Advertisement

ಪುಣೆ ಗುರುದೇವ  ಸೇವಾ ಬಳಗದಿಂದ ವಿಶ್ವ ಮಹಿಳಾ ದಿನಾಚರಣೆ

01:57 AM Mar 11, 2019 | Team Udayavani |

ಪುಣೆ: ಶ್ರೀ ಗುರುದೇವ ಸೇವಾ ಬಳಗ ಮತ್ತು ಶ್ರೀ ವಜ್ರಮಾತ ಮಹಿಳಾ ವಿಕಾಸ ಕೇಂದ್ರ ಪುಣೆ ಇದರ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯನ್ನು ಮಾ. 8 ರಂದು  ಸ್ವಾರ್‌ಗೆàಟ್‌ನಲ್ಲಿರುವ ಮಾಹಾರಾಷ್ಟ್ರ ಚೇಂಬರ್‌ ಆಫ್‌ ಕಾಮರ್ಸ್‌ನ ಲಕಾಕಿ ಹಾಲ್‌ನಲ್ಲಿ ಆಚರಿಸಲಾಯಿತು.

Advertisement

ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಉಪಾಧ್ಯಕ್ಷೆ ಜಯಲಕ್ಷ್ಮೀಪಿ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಪ್ರಮುಖರಾದ ಶೋಭಾ ಯು. ಶೆಟ್ಟಿ, ಸುಧಾ ಎನ್‌. ಶೆಟ್ಟಿ,  ಕೋಶಾಧಿಕಾರಿ ವೀಣಾ ಪಿ. ಶೆಟ್ಟಿ, ಕಾರ್ಯದರ್ಶಿ ವೀಣಾ ಡಿ. ಶೆಟ್ಟಿ ಹಾಗೂ ಸುಮನಾ ಎಸ್‌. ಹೆಗ್ಡೆ ಅವರು ಉಪಸ್ಥಿತರಿದ್ದರು. ಪುಣೆ ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷರಾದ ಸದಾನಂದ ಕೆ. ಶೆಟ್ಟಿ ಮತ್ತು ಮಹಿಳಾ ವಿಭಾಗದ ಪ್ರಮುಖರು, ಸದಸ್ಯರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೀಣಾ ಪಿ. ಶೆಟ್ಟಿ,  ಸುಮನಾ ಎಸ್‌. ಹೆಗ್ಡೆ ಪ್ರಾರ್ಥನೆಗೈದರು.

ಶೋಭಾ ಯು. ಶೆಟ್ಟಿ ಮಾತನಾಡಿ,  ಹೆಣ್ಣು ಎಂದರೆ ಭಗವಂತನ ಸುಂದರ ರಚನೆಯಾಗಿದೆ.  ಅಲ್ಲದೆ ಹೆಣ್ಣು ಜನ ಮಾನಸದ,   ಸಂಸಾರದ ಕಣ್ಣು ಕೂಡ ಹೌದು. ಹೆಣ್ಣಿಗೆ ತಾಯಿತನದ  ಅದ್ಭುತ ಪದವಿ ಕೂಡಾ ಸಿಕ್ಕಿದೆ. ತಾಯಿ
ಯಂತೆಯೇ  ಸ್ತ್ರೀಯಾದವಳು ಅನೇಕ ರೂಪದಲ್ಲಿ ಸಂಸಾರ ವನ್ನು ಸಲಹುವ ಒಂದು ವಿಶಿಷ್ಟ ಗೌರವವನ್ನು ಪಡೆಯುತ್ತಾಳೆ. ಜಗತ್ತಿನ ಎಲ್ಲ ಕ್ಷೇತ್ರದಲ್ಲೂ ಸ್ತ್ರೀಗೆ ಮೊದಲ ಸ್ಥಾನವಿದೆ. ನಮ್ಮಲ್ಲಿ  ಮನೋಧರ್ಮ, ಛಲವಿದ್ದರೆ  ಸಮಾಜದಲ್ಲಿ ಮುಂದೆ  ಹೋಗಬಹುದು.  ಹೆದರಿಕೆ, ಅಂಜಿಕೆ, ನಾಚಿಕೆಯನ್ನು  ಮನಸ್ಸಿನಲ್ಲಿ ಇಟ್ಟುಕೊಳ್ಳಬಾರದು. ಸ್ತ್ರೀಗೆ ನಡವಳಿಕೆಯೇ ಬಹುಮುಖ್ಯ. ವಿದ್ಯಾವಂತರಾಗಿ ಸ್ವಂತಿಕೆಯಿಂದ ಸ್ವಾವಲಂಬಿ ಗಳಾಗಿ, ಹಿರಿಯರ, ಮಾರ್ಗದರ್ಶನದಲ್ಲಿ ಸಮಾಜದಲ್ಲಿ ಬದುಕಿ ತೊರುವಂತಹ ಮನಸ್ಸು ನಮ್ಮಲಿರಬೇಕು  ಹಾಗೂ ಬೇರೆಯವರಿಗೆ ಪ್ರೇರಣೆಯಾಗಬೇಕು ಎಂದರು.

