Advertisement

ಮನಾಲಿ ಟು ಲೇಹ್: ಜಗತ್ತಿನ ಅತೀ ಉದ್ದದ ಅಟಲ್ ಸುರಂಗ ಮಾರ್ಗ- ಏನಿದರ ವಿಶೇಷತೆ

04:22 PM Sep 16, 2020 | Nagendra Trasi |

ಮನಾಲಿ(ಹಿಮಾಚಲ್ ಪ್ರದೇಶ):ಪ್ರಾಕೃತಿಕ ಸೌಂದರ್ಯದ ಮನಾಲಿ,ಲೇಹ್ ಅನ್ನು ಸಂಪರ್ಕಿಸುವ ವಿಶ್ವದ ಅತೀ ಉದ್ದದ ಅಟಲ್ ಸುರಂಗ ಮಾರ್ಗದ ಹೆದ್ದಾರಿ ಕಾಮಗಾರಿ ಹತ್ತು ವರ್ಷಗಳ ಅವಧಿಯಲ್ಲಿ ಪೂರ್ಣಗೊಂಡಿರುವುದಾಗಿ ವರದಿ ತಿಳಿಸಿದೆ.

Advertisement

ಸುಮಾರು ಹತ್ತು ಸಾವಿರ ಅಡಿ ಉದ್ದದ ಹೆದ್ದಾರಿ ಸುರಂಗ ಮಾರ್ಗ ಈ ಮೊದಲಿನ ಅಂದಾಜಿನ ಪ್ರಕಾರ ಆರು ವರ್ಷಗಳಲ್ಲಿ ಪೂರ್ಣಗೊಳ್ಳಬೇಕಿತ್ತು. ಇದೀಗ ಬರೋಬ್ಬರಿ ಹತ್ತು ವರ್ಷಗಳ ನಂತರ ಸುರಂಗ ಮಾರ್ಗ ಪೂರ್ಣಗೊಂಡಿದ್ದು, ಇದು 9.2 ಕಿಲೋ ಮೀಟರ್ ದೂರ ಹೊಂದಿದೆ ಎಂದು ವರದಿ ವಿವರಿಸಿದೆ.

ಅಟಲ್ ಸುರಂಗ ಇದು ಮನಾಲಿ ಮತ್ತು ಲೇಹ್ ಅನ್ನು ಸಂಪರ್ಕಿಸಲಿದ್ದು, ವಿಶ್ವದ ಅತೀ ಉದ್ದದ ಹೆದ್ದಾರಿ ಸುರಂಗ ಮಾರ್ಗವಾಗಿದೆ. ಪ್ರತಿ 60 ಮೀಟರ್ ಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ, ಸುರಂಗದ ಒಳಮಾರ್ಗದ ಪ್ರತಿ 500 ಮೀಟರ್ ಅಂತರದಲ್ಲಿ ತುರ್ತು ಸುರಂಗ ಮಾರ್ಗ ಕೊರೆಯಲಾಗಿದೆ ಎಂದು ಮುಖ್ಯ ಇಂಜಿನಿಯರ್ ಕೆಪಿ ಪುರುಷೋತ್ತಮನ್ ವಿವರಿಸಿದ್ದಾರೆ.

ಇದನ್ನೂ ಓದಿ: ನಮಗೆ ಪಾಠ ಮಾಡೋ ಅಗತ್ಯವಿಲ್ಲ: ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಭಾರತ ತಕ್ಕ ತಿರುಗೇಟು

ಈ ಸುರಂಗ ಮಾರ್ಗದಿಂದಾಗಿ ಮನಾಲಿ ಮತ್ತು ಲೇಹ್ ನಡುವೆ 46 ಕಿಲೋ ಮೀಟರ್ ಗಳಷ್ಟು ದೂರವನ್ನು ಕಡಿಮೆಗೊಳಿಸಿದೆ. ಅಲ್ಲದೇ ನಾಲ್ಕು ಗಂಟೆಗಳ ಅವಧಿ ಪ್ರಯಾಣಿಕರಿಗೆ ಉಳಿತಾಯವಾಗಲಿದೆ ಎಂದು ತಿಳಿಸಿದ್ದಾರೆ.

