Advertisement

“ಯೋಗಾಭ್ಯಾಸವನ್ನು ರೂಢಿಸಿಕೊಳ್ಳಿ’

11:30 PM Jun 22, 2019 | Sriram |

ಕಾಸರಗೋಡು: ಯೋಗ ವನ್ನು ಬದುಕಿನ ಭಾಗವಾಗಿಸುವ ಸಂದೇಶ ವನ್ನು ನೀಡುವ ಮೂಲಕ ಚೆರುವ ತ್ತೂರು ಗ್ರಾಮಪಂಚಾಯತ್‌ನ ಸರಕಾರಿ ಪಿಷರೀಸ್‌ ವೊಕೇಶನಲ್‌ ಸರಕಾರಿ ಶಾಲೆ ಯೋಗ ದಿನಾಚರಣೆ ನಡೆಸಿತು.

Advertisement

ಶಾಲೆಯ 8ನೇ ತರಗತಿಗಳಿಗೆ ಯೋಗದ ತರಬೇತಿ ನೀಡಲಾಯಿತು. 6 ವಿಭಾಗಗಳ 180 ಮಕ್ಕಳು ತರಬೇತಿಯಲ್ಲಿ ಭಾಗವಹಿಸಿದರು.

ಯೋಗಾಚಾರ್ಯ ಅನಿಲ್‌ಯೋಗಾ ಸನಗಳ ಕುರಿತು ಮಾಹಿತಿ ನೀಡುತ್ತಾ, ಬದುಕಲ್ಲಿ ಯೋಗವನ್ನು ಅಳವ ಡಿಸಿಕೊಳ್ಳುವ ಸಂದೇಶ ನೀಡಲಾಯಿತು ಹಾಗೂ ದಿನಲೂ ಯೋಗಮಾಡುವಂತೆ ಹೇಳಿದರು ಶಿಕ್ಷಕರೂ ಭಾಗವಹಿಸಿದರು.ಶಾಲಾ ಸಭಾಂಗಣದಲ್ಲಿ ನಡೆದ ಸಮಾ ರಂಭದಲ್ಲಿ ಯೋಗಾಚಾರ್ಯ ಅನಿಲ್‌, ಶಾಲೆಯ ಕ್ರೀಡಾ ಶಿಕ್ಷಕ ಎಂ.ರಾಜು ತರಬೇತಿಗೆ ನೇತೃತ್ವ ನೀಡಿದರು.

ತರಬೇತಿಗೆ ಮುನ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ಯೋಗ ಬದುಕಿನ ಕುರಿತು ಜಾಗೃತಿ ತರಗತಿ, ರೋಗಗಳಿಂದ ಮುಕ್ತಿ, ಆಂತರಿಕ ಅವಯವಗಳ ಸಾಮರ್ಥ್ಯ ಹೆಚ್ಚಳ, ಶ್ವಾಸಕೋಶದ ಬಲಗೊಳ್ಳುವಿಕೆ, ಏಕಾಗ್ರತೆಯ ಹೆಚ್ಚಳ, ಆತ್ಮವಿಶ್ವಾಸ ಹೆಚ್ಚಳ, ಖನ್ನತೆ, ಒತ್ತಡಗಳಿಂದ ವಿಮುಕ್ತಿ , ಆರೋಗ್ಯ ಸಮಸ್ಯೆಗಳಿಗೆ ಯೋಗದಿಂದ ಮುಕ್ತಿ ಲಭಿಸುತ್ತದೆ ಎಂದು ಮಾಹಿತಿ ನೀಡಲಾಯಿತು

Advertisement

Udayavani is now on Telegram. Click here to join our channel and stay updated with the latest news.

Next