Advertisement
ಸಿಯಾಚಿನ್ ಸಿಗ್ನಲರ್‌ಗಳು ಇದರ ಅಳವಡಿಕೆ ಕಾರ್ಯವನ್ನು ಭಾನುವಾರ ಪೂರ್ಣಗೊಳಿಸಿದ್ದು, ಇದರಿಂದಾಗಿ ಇನ್ನು ಮುಂದೆ ಸಮುದ್ರಮಟ್ಟದಿಂದ ಬರೋಬ್ಬರಿ 19,061 ಅಡಿ ಎತ್ತರದಲ್ಲಿ ನಮ್ಮ ಯೋಧರಿಗೆ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆ ಲಭ್ಯವಾಗಲಿದೆ.
Related Articles
ಈ ಎತ್ತರದ ಪ್ರದೇಶದಲ್ಲಿ ದೂರಸಂಪರ್ಕ ಮೂಲಸೌಕರ್ಯ ಕಂಪನಿ ಭಾರತ್ ಬ್ರಾಡ್‌ಬ್ಯಾಂಡ್ ನೆಟ್‌ವರ್ಕ್ ಲಿ.(ಬಿಬಿಎನ್‌ಎಲ್) ಇಂಟರ್ನೆಟ್ ಸೇವೆಯನ್ನು ಒದಗಿಸಲಿದೆ. ಫೈಬರ್ ಆಧಾರಿತ ಇಂಟರ್ನೆಟ್ ವ್ಯವಸ್ಥೆಯಿಲ್ಲದಂಥ ಕುಗ್ರಾಮಗಳಲ್ಲಿ ಮತ್ತು ಸುಮಾರು 7 ಸಾವಿರ ಗ್ರಾಮ ಪಂಚಾಯತ್‌ಗಳಲ್ಲಿ ಉಪಗ್ರಹ ಆಧಾರಿತ ಇಂಟರ್ನೆಟ್ ಸಂಪರ್ಕವನ್ನು ಒದಗಿಸುವಂಥ ಭಾರತ್‌ನೆಟ್ ಯೋಜನೆಯನ್ನು ಕೂಡ ಇದೇ ಸಂಸ್ಥೆ ಕೈಗೆತ್ತಿಕೊಂಡಿದೆ.
Advertisement