ಟೋಕಿಯೋ: ಜಗತ್ತಿನ ಅತ್ಯಂತ ಹಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆ ಗಳಿಸಿರುವ ಜಪಾನ್‌ನ 119 ವರ್ಷ ವಯಸ್ಸಿನ ಅಜ್ಜಿ ಸೋಮವಾರ ಕೊನೆಯುಸಿರೆಳೆದಿದ್ದಾರೆ.
ರೈಟ್ ಸಹೋದರರು ತಮ್ಮ ಮೋಟಾರುಚಾಲಿತ ವಿಮಾನವನ್ನು ಮೊದಲ ಬಾರಿಗೆ ಹಾರಾಟ ನಡೆಸಿದ್ದ ವರ್ಷವೇ ಅಂದರೆ, 1903ರ ಜನವರಿ 2ರಂದು ಕೇನ್ ಟನಾಕಾ ಅವರು ಜನಿಸಿದ್ದರು.
ಅವರು ಜಗತ್ತಿನಲ್ಲಿ ಬದುಕುಳಿದಿರುವ ಅತ್ಯಂತ ಹಿರಿಯ ವ್ಯಕ್ತಿ ಎಂದು 2019ರಲ್ಲಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಸಂಸ್ಥೆ ಘೋಷಿಸಿತ್ತು.
ಫುಕುವೋಕಾ ನಗರದ ಆಸ್ಪತ್ರೆಯಲ್ಲಿ ವಯೋಸಹಜ ಕಾಯಿಲೆಯಿಂದಾಗಿ ಟನಾಕಾ ಅವರು ಕೊನೆಯುಸಿರೆಳೆದರು ಎಂದು ಜಪಾನ್ ಮಾಧ್ಯಮಗಳು ವರದಿ ಮಾಡಿವೆ.
ಜಪಾನ್ ಅತ್ಯಂತ ಹಿರಿವಯಸ್ಸಿನವರು ಹೆಚ್ಚಿರುವಂಥ ದೇಶವಾಗಿದ್ದು, ಪ್ರಸ್ತುತ 100 ವರ್ಷ ದಾಟಿದ 86,510 ಮಂದಿ ಇಲ್ಲಿದ್ದಾರೆ.
ಇದನ್ನೂ ಓದಿ : ಪೊಲೀಸ್ ದೌರ್ಜನ್ಯ ಆರೋಪ ಪ್ರಕರಣ : ಬಜಪೆ ಇನ್ಸ್‌ಪೆಕ್ಟರ್ ಸಹಿತ ಮೂವರು ಸಿಬಂದಿ ಅಮಾನತು