ಮುಂಬಯಿ: ಎಲ್ಲರನ್ನೂ ಒಂದುಗೂಡಿಸಿ ಮಾಡುತ್ತಿರುವಂತಹ ಈ ಧಾರ್ಮಿಕ ಕಾರ್ಯ ಶ್ಲಾಘನೀಯ. ಕಳೆದ 25 ವರ್ಷಗಳಿಂದ ಎÇÉಾ ಸಮಾಜದವರನ್ನು ಒಂದುಗೂಡಿಸಿ ವರ್ಲಿಯ ಶ್ರೀ ಸಿದ್ದೇಶ್ವರ ಅನ್ನದಾತ ಅಪ್ಪಾಜಿ ಬೀಡು ಫೌಂಡೇಶನ್ ಕಾರ್ಯನಿರತವಾಗಿದ್ದು ಅಭಿನಂದನೀಯ. ನಮ್ಮ ಧರ್ಮದಲ್ಲಿ ನಮಗೆ ಎಷ್ಟು ವಿಶ್ವಾಸವಿದೆ ಎಂದು ಇಲ್ಲಿ ಕಾಣುತ್ತಿದೆ. ನಾವು ಯಾವ ಕುಲದಲ್ಲಿ ಜನಿಸಿದ್ದೇವೆ ಅದೇ ಕುಲದಲ್ಲಿ ಈಗಲೂ ನಾವಿದ್ದೇವೆ ಎಂಬುವುದನ್ನು ಇಂತಹ ಧಾರ್ಮಿಕ ಕಾರ್ಯದಿಂದ ಕಾಣಬಹುದು. ಇದೇ ರೀತಿ ಮುಂದುವರಿಸಿ ನಮ್ಮ ಮಕ್ಕಳ ಕೈಗೆ ಕೊಡೋಣ ಅದಕ್ಕಾಗಿ ದೇವರು ನಮಗೆಲ್ಲರಿಗೂ ಶಕ್ತಿ ನೀಡಲಿ ಎಂದು ಸಂಸದ ಗೋಪಾಲ್ ಶೆಟ್ಟಿ ಅವರು ನುಡಿದರು.
ಡಿ. 30 ರಂದು ದಾದರ್ ಪಶ್ಚಿಮ ಪರೇಲ್ ಕಾಮಾYರ್ ಮೈದಾನದಲ್ಲಿ ನಡೆದ ವರ್ಲಿಯ ಶ್ರೀ ಸಿದ್ದೇಶ್ವರ ಅನ್ನದಾತ ಅಪ್ಪಾಜಿ ಬೀಡು ಫೌಂಡೇಶನ್ ನ 25 ನೇ ವಾರ್ಷಿಕ ಶ್ರೀ ಅಯ್ಯಪ್ಪ ಸ್ವಾಮಿ ಮಂಡಲ ಪೂಜೆ ಹಾಗೂ ಬೆಳ್ಳಿಹಬ್ಬ ಸಂಭ್ರಮದ ಸಮಾರಂಭದಲ್ಲಿ ವಿಶೇಷ ಅತಿಥಿಯಾಗಿ ಆಗಮಿಸಿ ಮಾತನಾಡಿದ ಅವರು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆ ಕಡಿಮೆಯಾಗುತ್ತಿರುವುದು ವಿಷಾಧನೀಯ. ಮಕ್ಕಳನ್ನು ಕೇವಲ ಶಿಕ್ಷಣದೆಡೆಗೆ ಗುರಿಯಾಗಿಸದೆ ಅವರಿಗೆ ಸಂಸ್ಕೃತಿ-ಸಂಸ್ಕಾರದ ಅರಿವು ಮೂಡಿಸಲು ಇಂತಹ ಕಾರ್ಯಕ್ರಮಗಳಿಂದ ಮಾತ್ರ ಸಾಧ್ಯವಾಗಿದೆ ಎಂದರು.
