Advertisement
ಆಹಾರ ಪದ್ಧತಿಗಿದೆ ಸಾಮ್ಯತೆಆಯುರ್ವೇದ ಮತ್ತು ಯೋಗ ವಿಜ್ಞಾನದಲ್ಲಿ ಆಹಾರ ಪದ್ಧತಿ ಒಂದೇ. ಆಯುರ್ವೇದದಲ್ಲಿ ಯಾವ ಆಹಾರಗಳು ವರ್ಜ್ಯ ಎಂದು ಹೇಳಲಾಗುತ್ತದೆಯೋ ಯೋಗಾಭ್ಯಾಸಿಗಳು ಅವುಗಳಿಂದ ದೂರವಿರಬೇಕು. ಚಿಕಿತ್ಸಾ ವ್ಯವಸ್ಥೆಯಲ್ಲಿಯೂ ಇವೆರಡರಲ್ಲೂ ಸಾಮ್ಯತೆ ಇದೆ. ಆಯುರ್ವೇದದಲ್ಲಿ ದಿನಚರ್ಯ, ಋತುಚರ್ಯ ಮತ್ತು ಸದ್ವಿತರ್ಯಗಳೆಂದು ಮೂರು ವಿಭಾಗಗಳಿವೆ. ದಿನಚರ್ಯದಲ್ಲಿ ಆಹಾರ ಸಹಿತ ದಿನಚರಿ ಬಗೆಗೆ ತಿಳಿಸಿದರೆ, ಋತುಚರ್ಯದಲ್ಲಿ ಯಾವ್ಯಾವ ಋತುಗಳಿಗೆ ಯಾವ ಆಹಾರ ಸೇವನೆ ಸೂಕ್ತ ಎಂದು ವಿವರಿಸಲಾಗಿದೆ. ಸದ್ವಿತcರ್ಯದಲ್ಲಿ ಮನುಷ್ಯನ ಆಚಾರ- ವಿಚಾರ, ಸಾಮಾಜಿಕ ಆರೋಗ್ಯದ ಬಗೆಗೆ ತಿಳಿಸಲಾಗಿದೆ.
ಇಡೀ ವಿಶ್ವವೇ ಕೋವಿಡ್ ವೈರಸ್‌ನಿಂದ ಕಂಗೆಟ್ಟಿರುವಾಗ ಜನರು ತಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಆಸಕ್ತಿ ತೋರುತ್ತಿದ್ದಾರೆ. ಈನಿಟ್ಟಿನಲ್ಲಿ ಆಯುರ್ವೇದ ಔಷಧ ಕ್ರಮವನ್ನು ಪಾಲಿಸುತ್ತಿದ್ದಾರೆ. ಇದರ ಜತೆ ಯಾವ್ಯಾವ ಆಸನ, ಭಂಗಿ, ಮುದ್ರೆಗಳಿಂದ ತಮ್ಮ ದೇಹದಲ್ಲಿ ರೋಗ ಪ್ರತಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳಬಹುದು ಎಂದು ಗೂಗಲ್‌ನಲ್ಲಿ ಜಾಲಾಡತೊಡಗಿದ್ದಾರೆ.
Related Articles
ನಿಮ್ಮ ಯಾವುದೇ ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮಸ್ಯೆ ಸಂಬಂಧ ಆಯುರ್ವೇದ ಚಿಕಿತ್ಸೆ ಅಥವಾ ಯೋಗಾಸನದ ಮೊರೆ ಹೋಗಿದ್ದೀರಿ ಎಂದಾದರೆ ಅಲ್ಲಿ “ಪಥ್ಯ’ಕ್ಕೆ ಮಹತ್ವ ನೀಡಬೇಕು.
Advertisement
ಸಾತ್ವಿಕ ಆಹಾರಅದು ಆಯುರ್ವೇದ ಇರಲಿ, ಯೋಗ ಇರಲಿ ಸಾತ್ವಿಕ ಆಹಾರ ಸೇವನೆ ಕಡ್ಡಾಯ. ಮಾಂಸಾ ಹಾರದಿಂದ ದೂರವಿದ್ದರೆ ಒಳ್ಳೆಯದು. ವೈದ್ಯರು, ತಜ್ಞರು ಹೇಳುವ ಪಥ್ಯವನ್ನು ಪಾಲಿಸಲು ಸಾಧ್ಯ ವಿಲ್ಲ ಎಂದಾದರೆ ಈ ಚಿಕಿತ್ಸೆ ಅಥವಾ ಅಭ್ಯಾಸಗಳು ನಿಮಗೆ ನಿರೀಕ್ಷಿತ ಫಲ ಕೊಡಲಾರವು. ಕೇವಲ ದೇಹ ದಂಡನೆಯಿಂದ ಪರಿಪೂರ್ಣ ಆರೋಗ್ಯ ಸಾಧ್ಯವಿಲ್ಲ. ದೈಹಿಕ, ಮಾನಸಿಕವಾಗಿ ಸ್ವಸ್ಥವಾಗಿರಲು ಸೊಪ್ಪು, ಹಸಿ ತರಕಾರಿಗಳು, ಹಣ್ಣುಗಳು, ನೆನೆ ಹಾಕಿದ ಕಾಳುಗಳು, ಹಾಲು, ಶುಂಠಿ, ಅರಿಶಿನ, ತುಳಸಿ, ಕರಿಮೆಣಸು, ಕೊತ್ತಂಬರಿ ಮತ್ತಿತರ ಪದಾರ್ಥಗಳ ಸೇವನೆ ಹಿತಕಾರಿ. ಕಫ ವರ್ಧನೆಗೆ ಪೂರಕವಾದ ಮೊಸರು, ಉದ್ದು ಮತ್ತು ಸುಲಭವಾಗಿ ಜೀರ್ಣವಾಗದ ಕರಿದ ತಿಂಡಿಗಳು, ಮಸಾಲೆ ಪದಾರ್ಥಗಳು, ಫಾಸ್ಟ್ ಫುಡ್ ಸೇವನೆಯಿಂದ ದೂರ ಇದ್ದಷ್ಟೂ ಒಳಿತು. ನೀವು ಯಾವ ಉದ್ದೇಶದಿಂದ ಯೋಗಾಸನದ ಮೊರೆ ಹೋಗಿದ್ದೀರಿ ಎಂಬುದನ್ನು ಅವಲಂಬಿಸಿ ಪಥ್ಯಗಳಿರು ತ್ತವೆ. ಯೋಗ ಗುರುಗಳ ಸಲಹೆಯಂತೆ ಪಥ್ಯಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿದಲ್ಲಿ ಬೇಗ ಪರಿಹಾರ ಸಾಧ್ಯ. – ಡಾ| ಸತ್ಯನಾರಾಯಣ ಬಿ., ಪ್ರಾಂಶುಪಾಲರು, ಮುನಿಯಾಲು ಆಯುರ್ವೇದ ಕಾಲೇಜು, ಮಣಿಪಾಲ.