ಸುಮನಾ ಎಸ್‌. ಹೆಗ್ಡೆ ಅವರು ಮಾತನಾಡಿ, ಜಗತ್ತಿನ ಯಾವುದೇ ಜೀವಿಗೆ ತಾಯಿಯಿಲ್ಲದೆ ಜನ್ಮ ಸಾಧ್ಯವಿಲ್ಲ. ತಾಯಿಯೇ ಪೂಜನೀಯಳು. ನಾರಿ ಎÇÉಾ ವಿಧದಲ್ಲೂ ಆಕರ್ಷಣೆಯ ಮತ್ತು ವಾತ್ಸಲ್ಯ ಪ್ರೇಮಿಯಾಗಿರುತ್ತಾಳೆ. ಹೆಣ್ಣಿಗೆ ಕೆಲವು ಕಡೆ ಸಾತಂತ್ರÂವಿದೆ, ಕೆಲವು ಕಡೆ ಹಿಂಸೆಯು ಇದೆ. ಈ ಎರಡನ್ನು  ಸಮಾನಾಂತರವಾಗಿ ಸ್ವೀಕರಿಸಿ ಸಮಾಜದ ದೇವತೆಯಾಗಿ ಮೆರೆಯುತ್ತಾಳೆ ಎಂದು ನುಡಿದರು.

ವೀಣಾ ಪಿ. ಶೆಟ್ಟಿ ಅವರು ಮಾತನಾಡಿ, ಜವಾಬ್ದಾರಿ ಯುತವಾಗಿ ಜಾಗರೂಕಳಾಗಿ ಸಮಾಜವನ್ನು ಮುನ್ನಡೆಸುವ ಹೆಣ್ಣು ಸಮಾಜದ ಕಣ್ಣು ಎಂದರೆ ತಪ್ಪಾಗಲಾರದು. ಸಮಾಜವನ್ನು, ಸಂಸ್ಕೃತಿಯನ್ನು ಅರಿತು ಮಾನಸಿಕವಾಗಿ ಧೈರ್ಯವನ್ನು ತಂದುಕೊಂಡು  ಸಮೃದ್ಧಳಾಗಿ ಕಾರ್ಯ ನಿರ್ವಹಿಸುವ ಸ್ತ್ರೀಗೆ  ಸಿಕ್ಕಿದ ಗೌರವವೇ ಶ್ರೇಷ್ಠ ಎಂದು ಅರಿತು ಬಾಳುತ್ತಾಳೆ. ಇತಿಮಿತಿಯಲ್ಲಿ ವೈಜ್ಞಾನಿಕವಾಗಿ ಮುಂದೆ ಹೋಗಿ ಕಾರ್ಯ ಮಾಡುವ ಕ್ಷಮತೆಯನ್ನು  ಹೆಣ್ಣು ಇಂದು ಪಡೆದಿರುತ್ತಾಳೆ ಎಂದರು.

