Advertisement
ಈ ಹಿನ್ನೆಲೆಯಲ್ಲಿ, ಲಾಹೋರ್‌ನಲ್ಲಿ “ಹಸಿರು ಲಾಕ್‌ಡೌನ್’ ಮಾಡಲಾಗಿದ್ದು, ಶೇ.50ರಷ್ಟು ಉದ್ಯೋಗಿಗಳಿಗೆ ವರ್ಕ್ ಫÅಮ್ ಹೋಮ್ ನೀಡಲಾಗಿದೆ. 5ನೇ ತರಗತಿ ವರೆಗೆ ಎಲ್ಲಾ ಶಾಲೆಗಳಿಗೆ ಒಂದು ವಾರ ರಜೆ ಘೋಷಿಸಲಾಗಿದೆ. ಮಾಸ್ಕ್ ಕಡ್ಡಾಯಗೊಳಿಸಲಾಗಿದ್ದು, ಅನವಶ್ಯ ಕವಾಗಿ ಪ್ರಯಾಣಿಸದಂತೆ ಸೂಚಿಲಾಗಿದೆ. ತ್ರಿಚಕ್ರ ವಾಹನ(ರಿಕ್ಷಾ)ಗಳ ಓಡಾಟಕ್ಕೆ ನಿಷೇಧ ಹೇರಲಾಗಿದೆ. ಆಸ್ಪತ್ರೆಗಳಲ್ಲಿ ಸ್ಮಾಗ್ ಕೌಂಟರ್‌ಗಳನ್ನು ಸ್ಥಾಪಿಸಲಾಗಿದೆ.
ಲಾಹೋರ್ ಮಾಲಿನ್ಯಕ್ಕೆ ಭಾರತದಿಂದ ಬೀಸುತ್ತಿರುವ ಗಾಳಿ ಕಾರಣ ಎಂದು ಪಂಜಾಬ್ ಪ್ರಾಂತ್ಯದ ಸಚಿವೆ ಮರಿಯಮ್ ಔರಂಗಜೇಬ್ ಆರೋಪಿಸಿದ್ದಾರೆ. ಈ ಬಗ್ಗೆ ವಿದೇಶಾಂಗ ಸಚಿವಾಲಯದ ಮೂಲಕ ಭಾರತದೊಂದಿಗೆ ಮಾತುಕತೆ ನಡೆಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದಿದ್ದಾರೆ. ಜತೆಗೆ, ದಿಲ್ಲಿಯಲ್ಲಿ ಸೋಮವಾರ ಎಕ್ಯೂಐ 373ರೊಂದಿಗೆ “ಅತಿ ಕಳಪೆ’ ಮಟ್ಟಕ್ಕೆ ತಲುಪಿದೆ.