Advertisement

ವಿಶ್ವದ ಅತ್ಯಂತ ಹಳೆಯ ಗಂಡು ಪಾಂಡಾ ಅನ್ ಅನ್ ಇನ್ನಿಲ್ಲ

03:48 PM Jul 21, 2022 | Team Udayavani |

ಹಾಂಗ್ ಕಾಂಗ್ : ತನ್ನ ತಮಾಷೆಯ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದ ವಿಶ್ವದ ಅತ್ಯಂತ ಹಳೆಯ ದೈತ್ಯ ಗಂಡು ಪಾಂಡಾ ಸಾವನ್ನಪ್ಪಿದೆ.

Advertisement

ಹಾಂಗ್ ಕಾಂಗ್‌ನ ಓಷನ್ ಪಾರ್ಕ್‌ನಲ್ಲಿ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದ ಅನ್ ಅನ್ ಎಂಬ ಹೆಸರಿನ 35 ವರ್ಷ ವಯಸ್ಸಿನ ಪಾಂಡಾ ಮರಣಹೊಂದಿದೆ. ವಯೋ ಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಪಾಂಡಾ  ಮರಣದ ಬಳಿಕ ಜಗತ್ತಿನಲ್ಲಿ ಸುದ್ದಿಯಾಗಿದೆ. ಸಾಮಾನ್ಯವಾಗಿ ಪಾಂಡಾಗಳ ಆಯಸ್ಸು 30 ರಿಂದ 32 ವರ್ಷ ಆಗಿದೆ.

1999 ರಲ್ಲಿ ಚೀನಾ ಸರ್ಕಾರದಿಂದ ಅನ್ ಅನ್ ಅನ್ನು ಅದರ ಸಂಗಾತಿ ಜಿಯಾ ಜಿಯಾ ಜತೆಗೆ ಹಾಂಗ್ ಕಾಂಗ್‌ಗೆ ಉಡುಗೊರೆಯಾಗಿ ನೀಡಲಾಗಿತ್ತು. 2016 ರಲ್ಲಿ ಅತ್ಯಂತ ಹಳೆಯ ಹೆಣ್ಣು ಪಾಂಡಾ ಎನಿಸಿಕೊಂಡಿದ್ದ ಸಂಗಾತಿ ಜಿಯಾ ಜಿಯಾ 38 ನೇ ವಯಸ್ಸಿನಲ್ಲಿಸಾವನ್ನಪ್ಪಿದ್ದಳು.

ಯಿಂಗ್ ಯಿಂಗ್ ಮತ್ತು ಲೆ ಲೆ ಎಂಬ ಇನ್ನೂ ಎರಡು ಪಾಂಡಾಗಳು ಓಷನ್ ಪಾರ್ಕ್ ಮೃಗಾಲಯದಲ್ಲಿ ಉಳಿದಿವೆ.

Advertisement

Udayavani is now on Telegram. Click here to join our channel and stay updated with the latest news.

Next