ಕೂಡ್ಲಿಗಿ: ಪಟ್ಟಣದ ಸರ್ಕಾರಿ ಪದವಿಪೂರ್ವಕಾಲೇಜ್‌ನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ ವಿಶ್ವ ಜಲ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.
ಪ್ರಾಚಾರ್ಯ ನಾಗರಾಜ.ಸಿ. ಹವಾಲ್ದಾರ್ ಮಾತನಾಡಿ, ನಿಸರ್ಗದತ್ತವಾಗಿ ದೊರಕುವಜಲದ ಪ್ರಾಮುಖ್ಯತೆ, ಮಹತ್ವ, ಅಗತ್ಯತೆಹಾಗೂ ಅಮೂಲ್ಯತೆಯನ್ನು ವಿಶ್ವದ ಮನುಕುಲಕ್ಕೆ ಅರ್ಥವಾಗಿಸುವ ಸಲುವಾಗಿ ಪ್ರತಿವರ್ಷ ಮಾರ್ಚ್ 22ನ್ನು ವಿಶ್ವ ಜಲ ದಿನವನ್ನಾಗಿ ಪ್ರಪಂಚದೆಲ್ಲೆಡೆ ಆಚರಿಸಲಾಗುತ್ತದೆ. ಆದರೆ,ಪ್ರಸ್ತುತ ಸ್ಥಿತಿಯಲ್ಲಿ ಜಲ ದಿನವನ್ನು ಪ್ರತಿ ದಿನಆಚರಿಸಬೇಕಾದ ಸನ್ನಿವೇಶ ನಿರ್ಮಾಣವಾಗಿರುವುದಂತೂ ಸತ್ಯ ಎಂದರು.
ಭೂಮಿಯಶೇ. 70ಕ್ಕೂ ಹೆಚ್ಚು ಭಾಗವನ್ನು ಆವರಿಸಿರುವನೀರಿನಲ್ಲಿ ಕುಡಿಯಲು ಹಾಗೂ ದಿನ ಬಳಕೆಗೆಯೋಗ್ಯವಾಗಿರುವುದು (ಸಿಹಿ ನೀರು) ಕೇವಲಶೇ. 2ರಿಂದ 3ರಷ್ಟು ಮಾತ್ರ ಎಂಬುದುಅಚ್ಚರಿಯ ಸಂಗತಿ. ಈ ಯೋಗ್ಯ ನೀರಿನಲ್ಲಿಶೇ.1ರಷ್ಟು ಧ್ರುವ ಪ್ರದೇಶಗಳ ಹಿಮ ಮತ್ತು ನೀರ್ಗಲ್ಲುಗಳ ರೂಪದಲ್ಲಿ ಅಡಗಿ ಕುಳಿತಿದೆ ಎಂದರು.
ಆಧುನಿಕ ಜಗತ್ತಿನಲ್ಲಿ ಕುಗ್ಗುತ್ತಿರುವ ಶುದ್ಧನೀರು ಹಾಗೂ ನೀರಿನ ಅವಶ್ಯಕತೆಗಳು ಮೀರಿ ಹೆಚ್ಚು ಬಳಸುವಿಕೆ ಕುರಿತು ರಾಷೀóಯಸೇವಾ ಯೋಜನಾ ಕಾರ್ಯಕ್ರಮಾಧಿ ಕಾರಿಜಗದೀಶ್ಚಂದ್ರಬೋಸ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ನೀರಿನ ದುರ್ಬಳಕ್ಕೆ ಹೆಚ್ಚಾಗುತ್ತಿದ್ದುಅದನ್ನು ನಾವು ಮಿತವಾಗಿ ಬಳಸಿ ಅದರದುರ್ಬಳಕೆ ಬಗ್ಗೆ ಕಾಳಜಿವಹಿಸಬೇಕು ಎಂದುವಿದ್ಯಾರ್ಥಿಗಳಿಗೆ ತಿಳಿಸಿದರು. ಉಳಿದ ಭಾಗ ಕೆರೆ, ನದಿ, ಹಳ್ಳ-ಕೊಳ್ಳ, ಸರೋವರಗಳಲ್ಲಿ ಲಭ್ಯವಿದೆ. ಭೂಮಿಯ ಮೇಲೆ ಅತಿ ಹೆಚ್ಚುನೀರು ಸಮುದ್ರ ಮತ್ತು ಸಾಗರಗಳಲ್ಲಿಇದೆಯಾದರೂ ಅದು ಮಾನವರಿಗೆಕುಡಿಯಲು ಹಾಗೂ ದೈನಂದಿನ ಬಳಕೆಗೆಸ್ವಲ್ಪವೂ ಯೋಗ್ಯವಾಗಿಲ್ಲ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.
ಉಪನ್ಯಾಸಕರಾದವೆಂಕಟೇಶ ಜೆ. ಮಾತನಾಡಿ, ಮಾನವ ಹಾಗೂ ಪ್ರಾಣಿ-ಪಕ್ಷಿ ಸಂಕುಲ ಆಹಾರವಿಲ್ಲದೆ ಹಲವಾರು ದಿನಗಳು ಬದುಕಬಹುದು. ಆದರೆ, ಕುಡಿಯುವ ನೀರಿಲ್ಲದೆ ಒಂದು ದಿನಬದುಕುವುದೂ ಅತೀ ಕಷ್ಟದ ಮಾತು. ತಿನ್ನಲು ಆಹಾರವಿಲ್ಲದಿದ್ದರೂ ಸಹ ಕುಡಿಯುವನೀರು ನಮ್ಮ ಜೀವವನ್ನು ಹಲವು ದಿನಗಳಕಾಲ ಉಳಿಸುವ ಸಂಜೀವಿನಿಯೇ ಸರಿ.ಈ ಸತ್ಯ ಸಂಗತಿಯಿಂದಾಗಿಯೇ ಪ್ರತಿಜೀವ ಸಂಕುಲಕ್ಕೆ ನೀರು ಎಂಬುದು ಪ್ರಕೃತಿನೀಡಿರುವ ಜೀವಹನಿ, ಅಮೃತ ಎಂದರು. ಈಸಂದರ್ಭದಲ್ಲಿ ಉಪನ್ಯಾಸಕ ಬಸವರಾಜ್‌ಗೌಡ್ರು, ಶ್ರೀನಿವಾಸ್ ಶರಣಬಸಯ್ಯ ಸುಮಾಎನ್. ಸುರೇಖಾ, ಕೋಟ್ರೇಶ, ನಾಗರಾಜ್ ರಾಘವೇಂದ್ರ ಉಪಸ್ಥಿತರಿದ್ದರು.