Advertisement

ವಿಶ್ವ ಕ್ಷಯರೋಗ ನಿರ್ಮೂಲನ ದಿನಾಚರಣೆ 

10:23 AM Mar 25, 2018 | |

ಮಹಾನಗರ: ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದರೂ ಕ್ಷಯ ರೋಗ ಸಂಪೂರ್ಣವಾಗಿ ನಿರ್ಮೂಲನೆಯಾಗಿಲ್ಲ. ಹಾಗಾಗಿ ಈ ರೋಗದ ಬಗ್ಗೆ ಜಾಗೃತಿಯನ್ನು ವಿಸ್ತಾರಗೊಳಿಸಬೇಕಾಗಿದೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಎಂ.ಆರ್‌. ರವಿ ಹೇಳಿದರು.

Advertisement

ವೆನ್ಲಾ ಕ್‌ ಆಸ್ಪತ್ರೆಯ ಆರ್‌ಎಪಿಸಿಸಿ ಸಭಾಂಗಣದಲ್ಲಿ ದ.ಕ. ಜಿಲ್ಲಾಡಳಿತ, ಜಿ.ಪಂ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕ್ಷಯ ಚಿಕಿತ್ಸಾ ಕೇಂದ್ರ, ದ.ಕ. ಜಿಲ್ಲಾ ಕ್ಷಯರೋಗ ನಿವಾರಣಾ ಸಂಘ, ಲಕ್ಷ್ಮೀ ಮೆಮೋರಿಯಲ್‌ ನರ್ಸಿಂಗ್‌ ಕಾಲೇಜು ಸಹಭಾಗಿತ್ವದಲ್ಲಿ ಶನಿವಾರ ಆಯೋಜಿಸಲಾದ ವಿಶ್ವ ಕ್ಷಯರೋಗ ನಿರ್ಮೂಲನ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಮ್ಮಾನ
ಸಮಾರಂಭದಲ್ಲಿ ಕ್ಷಯ ರೋಗ ನಿರ್ಮೂಲನೆಗೆ ಸಂಬಂಧಿಸಿ ದ.ಕ. ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸಿದ ಸಾಧಕರಾದ ಡೊಮಿನಿಕ್‌ ಡೇವಿಡ್‌ ಡಿ’ಸೋಜಾ, ಕಿಶೋರ್‌ ಪಿ.ವಿ., ಜೆನೆಟ್‌ ಎಸ್‌. ಡಿ’ಸೋಜಾ, ಬಬಿತಾ, ಸುದೇಶ್‌ ಕೆ. ಅವರನ್ನು ಸಮ್ಮಾನಿಸಲಾಯಿತು.

ಜಿಲ್ಲಾ ಆರೋಗ್ಯ ಅಧಿಕಾರಿ ಡಾ| ರಾಮಕೃಷ್ಣ ರಾವ್‌ ಪ್ರಾಸ್ತಾವಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಫಾದರ್‌ ಮುಲ್ಲರ್‌ ವೈದ್ಯಕೀಯ ಕಾಲೇಜನ ಸಹಾಯಕ ಪ್ರೊಫೆಸರ್‌ ಡಾ| ಕವೀನ ಫೆರ್ನಾಂಡಿಸ್‌, ಅಂಬ್ಲಿಮೊಗರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಸುದೇಶ್‌ ಕೆ., ವೆನ್ಲಾಕ್‌ ಆಸ್ಪತ್ರೆಯ ಅಧೀಕ್ಷಕಿ ಡಾ| ರಾಜೇಶ್ವರಿ ದೇವಿ, ಲೇಡಿಗೋಶನ್‌ ಆಸ್ಪತ್ರೆಯ ಮುಖ್ಯಸ್ಥೆ ಡಾ| ಸವಿತಾ, ಜಿಲ್ಲಾ ಕ್ಷಯ ನಿಯಂತ್ರಣಾಧಿಕಾರಿ ಡಾ| ಬದ್ರುದ್ದೀನ್‌, ಲಕ್ಷ್ಮೀ ಮೆಮೋರಿಯಲ್‌ ನರ್ಸಿಂಗ್‌ ಕಾಲೇಜಿನ ಪ್ರಾಂಶುಪಾಲ ಡಾ| ಲಾರಿಸ್ಸಾ ಮಾರ್ಥಾ ಸ್ಯಾಮ್ಸ್‌, ಇಂದಿರಾ ನರ್ಸಿಂಗ್‌ ಕಾಲೇಜಿನ ಪ್ರಾಂಶುಪಾಲರಾದ ವಿಮಲಾ ಪ್ರಸಾದ್‌, ಡಾ| ಅರುಣ್‌ ಕುಮಾರ್‌ ಮೊದಲಾದವರು ಉಪಸ್ಥಿತರಿದ್ದರು. ಮತದಾನದ ಬಗ್ಗೆ ಅರಿವು ಮೂಡಿಸಲು ಪ್ರತಿಜ್ಞೆಯನ್ನು ಬೋಧಿಸಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next