Advertisement

ವಿಶ್ವ ಕುಸ್ತಿ: ಮೊದಲ ದಿನ ಭಾರತ ನೀರಸ ಪ್ರದರ್ಶನ

01:14 PM Aug 22, 2017 | |

ಪ್ಯಾರಿಸ್‌: ಇಲ್ಲಿ ಆರಂಭವಾಗಿರುವ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಮೊದಲ ದಿನವೇ ಭಾರೀ ಸೋಲು ಅನುಭವಿಸಿದೆ. ಮೊದಲ ದಿನದ ಗ್ರೀಕೊ ರೋಮನ್‌ ವಿಭಾಗದ ಸ್ಪರ್ಧೆಯಲ್ಲಿ ಭಾರತದ ನಾಲ್ಕು ಮಂದಿ ಸ್ಪರ್ಧಿಗಳು ಸ್ಪರ್ಧೆ ಮಾಡಿ ಸೋಲು ಅನುಭವಿಸಿದರು ಎನ್ನುವುದು ವಿಶೇಷ.

Advertisement

ಸೋಲಿನ ಸರಣಿ: 71 ಕೆ.ಜಿ ವಿಭಾಗದಲ್ಲಿ ಭಾರತದ ಯೋಗೇಶ್‌ 1-3 ಅಂಕಗಳ ಅಂತರದಿಂದ ಟಕೇಶಿ ಇಝುಮಿ ವಿರುದ್ಧ ಸೋಲುಂಡರು. ಎದುರಾಳಿ ಆಟಕ್ಕೆ ಯೋಗೇಶ್‌ ಪ್ರತಿ ಹಂತದಲ್ಲೂ ಒದ್ದಾಟ ನಡೆಸ  ಬೇಕಾಯಿತು. ಸಾಕಷ್ಟು ತಪ್ಪುಗಳನ್ನು ಎಸೆದರು. ಇದರಿಂದಾಗಿ ಯೋಗೇಶ್‌ ಸೋಲು ಕಾಣುವಂತಾಯಿತು. ಇನ್ನು 75 ಕೆ.ಜಿ ವಿಭಾಗದಲ್ಲಿ ನಡೆದ ಪಂದ್ಯದಲ್ಲಿ ಗುರುಪ್ರೀತ್‌ ಸಿಂಗ್‌ 1-5 ಅಂಕಗಳ ಅಂತರದಿಂದ ಜಾರ್ಜಿಯಾ ವಿರುದ್ಧ ಹೀನಾಯ ಸೋಲುಂಡರು. 85 ಕೆ.ಜಿ ವಿಭಾಗದ ಪಂದ್ಯದಲ್ಲಿ ರವೀಂದರ್‌ 0-8 ಅಂಕಗಳ ಅಂತರದಿಂದ ಹಂಗೇರಿಯಾದ ವಿಕ್ಟರ್‌ ಲೊರಿಂಕಾ ವಿರುದ್ಧ ಸೋಲುಂಡರು. ಪ್ರತಿ ಹೋರಾಟ ನೀಡಿದರೂ ಅಂಕಗಳಿಸಲು ರವೀಂದರ್‌ ವಿಫ‌ಲರಾದರು. ಅನುಭವಿ ವಿಕ್ಟರ್‌ ಸುಲಭ ಗೆಲುವು ಸಾಧಿಸಿ ಮುಂದಿನ ಸುತ್ತು ಪ್ರವೇಶಿಸಿದರು.

ಲಾಥೆÌನಿಯಾದ ವಿಲಿಯಸ್‌ ಲಾರಿನೈಟ್ಸ್‌ ವಿರುದ್ಧ ನಡೆದ ಪಂದ್ಯದಲ್ಲಿ ಹರ್‌ದೀಪ್‌ 2-5 ಅಂತರದಿಂದ ಸೋತರು. ಒಟ್ಟಾರೆ ಮೊದಲ ದಿನ ಭಾರತದ ಆಟಗಾರರು ಕಳಪೆ ಆರಂಭ ಪಡೆದರು. 2ನೇ ದಿನವಾದರೂ ಭಾರತ ಪದಕ ಗೆಲ್ಲಬಹುದು ಎನ್ನುವ ನಿರೀಕ್ಷೆ ಭಾರತೀಯ ಅಭಿಮಾನಿಗಳದ್ದಾಗಿದೆ. ಮುಂದಿನ ಸುತ್ತಿನಲ್ಲಿ ಶ್ರೇಷ್ಠ ನಿರ್ವಹಣೆ ನೀಡಿ ಭಾರತೀಯರ ವಿರುದ್ಧ ಗೆದ್ದವರ ಪೈಕಿ ಯಾರಾದರೂ ಫೈನಲ್‌ಗೆ ತಲುಪಿದರೆ ರಿಪಿಚಾಜ್‌ನಲ್ಲಿ ಆಡಲು
ಸೋತವರಿಗೆ ಮತ್ತೂಂದು ಅವಕಾಶ ಸಿಗಲಿದೆ. ಇಲ್ಲಿ ಗೆದ್ದರೆ ಕಂಚಿನ ಪದಕ ಗೆಲ್ಲಬಹುದು.

Advertisement

Udayavani is now on Telegram. Click here to join our channel and stay updated with the latest news.

Next