಿ ತಾಣಗಳನ್ನು ನಾಶಪಡಿಸುವ ಕಾರ್ಯಜಿಲ್ಲೆಯಾದ್ಯಂತ ನಡೆಯುತ್ತಿದೆ. ಸಾರ್ವ ಜನಿಕರು ತಮ್ಮ ಮನೆಗಳು, ಸರಕಾರಿ ಕಚೇರಿ, ಶಾಲಾ- ಕಾಲೇಜು ಗಳಲ್ಲಿ ಸಿಬಂದಿ ವರ್ಗದವರು ನೀರು ತುಂಬಿರುವ ಡ್ರಮ್, ಟ್ಯಾಂಕಿ, ಬ್ಯಾರಲ್ ಇತ್ಯಾದಿಗಳನ್ನು ಸ್ವತ್ಛಗೊಳಿಸಬೇಕು. ಅದೇ ರೀತಿ ಮಳೆ ನೀರು ನಿಲ್ಲುವ ತೊಟ್ಟಿ, ಹಳೆ ಟಯರ್ ಮತ್ತಿತರ ವಸ್ತುಗಳನ್ನು ವಿಲೇವಾರಿ ಮಾಡಬೇಕು, ಇದರಿಂದ ಸೊಳ್ಳೆಗಳ ಉತ್ಪತ್ತಿ ತಾಣ ನಾಶವಾಗಿ ಡೆಂಗ್ಯೂ ಜ್ವರವನ್ನು ನಿಯಂತ್ರಿಸಬಹುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.