Advertisement

ಕೋವಿಡ್‌ ಗೆ ತುತ್ತಾಗಿ ಬದುಕಿ ಬಂದ ವಿಶ್ವದ ಹಿರಿಯ ಮಹಿಳೆ ಇನ್ನಿಲ್ಲ

09:26 AM Jan 18, 2023 | Team Udayavani |

ಪ್ಯಾರಿಸ್:‌ ವಿಶ್ವದ ಹಿರಿಯ ಮಹಿಳೆ ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದ ಫ್ರೆಂಚ್ ಸನ್ಯಾಸಿನಿ ಲುಸಿಲ್ ರಾಂಡನ್ ಮಂಗಳವಾರ ಫ್ರಾನ್ಸ್‌ನ ಟೌಲೋನ್ ನಗರದಲ್ಲಿ 118 ನೇ ವಯಸ್ಸಿನಲ್ಲಿ ನಿಧನರಾದರು.

Advertisement

ರಾಂಡನ್ ನಿಧನದ ಸುದ್ದಿಯನ್ನು ಅವರ ವಕ್ತಾರ ಡೇವಿಡ್ ತವೆಲ್ಲಾ ಅವರು ಹೇಳಿದ್ದಾರೆ.

ರಾಂಡನ್ ಮಂಗಳವಾರ ಬೆಳಗಿನ ಜಾವ 2 ಗಂಟೆಗೆ ನಿಧನರಾದರು. “ಅತ್ಯಂತ ದುಃಖವಿದೆ, ಆದರೆ ಅದು ಸಂಭವಿಸಬೇಕೆಂದು ಅವಳು ಬಯಸಿದ್ದಳು, ಅವಳಿಗೆ  ತನ್ನ ಪ್ರೀತಿಯ ಸಹೋದರನನ್ನು ಸೇರುವ ಬಯಕೆಯಾಗಿತ್ತು. ಅವಳಿಗೆ ಅದು ಸ್ವಾತಂತ್ರ್ಯ” ಎಂದು ತವೆಲ್ಲಾ ಹೇಳಿದ್ದಾರೆ.

ಕಳೆದ ವರ್ಷ 119 ವರ್ಷ ವಯಸ್ಸಿನ ಜಪಾನ್‌ನ ಕೇನ್ ತನಕಾ ಅವರ ನಿಧನದ ಬಳಿಕ ಲುಸಿಲ್ ರಾಂಡನ್ ಅವರು ವಿಶ್ವದ ಹಿರಿಯ ಮಹಿಳೆ ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದರು.

ಆ್ಯಂಡ್ರೆ ಎನ್ನುವ ಹೆಸರಿನಿಂದಲೂ ರಾಂಡನ್ ಅವರನ್ನು ಕರೆಯಲಾಗುತ್ತಿತ್ತು. 1904 ರಲ್ಲಿ ಹುಟ್ಟಿದ ರಾಂಡನ್ ಅವರು 1918 ರಲ್ಲಿ ಭೀಕರ ಸಾಂಕ್ರಾಮಿಕ ಸ್ಪ್ಯಾನಿಷ್ ಫ್ಲ್ಯೂ ,ಎರಡು ವಿಶ್ವ ಯುದ್ಧಗಳನ್ನು ಕಂಡಿದ್ದರು.

Advertisement

ರಾಂಡನ್ 19 ವರ್ಷದಲ್ಲಿರುವಾಗ ಕ್ಯಾಥೊಲಿಕ್ ಧರ್ಮಕ್ಕೆ ಮತಾಂತರಗೊಂಡು, ಎಂಟು ವರ್ಷಗಳ ನಂತರ ಸನ್ಯಾಸಿಯಾದರು. ಶಿಕ್ಷಕ್ಷಿಯಾಗಿ, ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಮಕ್ಕಳನ್ನು ನೋಡಿಕೊಳ್ಳುತ್ತಿದ್ದರು.

2021 ರಲ್ಲಿ ರಾಂಡನ್‌ ಅವರಿಗೆ ಕೋವಿಡ್‌ ಸೋಂಕು ಕೂಡ ಕಾಣಿಸಿಕೊಂಡಿತ್ತು. ಈ ವೇಳೆ ಅವರ ಜೊತೆಯಲ್ಲಿದ್ದ ಕೆಲವರು ಮೃತಪಟ್ಟಿದ್ದರು. ಆಗ ಮಾಧ್ಯಮವೊಂದು ಅವರ ಬಳಿ ನಿಮಗೆ ಕೋವಿಡ್‌ ನಿಂದ ಭಯವಾಗಲಿಲ್ಲವೇ? ಎಂದಾಗ ಇಲ್ಲ ನಾನು ಕೋವಿಡ್‌ ಗೆ ಭಯಪಟ್ಟಿಲ್ಲ, ಏಕಂದರೆ ನಾನು ಸಾಯಲು ಭಯಪಡಲ್ಲ ಎಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next