Advertisement

ಜಲಮೂಲ ವೃದ್ಧಿಗೆ ಅರಣ್ಯ ಪೂರಕ: ಶಿಲ್ಫಾ

02:48 PM Mar 23, 2021 | Team Udayavani |

ಮಂಡ್ಯ: ಜಲಮೂಲಗಳ ಬೆಳವಣಿಗೆಗೆ ಅರಣ್ಯ ಪೂರಕವಾಗಿದೆ ಎಂದು ವಲಯ ಅರಣ್ಯಾ ಧಿಕಾರಿ ಶಿಲ್ಪಾ ತಿಳಿಸಿದರು.

Advertisement

ತಾಲೂಕಿನ ಮಂಗಲ ಗ್ರಾಮದ ಕೆರೆಯಂಗಳದಲ್ಲಿ ಪರಿಸರ ರೂರಲ್‌ ಡೆವಲಪ್‌ಮೆಂಟ್‌ ಸೊಸೈಟಿ, ಭೂಮಿ ಬೆಳಗು ಸಾಂಸ್ಕೃತಿಕ ಸಂಘ, ನೀರುಬಳಕೆದಾರರ ಸಹಕಾರ ಸಂಘ, ಭೂಮಿಕಾ ಇಕೋ ಕ್ಲಬ್‌ನ ವತಿಯಿಂದ ವಿಶ್ವ ಅರಣ್ಯ-ಜಲದ ದಿನದ ನಿಮಿತ್ತ ಪರಿಸರ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜಲಮೂಲ ವೃದ್ಧಿ: ಅಭಿವೃದ್ಧಿ ಹೆಸರಿನಲ್ಲಿ ಹಸಿರನ್ನು ನಿರ್ಮೂಲನೆ ಮಾಡುವಂಥ ಘಟನೆಗಳು ಹೆಚ್ಚುತ್ತಿವೆ. ಇದನ್ನು ತಡೆಗಟ್ಟಬೇಕಾಗಿರುವುದು ಅವಶ್ಯವಿದೆ. ಮಕ್ಕಳು ಬಾಲ್ಯಾವಸ್ಥೆಯಲ್ಲಿಯೇ ಈ ಚಿಂತನೆಯನ್ನು ಬೆಳೆಸಿಕೊಳ್ಳುವುದು ಅವಶ್ಯಕವಾಗಿದೆ ಎಂದು ಹೇಳಿದರು.

ನೂರಾರು ಹೆಕ್ಟೇರ್‌ ಪ್ರದೇಶಕ್ಕೆ ನೀರು: ಕಾವೇರಿ ನೀರಾವರಿ ನಿಗಮದ ಇಂಜಿನಿಯರ್‌ ಕೆಂಪರಾಜುಮಾತನಾಡಿ, ಮಂಗಲ ಕೆರೆಯು ನೂರಾರು ಹೆಕ್ಟೇರ್‌ಪ್ರದೇಶಕ್ಕೆ ನೀರುಣಿಸುವ ಕೆರೆಯಾಗಿದೆ. ಭತ್ತ ಮತ್ತುಕಬ್ಬು ಇಲ್ಲಿನ ಬಹುಮುಖ್ಯ ಬೆಳೆಯಾಗಿದ್ದು, ರೈತನ ಆರ್ಥಿಕಾಭಿವೃದ್ಧಿಗೆ ಈ ಕೆರೆಯು ಜೀವನಮಟ್ಟ ಸುಧಾರಿಸಲು ಸಾಧ್ಯವಾಗುತ್ತದೆ.

ಈ ಕೆರೆಗೆ ನೀರು ಬೃಹತ್‌ ನೀರಾವರಿ ಯೋಜನೆಯ ಕಾವೇರಿ ವಿ.ಸಿ.ನಾಲೆಯಿಂದ ಬಂದು ಮೇಲ್ಮಟ್ಟದಗದ್ದೆಗಳ ಮೂಲಕ ಕೆರೆ ಭರ್ತಿಯಾಗುತ್ತದೆ.ಜೋಂಡುಗಳು ಮತ್ತು ಪ್ಲಾಸ್ಟಿಕ್‌ನಂಥ ತ್ಯಾಜ್ಯವಸ್ತುಗಳನ್ನು ಗ್ರಾಮಸ್ಥರು ಕೆರೆಗೆ ಹಾಕದೆ ಕೆರೆಯನ್ನುಶುದ್ಧೀಕರಿಸಿ ವಿಶಾಲವಾಗಿ ಇರುವಂತೆ ಮಾಡಿದರೆಇಲ್ಲಿನ ಗ್ರಾಮದ ಜನರ ಬೆಳವಣಿಗೆಗೆ ಉಪಯುಕ್ತವಾಗುತ್ತದೆ ಎಂದರು.

Advertisement

ನೀರು ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷಶಂಕರೇಗೌಡ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಶಿಕ್ಷಕ ಚಂದ್ರಶೇಖರ್‌, ಇಕೋ ಕ್ಲಬ್‌ನ ಸಂಚಾಲಕಿಮಂಜುಳಾ, ಸಂಪನ್ಮೂಲ ವ್ಯಕ್ತಿ ಭೂಮಿಕಾ, ನೀರುಬಳಕೆದಾರರ ಸಹಕಾರ ಸಂಘದ ಕಾರ್ಯದರ್ಶಿಎಂ.ಬಿ.ಸುರೇಶ, ಪರಿಸರ ಸಂಸ್ಥೆಯ ಸಂಚಾಲಕ ರವಿ ಮಂಗಲ ಮತ್ತಿತರರು ಉಪಸ್ಥಿತರಿದ್ದರು.

ಮಂಗಲ ಕೆರೆಯ ನೀರಿನ ಬಳಕೆ ಹಾಗೂ ಕೆರೆಯಬಂಡು ಮೇಲಿದ್ದ ಸಸ್ಯ ಪ್ರಬೇಧಗಳ ಪರಿಚಯಿಸುವಿಕೆಯನ್ನು ಈ ಸಂದರ್ಭದಲ್ಲಿ ಪರಿಸರ ನಡಿಗೆ ಮೂಲಕ ಗ್ರಾಮಸ್ಥರಿಗೆ ಮತ್ತು ವಿದ್ಯಾರ್ಥಿಗಳಿಗೆ ನೀಡಲಾಯಿತು.

 

ಅರಣ್ಯೀಕರಣದಿಂದನಾವು ಜಲಮೂಲಗಳನ್ನು ಹೆಚ್ಚಿಸಬಹುದಾಗಿದೆ. ಮರಎಲೆಯ ಮೇಲೆ ಬಿದ್ದ ನೀರು, ತೊಗಟೆಯ ಮೂಲಕ ಮರದಬೇರನ್ನು ಸೇರಿ ಅಂತರ್ಜಲಮತ್ತು ಭೂಮಿಯಫಲವತ್ತತೆಯನ್ನುಕಾಯ್ದುಕೊಂಡು ಮುಂದಿನಜನಾಂಗಕ್ಕೆ ಒಳ್ಳೆಯಪರಿಸರವನ್ನು ಕೊಟ್ಟಂತಾಗುತ್ತದೆ. -ಶಿಲ್ಪಾ, ವಲಯ ಅರಣ್ಯಾ ಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next