Advertisement

ಒಂದು ವೇಳೆ ಸುರಂಗ ಮಾರ್ಗದಲ್ಲಿ ಆಕಸ್ಮಿಕವಾಗಿ ಅಗ್ನಿ ಅನಾಹುತ ಸಂಭವಿಸಿದರೆ ಮುನ್ನೆಚ್ಚರಿಕೆ ಕ್ರಮವಾಗಿ ಫೈರ್ ಹೈಡ್ರಾಂಟ್ಸ್ ಅಳವಡಿಸಲಾಗಿದೆ. ಸುರಂಗ ಮಾರ್ಗದ ಕಾಮಗಾರಿ ತುಂಬಾ ಕಷ್ಟದ ಟಾಸ್ಕ್ ಆಗಿತ್ತು. ನಾವು ಹಲವು ಸಮಸ್ಯೆಗಳನ್ನು ಎದುರಿಸಿದ್ದೇವು. ಆದರೂ ನಾವೆಲ್ಲ ಒಗ್ಗಟ್ಟಾಗಿ ಕೆಲಸ ಮಾಡಿದ್ದರಿಂದ ಸುರಂಗ ಮಾರ್ಗದ ಕಾಮಗಾರಿ ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗಿದ್ದೇವೆ. ಈ ಸುರಂಗ ಮಾರ್ಗ 10.5 ಮೀಟರ್ ಗಳಷ್ಟು ಅಗಲ ಹೊಂದಿದೆ. ಅಲ್ಲದೇ ಎರಡೂ ಕಡೆಗಳಲ್ಲಿ ಒಂದು ಮೀಟರ್ ನ ಫೂಟ್ ಪಾತ್ ಇದ್ದಿರುವುದಾಗಿ ಪುರುಷೋತ್ತಮನ್ ತಿಳಿಸಿದ್ದಾರೆ.

ಎಎನ್ ಐ ಜತೆ ಮಾತನಾಡಿದ ಅಟಲ್ ಸುರಂಗ ಮಾರ್ಗ ಯೋಜನೆಯ ನಿರ್ದೇಶಕ, ಕರ್ನಲ್ ಪರೀಕ್ಷಿತ್ ಮೆಹ್ರಾ ಸುರಂಗಮಾರ್ಗದ ಕಾಮಗಾರಿಯಲ್ಲಿ ಹಲವಾರು ತಜ್ಞರು ಕಾರ್ಯನಿರ್ವಹಿಸಿದ್ದರು. ಅವರ ಮಾಹಿತಿ ಮೇರೆಗೆ ಕೆಲವು ಬದಲಾವಣೆ ಮಾಡಲಾಗಿತ್ತು ಎಂದು ಹೇಳಿದರು.

ಇದೊಂದು ತುಂಬಾ ಕ್ಲಿಷ್ಟಕರವಾದ ಯೋಜನೆಯಾಗಿತ್ತು. ಇದಕ್ಕೆ ಎರಡು ಕೊನೆಗಳಿದ್ದವು. ಮತ್ತೊಂದು ಉತ್ತರ ಭಾಗದ ಪ್ರವೇಶ ದ್ವಾರ..ಇದು ರೋಹ್ಟಾಂಗ್ ಪಾಸ್ ಸುತ್ತುವರಿದಿದ್ದು, ವರ್ಷದಲ್ಲಿ ಕೇವಲ ಐದು ತಿಂಗಳಷ್ಟೇ ನಮಗೆ ಕಾರ್ಯ ನಿರ್ವಹಿಸಲು ಲಭ್ಯವಾಗುತ್ತಿತ್ತು ಎಂದು ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next