Advertisement

ಈ ಸಂದರ್ಭದಲ್ಲಿ ಪುಣೆ ಬಳಗದ ಅಧ್ಯಕ್ಷರಾದ ಸದಾನಂದ ಕೆ. ಶೆಟ್ಟಿ ಅವರು ಮಾತನಾಡಿ,  ಪ್ರಕೃತಿಯ ನಿಯಮದಂತೆ ಸ್ತ್ರೀ ಎಂದರೆ ಉತ್ಪತ್ತಿ. ಸ್ತ್ರೀಯಿಂದಲೇ ಅರಂಭ ಎಂಬ ವೇದ ವಾಕ್ಯವಿದೆ. ಪ್ರಾಥಮಿಕ ನಡವಳಿಕೆಯನ್ನು ತಿಳಿಸಿಕೊಡುವ ತಾಯಿ ದೇವರಿಗೆ ಸಮಾನ. ಸ್ತ್ರೀಯರನ್ನು ಗೌರವಿಸುವುದು ನಮ್ಮ ಕರ್ತವ್ಯ. ಸ್ತ್ರಿಯನ್ನು ನಾವು ತಾಯಿಯಾಗಿ, ಸಹೋದರಿಯಾಗಿ, ಮಡದಿಯಾಗಿ, ಮಗಳಾಗಿ ಗೌರವಿಸುತ್ತೇವೆಯೋ ಅಂತಹ ಭಯ ಭಕ್ತಿ ಸ್ತ್ರೀಯರಲ್ಲೂ ಇರಬೇಕು. ಭಯಭಕ್ತಿ ಗೌರವ ಇದ್ದರೆ ಸಮಾಜದಲ್ಲಿ ಅನಾಚಾರಗಳು ನಡೆಯಲು ಸಾಧ್ಯವಿಲ್ಲ ಎಂದು ನುಡಿದು ಶುಭ ಹಾರೈಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಹಿಳೆಯರಿಂದ ವಿಶ್ವ ಮಹಿಳಾ ದಿನಾಚರಣೆಯ ಗೀತೆಯೊಂದಿಗೆ ನೃತ್ಯ ಕಾರ್ಯಕ್ರಮ, ಶ್ವೇತಾ ಎಚ್‌. ಮೂಡಬಿದ್ರಿ ಇವರಿಂದ ಸ್ತ್ರೀಯ ಬಗ್ಗೆ ಬರೆದ ಭಾವಗೀತೆ ಹಾಡಿದರು. ಈ ಕಾರ್ಯಕ್ರಮದಲ್ಲಿ ಪುಣೆ ಶ್ರೀ  ಗುರುದೇವ ಸೇವಾ ಬಳಗದ ಪ್ರಮುಖರಾದ ಉಷಾಕುಮಾರ್‌ ಶೆಟ್ಟಿ, ನಾರಾಯಣ ಶೆಟ್ಟಿ, ಕಾರ್ಯದರ್ಶಿ ರೋಹಿತ್‌ ಶೆಟ್ಟಿ ನಗ್ರಿಗುತ್ತು,ಕೊಶಾಧಿಕಾರಿ ರಂಜಿತ್‌ ಶೆಟ್ಟಿ, ದಾಮೋದರ ಬಂಗೇರ, ಸುಧಾಕರ್‌ ಶೆಟ್ಟಿ, ಉಮೇಶ್‌ ಶೆಟ್ಟಿ ದಿನೇಶ್‌ ಶೆಟ್ಟಿ ಬಜಗೋಳಿ, ವಿಟ್ಟಲ್‌ ಶೆಟ್ಟಿ, ದಿನೇಶ್‌ ಶೆಟ್ಟಿ  ನಿಟ್ಟೆ, ಸುರೇಶ್‌ ಶೆಟ್ಟಿ, ನಾಗರಾಜ್‌ ಶೆಟ್ಟಿ ಹಾಗೂ ಉಮಾ ಶೆಟ್ಟಿ, ಉಷಾ ಯು. ಶೆಟ್ಟಿ, ನಯನಾ  ಶೆಟ್ಟಿ, ಸರೋಜಿನಿ ಬಂಗೇರ, ಶಾರದಾ ಹೆಗ್ಡೆ, ಸ್ನೇಹಾ ಅರ್‌. ಶೆಟ್ಟಿ, ಸುಜಾತಾ  ಶೆಟ್ಟಿ, ಲಲಿತಾ ಪೂಜಾರಿ, ವನಿತಾ ಕರ್ಕೇರ, ಸುಶೀಲಾ ಮೂಲ್ಯ  ಮತ್ತಿತರರು ಉಪಸ್ಥಿತರಿದ್ದರು.  ವೀಣಾ ಪಿ.  ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ವೀಣಾ ಡಿ. ಶೆಟ್ಟಿ ವಂದಿಸಿದರು.

ಚಿತ್ರ-ವರದಿ: ಹರೀಶ್‌ ಮೂಡಬಿದ್ರೆ ಪುಣೆ

Advertisement

Udayavani is now on Telegram. Click here to join our channel and stay updated with the latest news.

Next