ಲಂಡನ್: “ಮುಂದಿನ 5ರಿಂದ 10 ವರ್ಷಗಳಲ್ಲಿ ಜಗತ್ತು ಕೋವಿಡ್ ಗಿಂತಲೂ ಭಯಾನಕವಾದ ಸವಾಲನ್ನು ಎದುರಿಸಲಿದೆ!’
ಕೋವಿಡ್ 19 ಸೋಂಕು ಅಬ್ಬರದಿಂದ ಹೈರಾಣಾಗಿರುವ ಜಗತ್ತಿಗೆ ಇಂಥದ್ದೊಂದು ಎಚ್ಚರಿಕೆಯನ್ನು ಕೊಟ್ಟಿರುವುದು ಬ್ರಿಟಿಷ್ ಬ್ರಾಡ್‌ಕಾಸ್ಟರ್ ಹಾಗೂ ಖ್ಯಾತ ನಿರ್ದೇಶಕರಾದ ಡೇವಿಡ್ ಅಟ್ಟೆನ್ ಬೊರೋ.
ಇದನ್ನೂ ಓದಿ:ಕೋವಿಡ್ ಪ್ರಕರಣ : ನರೇಗಾ ಕೆಲಸ ಸ್ಥಗಿತ ,ಮೇ 24ರ ವರೆಗೆ ಇಲ್ಲ ಎಂದ ಗ್ರಾ. ಇಲಾಖೆ
ಕೊರೊನಾದಿಂದ ಪಾರಾದರೂ ಸದ್ಯದಲ್ಲೇ ಜಗತ್ತು ಹವಾಮಾನ ವೈಪರೀತ್ಯದ ಅತಿ ದೊಡ್ಡ ಸಂಕಷ್ಟವನ್ನು ಎದುರಿಸಲಿದೆ. ಗ್ಲಾಸ್ಗೋ, ಕಾಪ್26 ಸಭೆಗಳು ಯಶಸ್ವಿಯಾಗುವುದು ಬಹಳ ಮುಖ್ಯ. ಈ ಸಾಂಕ್ರಾಮಿಕವು ನೀಡಿರುವಂಥ ಅವಕಾಶವನ್ನು ವಿಶ್ವ ನಾಯಕರು ಸದುಪಯೋಗಪಡಿಸಿಕೊಳ್ಳಬೇಕು. ಹವಾಮಾನ ವೈಪರೀತ್ಯಕ್ಕೆ ಸಂಬಂಧಿಸಿದ ಅಂತಾರಾಷ್ಟ್ರೀಯ ಒಪ್ಪಂದಗಳನ್ನು ಕಾರ್ಯಗತಗೊಳಿಸುವತ್ತ ಹೆಜ್ಜೆ ಹಾಕಬೇಕು ಎಂದೂ 95 ವರ್ಷದ ಅಟ್ಟೆ ನ್ ಬೊರೋ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ವಾಯುಭಾರ ಕುಸಿತ : ಅರಬಿ ಸಮುದ್ರದಲ್ಲಿ ಏಳಲಿದೆ “ತೌಕ್ತೇ’ ಚಂಡಮಾರುತ