ಅಪ್ಪಾಜಿ ಬೀಡು ಫೌಂಡೇಶನ್‌ನ ಟ್ರಷ್ಟಿ ಹಾಗೂ ಬೆಳ್ಳಿ ಹಬ್ಬ ಸಮಿತಿಯ ಅಧ್ಯಕ್ಷ ಬಿ. ದಿನೇಶ್ ಜಿ. ಕುಲಾಲ್ ಅವರು ಸಂಸದರಾದ ಗೋಪಾಲ ಶೆಟ್ಟಿ ಅವರನ್ನು ಗೌರವಿಸಿದರು. ಇದೇ ಸಂದರ್ಭದಲ್ಲಿ ಬಂಟರ ಸಂಘ ಮುಂಬಯಿಯ ನೂತನ ಶಿಕ್ಷಣ ಯೋಜನೆ ಸಮಿತಿಯ ಉಪಕಾರ್ಯಾಧ್ಯಕ್ಷ ಎರ್ಮಾಳ್ ಹರೀಶ್ ಶೆಟ್ಟಿ ಅವರನ್ನು ಗೌರವಿಸಲಾಯಿತು.
ಗೌರವ ಅತಿಥಿಗಳಾಗಿ ಆಗಮಿಸಿದ ಪೊವಾಯಿಯ ಶ್ರೀ ರುಂಡಮಾಲಿನ ದೇವಸ್ಥಾನದ ಶ್ರೀ ಸುವರ್ಣ ಬಾಬಾ, ಜನಪ್ರಿಯ ಜ್ಯೋತಿಷ್ಯ ಹಾಗೂ ಪುರೋಹಿತರಾದ ಡಾ| ಎಂ. ಜೆ. ಪ್ರವೀಣ್ ಭಟ್, ಜಾಗತಿಕ ಬಂಟ್ಸ್ ಅಸೋಸಿಯೇಶನ್ ಫೆಡರೇಶನ್ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಬಿಲ್ಲವರ ಅಸೋಷಿಯೇಶನ್ ಮುಂಬಯಿಯ ಅಧ್ಯಕ್ಷ ಚಂದ್ರಶೇಖರ ಎಸ್. ಪೂಜಾರಿ, ವಿಕೆ ಸಮೂಹ ಸಂಸ್ಥೆಯ ಸಿಎಂಡಿ ಕರುಣಾಕರ ಎಂ. ಶೆಟ್ಟಿ, ಹೊಟೇಲ್ ಕೃಷ್ಣ ಪ್ಯಾಲೇಸ್‌ನ ಸಿಎಂಡಿ ಕೃಷ್ಣ ವೈ. ಶೆಟ್ಟಿ, ಕ್ಲಾಸಿಕ್ ಗ್ರೂಪ್ ಆಫ್ ಹೊಟೇಲ್‌ನ ಸಿಎಂಡಿ ಸುರೇಶ್ ಕಾಂಚನ್, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಅಧ್ಯಕ್ಷರಾದ ತೋನ್ಸೆ ಜಯಕೃಷ್ಣ ಶೆಟ್ಟಿ, ಬಂಟ್ಸ್ ಸಂಘ ಪಡುಬಿದ್ರೆಯ ಮಾಜಿ ಅಧ್ಯಕ್ಷ ನವೀನ್ ಚಂದ್ರ ಜೆ. ಶೆಟ್ಟಿ ಪಡುಬಿದ್ರೆ, ಮಹೇಶ್ ಶೆಟ್ಟಿ ತೆÇÉಾರ್, ಬಂಟರ ಸಂಘ ಮುಂಬಯಿ ಸೋಶಿಯಲ್ ವೆಲ್ಫೆàರ್ ಸಮಿತಿಯ ಕಾರ್ಯಾಧ್ಯಕ್ಷ ಉಳೂ¤ರು ಮೋಹನ್‌ದಾಸ್ ಶೆಟ್ಟಿ, ಮುಲುಂಡ್ ಬಂಟ್ಸ್‌ನ ಉಪಾಧ್ಯಕ್ಷ ವಸಂತ ಪಲಿಮಾರ್, ಪುಣೆ ಬಂಟ್ಸ್ ಸಂಘದ ಅಧ್ಯಕ್ಷ ಇನ್ನ ಕುರ್ಕಿಬೆಟ್ಟು ಸಂತೋಷ್ ಶೆಟ್ಟಿ, ಬಂಟರ ಸಂಘ ಜ್ಞಾನ ಮಂದಿರದ ಕಾರ್ಯಾಧ್ಯಕ್ಷ ರವೀಂದ್ರನಾಥ ಭಂಡಾರಿ, ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಮುನಿಯಾಲು ಉದಯ ಶೆಟ್ಟಿ, ಅಡ್ವೆ ಕಾಂತಲಗುಟ್ಟು ಸುಧಾಕರ ವೈ. ಶೆಟ್ಟಿ, ವಿರಾರ್ ಹೊಟೇಲ್ ಎಂ. ಎಂ. ನ ಹರೀಶ್ ಶೆಟ್ಟಿ ಗುರ್ಮೆ, ಬೋಂಬೆ ಬಂಟ್ಸ್ ಅಸೋಸಿಯೇಶನಿನ ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸುರೇಂದ್ರ ಕೆ. ಶೆಟ್ಟಿ, ಪ್ರಭಾದೇವಿ ಉದ್ಯಮಿ ದೀಪಕ್ ರಾಮದೇವ್ ತ್ಯಾಗಿ, ಭಾರತ್ ಬ್ಯಾಂಕಿನ ನಿರ್ದೇಶಕ ಗಂಗಾಧರ ಜೆ. ಪೂಜಾರಿ, ಕುಲಾಲ ಸಂಘ ಮುಂಬಯಿ ಅಧ್ಯಕ್ಷ ದೇವದಾಸ ಎಲ್. ಕುಲಾಲ…, ಪುಣೆ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ಪುತ್ತೂರು, ಮೀರಾ-ಡಹಾಣು ಬಂಟ್ಸ್ ಇದರ ವಸಾಯಿ-ನಾಯಗಾಂವ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಅಶೋಕ ಕೆ. ಶೆಟ್ಟಿ, ಮಂಗಳೂರು ಶ್ರೀ ವೀರ ನಾರಾಯಣ ದೇವಸ್ಥಾನದ ಕಾರ್ಯಾಧ್ಯಕ್ಷ ಬಿ. ಪ್ರೇಮಾನಂದ ಕುಲಾಲ…, ಗುರುಪ್ರಸಾದ್ ಭಟ್, ಗಣೇಶ್ ಶೆಟ್ಟಿ ತೆಳ್ಳಾರ್, ರವಿ ದೇವಾಡಿಗ ಮೊದಲಾದವರನ್ನು ಶ್ರೀ ಕ್ಷೇತ್ರ ಒಡಿಯೂರು ಶ್ರೀಗಳು ಗೌರವಿಸಿದರು.
ವೇದಿಕೆಯಲ್ಲಿ ಶ್ರೀ ಸಿದ್ದೇಶ್ವರ ಅನ್ನದಾತ ಅಪ್ಪಾಜಿ ಬೀಡು ಫೌಂಡೇಶನ್‌ನ ಸ್ಥಾಪಕ ರಮೇಶ್ ಗುರುಸ್ವಾಮಿ, ಟ್ರಸ್ಟಿಗಳಾದ ಶಾಂಭವಿ ಆರ್. ಶೆಟ್ಟಿ, ರತ್ನಾಕರ ಜಿ. ಶೆಟ್ಟಿ, ರಘುನಾಥ ಎನ್. ಶೆಟ್ಟಿ, ಸುಧಾಕರ್ ಎನ್. ಶೆಟ್ಟಿ, ಪುಷ್ಪರಾಜ್ ಎಸ್. ಶೆಟ್ಟಿ, ರತ್ನಾಕರ ಆರ್. ಶೆಟ್ಟಿ, ಮೊಹನ್ ಟಿ. ಚೌಟ, ಟ್ರಷ್ಟಿ ಹಾಗೂ ಬೆಳ್ಳಿ ಹಬ್ಬ ಸಮಿತಿಯ ಅಧ್ಯಕ್ಷ ಬಿ. ದಿನೇಶ್ ಜಿ. ಕುಲಾಲ್ ಕಾರ್ಯಾಕಾರಿ ಸಮಿತಿಯ ಅಧ್ಯಕ್ಷ ಸುರೇಶ್ ಎಸ್. ಶೆಟ್ಟಿ ಕೇದಗೆ, ಟ್ರಸ್ಟಿ, ಪ್ರಧಾನ ಕಾರ್ಯದರ್ಶಿ ವಸಂತ ಕೆ. ಪೂಜಾರಿ, ಕೋಶಾಧಿಕಾರಿ ಹರೀಶ್ ಶೆಟ್ಟಿ ನಲ್ಲೂರು, ಉಪಾಧ್ಯಕ್ಷರಾದ ಸಂತೋಶ್ ವಿ. