Advertisement

ಪಾಕ್‌ನಲ್ಲಿ ಕ್ರಿಕೆಟ್‌ ಚಟುವಟಿಕೆ ವಿಶ್ವ ಇಲೆವೆನ್‌ ವಿರುದ್ಧ ಟಿ-20

06:50 AM Sep 12, 2017 | |

ಲಾಹೋರ್‌: ಮಂಗಳವಾರದಿಂದ ಪಾಕಿಸ್ಥಾನದಲ್ಲಿ ವಿಶ್ವ ಇಲೆವೆನ್‌ ಮತ್ತು ಪಾಕಿಸ್ಥಾನ ತಂಡಗಳ ನಡುವೆ 3 ಪಂದ್ಯಗಳ ಟಿ-20 ಸರಣಿ ಆರಂಭವಾಗಲಿದೆ. ಈ ಸರಣಿಯ ಪಾಕಿಸ್ಥಾನದಲ್ಲಿ ಮತ್ತೂಮ್ಮೆ ಅಂತಾರಾಷ್ಟ್ರೀಯ ಕ್ರಿಕೆಟಿಗೆ ವೇದಿಕೆ ನಿರ್ಮಿಸಿ ಕೊಡಲಿದೆ ಎಂಬ ಆಶಾವಾದ ವ್ಯಕ್ತವಾಗಿದೆ.

Advertisement

ಸದ್ಯ ಪಾಕಿಸ್ಥಾನದಲ್ಲಿ ಭದ್ರತಾ ಭೀತಿಯಿದ್ದು, ಇದನ್ನು ನಿಭಾಯಿಸುವಲ್ಲಿ ಯಶಸ್ವಿಯಾದರೆ ಪಾಕಿಸ್ಥಾನದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಪುನರುತ್ಥಾನಗೊಳ್ಳಬಹುದು.

ಮೂರೂ ಪಂದ್ಯಗಳು ಲಾಹೋರ್‌ನ ಗದ್ದಾಫಿ ಕ್ರೀಡಾಂಗಣದಲ್ಲಿ ನಡೆಯಲಿವೆ. ಕ್ರೀಡಾಂಗಣ 27 ಸಾವಿರ ಪ್ರೇಕ್ಷಕರ ಸಾಮರ್ಥ್ಯವನ್ನು ಹೊಂದಿದೆ. ಭದ್ರತೆಗೆ 8 ಸಾವಿರಕ್ಕೂ ಅಧಿಕ ಪೊಲೀಸರನ್ನು ಬಳಸಿಕೊಳ್ಳಲಾಗುತ್ತಿದೆ. ಪಂದ್ಯ ನಡೆಯುವ ಸಂದರ್ಭದಲ್ಲಿ ಆಟಗಾರರ ಬಸ್‌ ತೆರಳುವ ಮಾರ್ಗದುದ್ದಕ್ಕೂ ಅಂಗಡಿಗಳನ್ನು ಮುಚ್ಚಿಸುವಂತೆ ಸೂಚಿಸಲಾಗಿದೆ.

2009ರಲ್ಲಿ ಪ್ರವಾಸಿ ಶ್ರೀಲಂಕಾ ಆಟಗಾರರ ಬಸ್‌ ಮೇಲೆ ಲಾಹೋರ್‌ನಲ್ಲಿ ಭಯೋತ್ಪಾದಕರು ದಾಳಿ ಮಾಡಿದ ಬಳಿಕ ಪಾಕಿಸ್ಥಾನದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಂಪೂರ್ಣವಾಗಿ ನಿಂತು ಹೋಗಿದೆ. ಸ್ವತಃ ಐಸಿಸಿಯೇ ಇದಕ್ಕೆ ನಿರ್ಬಂಧ ಹೇರಿತ್ತು. ಇತರ ರಾಷ್ಟ್ರಗಳೂ ಪಾಕ್‌ನಲ್ಲಿ ಆಡಲು ಹಿಂದೇಟು ಹಾಕಿದ್ದವು.

ತಂಡಗಳು
ಪಾಕಿಸ್ಥಾನ:
ಸಫ‌ìರಾಜ್‌ ಅಹ್ಮದ್‌ (ನಾಯಕ), ಫ‌ಕರ್‌ ಜಮಾನ್‌, ಅಹ್ಮದ್‌ ಶೆಹಜಾದ್‌, ಬಾಬರ್‌ ಆಜಂ, ಶೋಯಿಬ್‌ ಮಲಿಕ್‌, ಉಮರ್‌ ಅಮಿನ್‌, ಇಮಾದ್‌ ವಾಸಿಮ್‌, ಶಾದಾಬ್‌ ಖಾನ್‌, ಮೊಹಮ್ಮದ್‌ ನವಾಜ್‌, ಫಾಹಿಮ್‌ ಅಶ್ರಫ್, ಹಸನ್‌ ಅಲಿ, ಅಮಿರ್‌ ಯಾಮಿನ್‌, ಮೊಹಮ್ಮದ್‌ ಆಮೀರ್‌, ರುಮ್ಮನ್‌ ರಯೀಸ್‌, ಉಸ್ಮಾನ್‌ ಖ್ವಾಜಾ, ಶೋಯಿಬ್‌ ಖಾನ್‌.

Advertisement

ವಿಶ್ವ ಇಲೆವೆನ್‌: ಫಾ ಡು ಪ್ಲೆಸಿಸ್‌ (ನಾಯಕ), ಡೇವಿಡ್‌ ಮಿಲ್ಲರ್‌, ಮಾರ್ನೆ ಮಾರ್ಕೆಲ್‌, ಟಿಮ್‌ ಪೇಯ್ನ, ತಿಸರ ಪೆರೆರ, ಇಮ್ರಾನ್‌ ತಾಹಿರ್‌, ಡ್ಯಾರನ್‌ ಸಮ್ಮಿ, ಹಾಶಿಮ್‌ ಆಮ್ಲ, ಗ್ರ್ಯಾಂಟ್‌ ಈಲಿಯಟ್‌, ಸಾಮ್ಯುಯೆಲ್‌ ಬದ್ರಿ, ಜಾರ್ಜ್‌ ಬೈಲಿ, ತಮಿಮ್‌ ಇಕ್ಬಾಲ್‌, ಪಾಲ್‌ ಕಾಲಿಂಗ್‌ವುಡ್‌, ಬೆನ್‌ ಕಟಿಂಗ್‌.

Advertisement

Udayavani is now on Telegram. Click here to join our channel and stay updated with the latest news.

Next