ಭೋಪಾಲ್: ವಾಹನಗಳ ಬಿಡಿಭಾಗಗಳು ಮತ್ತು ಸ್ಕ್ರ್ಯಾಪ್ ಗಳನ್ನು ಬಳಸಿ ಆರು ತಿಂಗಳ ಪರಿಶ್ರಮದಿಂದ ಮಧ್ಯ ಪ್ರದೇಶದ ಕಲಾವಿದರ ತಂಡವೊಂದು ವಿಶ್ವದ ಅತೀ ದೊಡ್ಡ ರುದ್ರ ವೀಣೆಯನ್ನು ತಯಾರಿ ಮಾಡಿದೆ.
ಭಾರತೀಯ ಸಂಸ್ಕೃತಿಯ ಬಗ್ಗೆ ಹೊಸ ಪೀಳಿಗೆಯಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಕಲಾವಿದರು ಈ ಬೃಹತ್ ವೀಣೆ ತಯಾರಿ ಮಾಡಿದ್ದಾರೆ.
28 ಅಡಿ ಉದ್ದ, 10 ಅಡಿ ಅಗಲ ಮತ್ತು 12 ಅಡಿ ಎತ್ತರದ ವೀಣೆಯನ್ನು ಈ ಕಲಾವಿದರು ತಯಾರಿಸಿದ್ದಾರೆ. ಇದಕ್ಕಾಗಿ ಸುಮಾರು 10 ಲಕ್ಷ ರೂ ಖರ್ಚು ಮಾಡಿದ್ದಾರೆ. ಇದು ವಿಶ್ವದಲ್ಲೆ ಅತೀ ದೊಡ್ಡ ರುದ್ರ ವೀಣಾ ಎಂದು ತಂಡ ಹೇಳಿಕೊಂಡಿದೆ.
ಇದನ್ನೂ ಓದಿ:ಪ್ರೊ ಕಬಡ್ಡಿ: ಇಂದು ಜೈಪುರ್ ಫ್ಯಾಂಥರ್-ಪುನೇರಿ ಪಲ್ಟಾನ್ ನಡುವೆ ಫೈನಲ್
ರುದ್ರ ವೀಣೆಯು ಚೈನ್, ಗೇರ್, ಬಾಲ್-ಬೇರಿಂಗ್, ವೈರ್ ಮುಂತಾದ ವಾಹನಗಳ ಅವಶೇಷಗಳಿಂದ ಮಾಡಲ್ಪಟ್ಟಿದೆ. ಒಟ್ಟು 15 ಕಲಾವಿದರು ಇದರ ವಿನ್ಯಾಸ, ತುಣುಕುಗಳ ಸಂಗ್ರಹಣೆ ಮತ್ತು ವಿಶಿಷ್ಟವಾದ ವೀಣೆ ತಯಾರಿಸುವಲ್ಲಿ ತೊಡಗಿದ್ದರು.
‘ಕಬಾದ್ ಸೆ ಕಾಂಚನ್’ ವಿಷಯದ ಮೇಲೆ ವೀಣೆಯನ್ನು ಸಿದ್ಧಪಡಿಸಲಾಗಿದೆ. ಒಟ್ಟು 15 ಕಲಾವಿದರು ವಿನ್ಯಾಸ, ಸ್ಕ್ರ್ಯಾಪ್‌ಗಳನ್ನು ಸಂಗ್ರಹಿಸಿದರು ಮತ್ತು ಆರು ತಿಂಗಳ ಕಾಲ ಅದನ್ನು ತಯಾರಿಸಿದರು ಮತ್ತು ಅಂತಿಮವಾಗಿ ಕಸದಿಂದ ಮಾಡಿದ ದೊಡ್ಡ ವೀಣೆಯನ್ನು ಸಿದ್ಧಪಡಿಸಲಾಯಿತು” ಎಂದು ಕಲಾವಿದರಲ್ಲಿ ಒಬ್ಬರಾದ ಪವನ್ ದೇಶಪಾಂಡೆ ಎಎನ್ಐ ಗೆ ತಿಳಿಸಿದ್ದಾರೆ.