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಅಂದು ಮಧ್ಯಾಹ್ನ ನಗರದ ಸುಮಧುರ ಗಾಯಕ-ಗಣೇಶ್ ಎರ್ಮಾಳ್ ಹಾಗೂ ಸ್ಯಾಕೊÕàಫೋನ್ ವಾದಕ ದಿನೇಶ್ ಕೋಟ್ಯಾನ್ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಸನ್ಮಾನ ಕಾರ್ಯಕ್ರಮದಲ್ಲಿ ಬೆಳ್ಳಿ ಹಬ್ಬ ಸಮಿತಿಯ ಅಧ್ಯಕ್ಷ ಬಿ. ದಿನೇಶ್ ಜಿ. ಕುಲಾಲ್ ಎಲ್ಲರನ್ನೂ ಸ್ವಾಗತಿಸಿದರು. ಉಪಾಧ್ಯಕ್ಷರಾದ ಸಂತೋಶ್ ವಿ. ಶೆಟ್ಟಿ ವಂದಿಸಿದರು. ರಘುನಾಥ ಎನ್. ಶೆಟ್ಟಿ, ಅರ್ಪಿತಾ ಶೆಟ್ಟಿ, ಶಶಿಕಲಾ ಶೆಟ್ಟಿ, ಶಕುಂತಳ ಶೆಟ್ಟಿ ಮತ್ತು ಪ್ರಮೀಳಾ ವಿ. ಕುಲಾಲ್ ಕಾರ್ಯಕ್ರಮವನ್ನು ನಿರ್ವಹಿಸಿದರು.ಅಪ್ಪಾಜಿ ಬೀಡು ಫೌಂಡೇಶನ್‌ನ ಕಾರ್ಯಾಕಾರಿ ಸಮಿತಿಯ ಎÇÉಾ ಪದಾಧಿಕಾರಿಗಳು, ಸದಸ್ಯರು, ಬೆಳ್ಳಿ ಹಬ್ಬ ಸಮಿತಿಯ ಎÇÉಾ ಸದಸ್ಯರು, ಮಹಿಳಾ ವಿಭಾಗದ ಎÇÉಾ ಸದಸ್ಯರು ಹಾಗೂ ಭಕ್ತಾಭಿಮಾನಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಕುಣಿತ ಭಜನೆ ಸ್ಪರ್ಧೆ
ಈ ಸಂದರ್ಭದಲ್ಲಿ ಕುಣಿತ ಭಜನೆ ಸ್ಪರ್ಧೆ ನಡೆದಿದ್ದು ಶ್ರೀ ಮಾಣಿ ಸಿದ್ದೇಶ್ವರ ದೇವಸ್ಥಾನ ಭಜನಾ ಮಂಡಳಿ ಕುಂದಾಪುರ ಪ್ರಥಮ, ಶ್ರೀ ರಾಮ ಭಜನಾ ಮಂಡಳಿ ಸುರತ್ಕಲ್ ದ್ವಿತೀಯ, ಶ್ರೀ ಉಮಾಮಹೇಶ್ವರಿ ಭಜನಾ ತಂಡ ಮುಂಬಯಿ, ಶ್ರೀ ರಾಮ ಭಜನಾ ಮಂಡಳಿ ಬಟ್ಟೆಕುದ್ರು ಮತ್ತು ಅಗಸ್ತೇಶ್ವರ ಭಜನಾ ತಂಡ ಮಟ್ಟಿ ಕುದುರು ಸಮಾಧಾನಕರ ಬಹುಮಾನ ಪಡೆಯಿತು. ಸ್ಪರ್ಧೆಯ ತೀರ್ಪುಗಾರರಾಗಿ ವೀಣಾ ಶಾಸ್ತ್ರಿ, ಗೀತಾ ಎಸ್. ಭಟ್ ಮತ್ತು ಪದ್ಮನಾಭ ಸಸಿಹಿತ್ಲು$ಸಹಕರಿಸಿದರು.
ಚಿತ್ರ -ವರದಿ : ಈಶ್ವರ M L