Advertisement

ಮಹಾರಾಷ್ಟ್ರದಲ್ಲಿ ನಿರ್ಮಾಣವಾಯ್ತು ʻವಿಶ್ವದ ಮೊದಲ ಬಿದಿರಿನ ತಡೆಗೋಡೆʼ

05:48 PM Mar 04, 2023 | Team Udayavani |

ನವದೆಹಲಿ: ಸದಾ ವಿನೂತನ ಪ್ರಯೋಗಗಳು, ಶ್ರೇಷ್ಟಮಟ್ಟದ ಕಾರ್ಯಕ್ಷಮತೆಯಿಂದಾಗಿ ಸುದ್ದಿಯಲ್ಲಿರುವ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರು ಇದೀಗ ಮತ್ತೊಂದು ಯಶಸ್ವಿ ಪ್ರಯೋಗವನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Advertisement

ಮಹಾರಾಷ್ಟ್ರದ ಯವತ್ಮಾಳ್‌ ಮತ್ತು ಚಂದ್ರಾಪುರ್‌ ಜಿಲ್ಲೆಗಳನ್ನು ಬೆಸೆಯುವ ಮಾರ್ಗದಲ್ಲಿ ಬಿದಿರಿನಿಂದ ಮಾಡಿರುವ 200 ಮೀ ಉದ್ದದ ತಡೆಗೋಡೆಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ನಿತಿನ್‌ ಗಡ್ಗರಿ ʻಇದು ವಿಶ್ವದ ಮೊದಲ ಬಿದಿರಿನ ತಡೆಗೋಡೆʼ ಎಂದು ಬರೆದುಕೊಂಡಿದ್ದಾರೆ.

ಅಲ್ಲದೇ, ಇದನ್ನು ʻಶ್ರೇಷ್ಟ ಸಾಧನೆʼ ಎಂದೂ ಬಣ್ಣಿಸಿರುವ ಕೇಂದ್ರ ಸಚಿವ, ʻಇದು ಈಗ ಉಪಯೋಗಿಸುತ್ತಿರುವ ಸ್ಟೀಲ್‌ ತಡೆಗೋಡೆಗಳಿಗೆ ಸೂಕ್ತ ಪರ್ಯಾಯವಾಗಿದೆ ಮತ್ತು ಪರಿಸರದ ಕಾಳಜಿಯನ್ನೂ ಹೊಂದಿದೆʼ ಎಂದಿದ್ದಾರೆ.

 

Advertisement

ದೇಶದ ಮಹತ್ವಾಕಾಂಕ್ಷೀಯ ಆತ್ಮನಿರ್ಭರ ಭಾರತಕ್ಕೆ ವನಿ-ವರೋರಾ ಹೆದ್ದಾರಿಯಲ್ಲಿ ನಿರ್ಮಿಸಲಾಗಿರುವ 200 ಮೀ. ಉದ್ದದ ವಿಶ್ವದ ಮೊದಲ ರಕ್ಷಣಾ ತಡೆಗೋಡೆ ಪೂರಕವಾಗಲಿದೆ.

ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಈ ರಕ್ಷಣಾ ತಡೆಗೋಡೆಯನ್ನು ʻಬಹು ಬಲ್ಲಿʼ ಎಂದು ಕರೆದಿದ್ದಾರೆ. ʻಈ ತಡೆಗೋಡೆ ದೇಶದ ಪ್ರತಿಷ್ಟಿತ ಸಂಸ್ಥೆಗಳಿಂದ ಸುರಕ್ಷತೆಯ ಪರಿಶೀಲನೆಗೂ ಒಳಗಾಗಿ ಭಾರತೀಯ ರೋಡ್‌ ಕಾಂಗ್ರೆಸ್‌ನಿಂದ ಒಪ್ಪಿಗೆ ಪಡೆದಿದೆʼ ಎಂದೂ ಟ್ವೀಟ್‌ ಮಾಡಿದ್ದಾರೆ.

 

ʻಬಂಬೂಸಾ ಬಲ್ಕೋವಾ ಹೆಸರಿನ ಬಿದಿರನ್ನು ಕ್ರೆಯೋಸೋಟ್‌ ಎಣ್ಣೆ ಮತ್ತು ಮರು ಉಪಯೋಗಿಸಲಾದ ಪಾಲಿ ಎಥಿಲಿನ್‌ ಜೊತೆ ಮಿಶ್ರಣ ಮಾಡಲಾಗಿದೆ. ದೇಶದ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಲ್ಲಿ ಇದೊಂದು ದೊಡ್ಡ ಮೈಲಿಗಲ್ಲುʼ ಎಂದು ನಿತಿನ್‌ ಗಡ್ಕರಿ ವರ್ಣಿಸಿದ್ದಾರೆ.

ಇದನ್ನೂ ಓದಿ:ಕೋಟಿ ಕುಳ, ಉದ್ಯಮಿ ಮುಕೇಶ್‌ ಅಂಬಾನಿ ಕಾರು ಚಾಲಕನಿಗೆ ತಿಂಗಳಿಗೆ ಸಂಬಳ ಎಷ್ಟು ಗೊತ್ತಾ?

Advertisement

Udayavani is now on Telegram. Click here to join our channel and stay updated with the latest news.

Next