Advertisement

Neil Wagner Retire: ನ್ಯೂಜಿಲ್ಯಾಂಡ್‌ನ‌ ವೇಗಿ ವ್ಯಾಗ್ನರ್‌ ನೀಲ್‌ ವಿದಾಯ…

10:27 AM Feb 28, 2024 | Team Udayavani |

ವೆಲ್ಲಿಂಗ್ಟನ್‌ : ನ್ಯೂಜಿಲ್ಯಾಂಡ್‌ನ‌ ವೇಗದ ಬೌಲರ್‌ ನೀಲ್‌ ವ್ಯಾಗ್ನರ್‌ ತಮ್ಮ 12 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್‌ ಬಾಳ್ವೆಯನ್ನು ಕೊನೆಗೊಳಿಸಿದ್ದಾರೆ. ಅವರು ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ತಮ್ಮ ವಿದಾಯವನ್ನು ಘೋಷಿಸಿದರು.

Advertisement

ಫೆ. 29ರಂದು ಆರಂಭವಾಗಲಿರುವ ಆಸ್ಟ್ರೇಲಿಯ ವಿರುದ್ಧದ ಟೆಸ್ಟ್‌ ಸರಣಿಗಾಗಿ ನೀಲ್‌ ವ್ಯಾಗ್ನರ್‌ ಅವರನ್ನು ಆರಿಸಲಾಗಿತ್ತು. ಆದರೆ ನಡುವಲ್ಲೇ ನಿವೃತ್ತಿ ಘೋಷಿಸಿ ಅಚ್ಚರಿ ಹುಟ್ಟಿಸಿದರು. ಅವರನ್ನೀಗ ಟೆಸ್ಟ್‌ ತಂಡದಿಂದ ಬಿಡುಗಡೆಗೊಳಿಸಲಾಗಿದೆ.

“ಟೆಸ್ಟ್‌ ಕ್ರಿಕೆಟಿನ ಪ್ರತಿಯೊಂದು ಕ್ಷಣವನ್ನೂ ನಾನು ಆನಂದಿಸಿದ್ದೇನೆ. ಆದರೆ ಕ್ರಿಕೆಟ್‌ ನಂಟನ್ನು ಕಡಿದುಕೊಳ್ಳುವುದು ಸುಲಭವಲ್ಲ. ನೀವು ನೀಡಿರುವ ಬೆಂಬಲ, ಇದರಿಂದ ಸಿಕ್ಕಿರುವ ಪ್ರೀತಿಯಿಂದ ದೂರ ಸರಿಯುವುದು ಸುಲಭವಲ್ಲ. ನಾನಿಂದು ತೀವ್ರ ಭಾವುಕನಾಗಿದ್ದೇನೆ. ಹೊಸಬರಿಗೆ ಜಾಗ ಬಿಟ್ಟುಕೊಡಲು ಇದೇ ಸೂಕ್ತ ಸಮಯ ಎಂದು ನಿರ್ಧರಿಸಿದ್ದೇನೆ. ಹೊಸಬರು ಕೂಡ ದೇಶದ ಪರ ಆಡಬೇಕಿದೆ’ ಎಂಬುದಾಗಿ ನೀಲ್‌ ವ್ಯಾಗ್ನರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next