Advertisement

ವಿಶ್ವದ ಏಕಾಂಗಿ ಸೀಬರ್ಡ್‌ ಸಾವು

08:15 AM Feb 08, 2018 | Team Udayavani |

ವೆಲ್ಲಿಂಗ್ಟನ್‌: ಒಬ್ಬನೇ ಒಬ್ಬ ಜೊತೆಗಾರನನ್ನೂ, ಜತೆಗಾತಿಯನ್ನೂ ಹೊಂದಿರದೇ ಏಕಾಂಗಿಯಾಗಿದ್ದ “ನೋ ಮೇಟ್ಸ್‌ ನಿಗೆಲ್‌’ ಖ್ಯಾತಿಯ ಸೀಬರ್ಡ್‌ ಗಣಕ್ಕೆ ಸೇರಿದ ಗಾನೆಟ್‌ ಹಕ್ಕಿ ಕೊನೆಯುಸಿರೆಳೆದಿದೆ.  ನ್ಯೂಜಿಲೆಂಡ್‌ನ‌ ವೆಲ್ಲಿಂಗ್ಟನ್‌ ಕರಾವಳಿಗೆ ಹೊಂದಿಕೊಂಡಿರುವ ಮನಾ ದ್ವೀಪದಲ್ಲಿ ಕಳೆದೊಂದು ವರ್ಷದಿಂದ ಯಾವ ಪಕ್ಷಿ ಗುಂಪಿನ ಜತೆ ಸೇರದೆ  ಒಂಟಿಯಾಗಿ ವಾಸವಿದ್ದ ಮುದ್ದಾದ ಈ ಪಕ್ಷಿಯ ಸಾವು ವನ್ಯಜೀವಿಗಳ ಕಣ್ಣುಗಳನ್ನು ಒದ್ದೆಯಾಗಿಸಿದೆ. ಬಹುದಿನಗಳ ಕಾಲ ಈ ಪಕ್ಷಿಯ ಜತೆಗೇ ಇದ್ದು, ಅದರ ಚಲನವಲನ ಅಧ್ಯಯನ ನಡೆಸಿದ ವನ್ಯಜೀವಿ ಅಧ್ಯಯನ ಇಲಾಖೆ ವಲಯ ಅರಣ್ಯಾಧಿಕಾರಿ ಕ್ರಿಸ್‌ ಬೆಲ್‌, ಕೆಲದಿನಗಳ ಹಿಂದೆಯೇ ಸಾವು ಕಂಡಿದೆ ಎನ್ನುವುದನ್ನು ಖಚಿತಪಡಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next