Advertisement
ಜಿಲ್ಲಾಡಳಿತದ ವತಿಯಿಂದ ಮಂಗಳೂರಿನಲ್ಲಿ ಬುಧವಾರ ಆಯೋಜಿಸಲಾಗಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ದ.ಕ. ಜಿಲ್ಲೆ ಪ್ರವಾಸೋದ್ಯಮಕ್ಕೆ ಪೂರಕವಾದ ಎಲ್ಲ ಅಗತ್ಯಗಳನ್ನು ಹೊಂದಿದ್ದು ಇದರ ಪ್ರಯೋಜನ ಪಡೆಯಬೇಕು. ಸ್ವಚ್ಛತೆ, ಶಿಸ್ತಿಗೆ ಆದ್ಯತೆ ನೀಡಬೇಕು. ಬೀಚ್, ರೆಸಾರ್ಟ್‌ಗಳ ಜತೆಗೆ ಇತರ ಪ್ರವಾಸೋದ್ಯಮ ಕ್ಷೇತ್ರಗಳನ್ನು ಸೇರಿಸಿ ಯೋಜನೆ ರೂಪಿಸಬೇಕು. ಮೀನುಗಾರರಿಗೂ ಪ್ರವಾಸೋದ್ಯಮದಿಂದ ಪ್ರಯೋಜನ ಸಿಗಬೇಕು. ಕರಾವಳಿಯ ಸಂಸ್ಕೃತಿ ಪರಂಪರೆಯನ್ನು ಬಿಂಬಿಸುವ “ತುಳುಗ್ರಾಮ’ ಮಾದರಿಯ ಮ್ಯೂಸಿಯಂ ನಿರ್ಮಾಣ, ನಗರದಲ್ಲಿ ಲೈಟ್ ಹೌಸ್ ನಿರ್ಮಾಣ ಮೊದಲಾದವುಗಳ ಅಗತ್ಯವೂ ಇದೆ. ಪ್ರವಾಸಿ ತಾಣಗಳನ್ನು ಸಂಪರ್ಕಿಸುವ “ಕೋಸ್ಟಲ್ ಸಕೀìಟ್’ ಯೋಜನೆ ಸಾಕಾರಗೊಳ್ಳಬೇಕು. ಸರಕಾರದಿಂದ ಅಗತ್ಯವಿರುವ ಅನುದಾನ ಒದಗಿಸಿಕೊಡಲು ಪ್ರಯತ್ನಿಸುವುದಾಗಿ ಖಾದರ್ ಹೇಳಿದರು.
ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಮಾಣಿಕ್ಯ ಮಾತ ನಾಡಿ, ತಣ್ಣೀರುಬಾವಿ ಬೀಚ್‌ಗೆ
ಬ್ಲ್ಯೂಫ್ಲ್ಯಾಗ್ ಅನುಮೋದನೆ ಯಾಗಿದ್ದು ಕೇಂದ್ರದ ಪರಿಸರ ಮತ್ತು ಅರಣ್ಯ ಸಚಿವಾಲಯದಿಂದ ಶೇ. 90 ಕಾಮಗಾರಿ ಪೂರ್ಣಗೊಂಡಿದೆ. ಉಳ್ಳಾಲದ ಮೊಗವೀರಪಟ್ಣ ಬೀಚ್‌ನಿಂದ ಮುಕ್ಕಚ್ಚೇರಿ ಬೀಚ್‌ವರೆಗೆ ಪ್ರವಾಸಿ ತಾಣ ಅಭಿವೃದ್ಧಿಗೆ 1 ಕೋಟಿ ರೂಪಾಯಿ ಪ್ರಸ್ತಾವನೆ ಕಳುಹಿಸಲಾಗಿದೆ. ಪಣಂಬೂರು ಬೀಚ್ ಅಭಿವೃದ್ಧಿಗೆ ಟೆಂಡರ್ ಕರೆಯಲಾಗಿದೆ ಎಂದರು. ಬದಲಾವಣೆಗೆ ಅಡ್ಡಿ ಸಲ್ಲದು
ಮಂಗಳೂರಿನಲ್ಲಿ ರಿವರ್ ಫ್ರಂಟ್, ಪ್ರವಾಸಿ ಜೆಟ್ಟಿ, ಸೇತುವೆ ಸೇರಿದಂತೆ ಪ್ರವಾಸೋದ್ಯಮ, ಮೂಲಸೌಕರ್ಯ ಅಭಿವೃದ್ಧಿಗೆ ಪೂರಕವಾದ ಅನೇಕ ಮಹತ್ವದ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದ್ದು ಎಲ್ಲರ ಸಹಕಾರದ ಅಗತ್ಯವಿದೆ ಎಂದು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಹೇಳಿದರು.
Related Articles
Advertisement