Advertisement

ವಿಶ್ವದ ಅತಿ ಎತ್ತರದ ಇವಿ ಚಾರ್ಜಿಂಗ್‌ ಕೇಂದ್ರ

11:05 AM Sep 25, 2021 | Team Udayavani |

ಶಿಮ್ಲಾ: ದೇಶದಲ್ಲಿ ವಿದ್ಯುತ್‌ಚಾಲಿತ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿರುವಂತೆಯೇ ಅಲ್ಲಲ್ಲಿ ಚಾರ್ಜಿಂಗ್‌ ಕೇಂದ್ರಗಳೂ ತೆರೆಯಲಾರಂಭಿಸಿವೆ. ಹಾಗೆಯೇ ಹಿಮಾಚಲ ಪ್ರದೇಶದ ಲಾಹಾಲ್‌ ಮತ್ತು ಸ್ಪಿತಿ ಜಿಲ್ಲೆಯ ಕಾಜಾ ಪ್ರದೇಶದಲ್ಲಿ ವಿಶ್ವದ ಅತ್ಯಂತ ಎತ್ತರದ ಚಾರ್ಜಿಂಗ್‌ ಕೇಂದ್ರವನ್ನು ಸ್ಥಾಪಿಸಲಾಗಿದೆ.

Advertisement

ಕಾಜಾದಲ್ಲಿ 500 ಅಡಿ ಎತ್ತರದಲ್ಲಿ ಚಾರ್ಜಿಂಗ್‌ ಕೇಂದ್ರ ನಿರ್ಮಿಸಲಾಗಿದೆ. ಈ ಪ್ರದೇಶಕ್ಕೆ ಇದು ಮೊದಲನೇ ಚಾರ್ಜಿಂಗ್‌ ಕೇಂದ್ರವಾಗಿದ್ದು, ಒಳ್ಳೆಯ ಸ್ಪಂದನೆ ಸಿಕ್ಕರೆ ಇನ್ನಷ್ಟು ಕೇಂದ್ರಗಳನ್ನು ತೆರೆಯಲಾಗುವುದು ಎಂದು ಕಾಜಾ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್‌ ಮಹೇಂದ್ರ ಪ್ರತಾಪ್‌ ಸಿಂಗ್‌ ತಿಳಿಸಿದ್ದಾರೆ.

ಇದೇ ವೇಳೆ, ಪರಿಸರ ಮಾಲಿನ್ಯ ತಡೆಗಟ್ಟಲು ಎಲೆಕ್ಟ್ರಾನಿಕ್‌ ವಾಹನ ಬಳಸಿ ಎಂದು ಜಾಗೃತಿ ಮೂಡಿಸಲು ಇಬ್ಬರು ಮಹಿಳೆಯರು ಮನಾಲಿಯಿಂದ ಕಾಜಾಕ್ಕೆ (183ಕಿ.ಮೀ) ಎಲೆಕ್ಟ್ರಿಕ್‌ ಸ್ಕೂಟರ್‌ನಲ್ಲಿ ಬಂದಿದ್ದರು. ಎಲೆಕ್ಟ್ರಿಕ್‌ ಸ್ಕೂಟರ್‌ ಹೆಚ್ಚು ದೂರು ಸಾಗುವುದಿಲ್ಲ ಎನ್ನುವ ಅಪನಂಬಿಕೆ ಹೋಗಲಾಡಿಸಲೆಂದು ನಾವು ಈ ಪ್ರಯಾಣ ಮಾಡಿದೆವೆಂದು ಅವರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:ಹೇರ್‌ಕಟ್‌ ಎಡವಟ್ಟು; 2 ಕೋಟಿ ರೂ.ನಷ್ಟ ತುಂಬಬೇಕಾದ ಸೆಲೂನ್‌

ಶೀಘ್ರ 10000 ಇವಿ ಚಾರ್ಜಿಂಗ್‌ ಕೇಂದ್ರ ಸ್ಥಾಪನೆ
ದೇಶದಲ್ಲಿ ಎಲೆಕ್ಟ್ರಿಕ್‌ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇನ್ನು ಕೆಲ ತಿಂಗಳುಗಳಲ್ಲಿ ದೇಶಾದ್ಯಂತ 10 ಸಾವಿರ ಇವಿ ಚಾರ್ಜಿಂಗ್‌ ಕೇಂದ್ರಗಳನ್ನು ಸ್ಥಾಪಿಸುವುದಾಗಿ ಹೀರೋ ಎಲೆಕ್ಟ್ರಿಕ್‌ ಸಂಸ್ಥೆ ಹೇಳಿಕೊಂಡಿದೆ. ಮಾಸಿವ್‌ ಮೊಬಿಲಿಟಿ ಸಂಸ್ಥೆಯೊಂದಿಗೆ ಜಂಟಿಯಾಗಿ ಚಾರ್ಜಿಂಗ್‌ ಕೇಂದ್ರಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಹೀರೋ ಸಂಸ್ಥೆ ಈಗಾಗಲೇ 1,650 ಚಾರ್ಜಿಂಗ್‌ ಕೇಂದ್ರ ಸ್ಥಾಪಿಸಿದೆ. 2022ರ ಅಂತ್ಯದೊಳಗೆ ಅದನ್ನು 20 ಸಾವಿರಕ್ಕೆ ಏರಿಸುವ ಗುರಿ ಹೊಂದಿದೆ ಎಂದು ಹೀರೋ ಎಲೆಕ್ಟ್ರಿಕ್‌ ಸಂಸ್ಥೆಯ ಮುಖ್ಯಸ್ಥ ಸೊಹಿಂದರ್‌ ಗಿಲ್‌ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next