Advertisement

ವಿಶ್ವ ರಂಗಭೂಮಿ ದಿನಾಚರಣೆ: ನಶಿಸುತ್ತಿರುವ ರಂಗಕಲೆಗೆ ಪ್ರೋತ್ಸಾಹ ಅಗತ್ಯ

11:05 AM Mar 27, 2023 | Team Udayavani |

ದೇವನಹಳ್ಳಿ: ದೃಶ್ಯಮಾದ್ಯಮಗಳ ಮಾಧ್ಯಮಗಳ ಹಾವಳಿಯಿಂದ ನಶಿಸಿಹೋಗುತ್ತಿರುವ ರಂಗಕಲೆ ಯನ್ನು ಪ್ರೋತ್ಸಾಹಿಸಿ ಉಳಿಸಿ ಬೆಳೆಸಬೇಕು. ರಂಗಕಲೆ ಯನ್ನು ಜೀವಂತವಾಗಿಡುವಲ್ಲಿ ಅಂತಾರಾ ಷ್ಟ್ರೀಯ ರಂಗಸಂಸ್ಥೆ (ಐಟಿಐ) 1962ರಿಂದ ಪ್ರತಿ ವರ್ಷ ಜಗತ್ತಿನಾದ್ಯಂತ ವಿಶ್ವ ರಂಗ ದಿನ ಆಚರಿಸುತ್ತಿರುವುದು ಸ್ವಾಗತಾರ್ಹ, ಹಾಗೂ ಹೆಮ್ಮೆಯ ಸಂಗತಿಯಾಗಿದೆ.

Advertisement

ಮಾದ್ಯಮಗಳ ಹಾವಳಿಯಿಂದ ನಾಟಕಗಳು ನಶಿಸಿಹೋಗುತ್ತಿವೆ. ಪೌರಾಣಿಕ ನಾಟಕಗಳಲ್ಲಿ ಹೊಸತನ ಮೂಡಿಬರಬೇಕಾಗಿದೆ. ಇಂದು ರಂಗಭೂಮಿ ಕಲಾವಿದರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿ ದ್ದಾರೆ. ರಂಗಭೂಮಿಗೆ ಎಲ್ಲಾ ರಂಗ ದಿಗ್ಗಜರೂ ನೀಡಿರುವ ಕೊಡುಗೆಗಳು ಇಂದು ನೇಪಥ್ಯಕ್ಕೆ ಸರಿದಿವೆ. ಡಾ.ರಾಜ್‌ಕುಮಾರ್‌ ಗುಬ್ಬಿ ವೀರಣ್ಣ ನಾಟಕ ಕಂಪನಿ ಯಲ್ಲಿ ಸಣ್ಣ ಪಾತ್ರಗಳನ್ನು ಮಾಡುತ್ತಾ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು.

ಮುಚ್ಚಿಹೋದ ನಾಟಕ ಕಂಪನಿಗಳು: ಆಗಿನ ಕಾಲದಲ್ಲಿ ಗುಬ್ಬಿ ವೀರಣ್ಣ ನಾಟಕ ಮಂಡಳಿ, ನಾಟಕ ಶಿರೋಮಣಿ ವರದರಾಜ ಕಲಾಸಂಘ ದಂತಹ ಸಾವಿರಾರು ಕಲಾವಿದರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ ಹತ್ತು ಹಲವು ನಾಟಕ ಕಂಪನಿಗಳು ಸರ್ಕಾರದ ಪ್ರೋತ್ಸಾಹ ಸಿಗದೇ ಮುಚ್ಚಿಹೋಗಿವೆ ಎಂಬುದು ಕನ್ನಡ ಕಲಾಕ್ಷೇತ್ರದ ಬಹುದೊಡ್ಡ ದುರಂತ ಎನ್ನದೆ ವಿಧಿಯಿಲ್ಲ.

ಸುಮಾರು 55 ವರ್ಷಕ್ಕೂ ಹೆಚ್ಚು ಕಾಲ ಹೆಸರಾಂತ ಕಂಪನಿಗಳಲ್ಲಿ ವೃತ್ತಿ ರಂಗಭೂಮಿ, ಹವ್ಯಾಸಿ ರಂಗಭೂಮಿಗಳಲ್ಲಿ ಸೇವೆ ಸಲ್ಲಿಸಿರುತ್ತೇನೆ. ಸರ್ಕಾರ ರಂಗಭೂಮಿ ಕಲಾವಿದರಿಗೆ ನೆರವಾಗಬೇಕು. ● ಬಿ.ಕೆ. ಗೊಪಾಲ್‌, ಹಿರಿಯ ರಂಗಭೂಮಿ ಕಲಾವಿದರು.

ಜಿಲ್ಲೆಯಲ್ಲಿ 585 ಜನ ರಂಗಭೂಮಿ ಕಲಾ ವಿದರು ಮಾಸಾಶನ ಪಡೆಯುತ್ತಿದ್ದಾರೆ. ಅದರಲ್ಲಿ 10 ಜನ ವಿಧವಾ ಮಾಸಾಶನ ಪಡೆಯುತ್ತಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಉಳಿಸಿ ಬೆಳಸುವ ಕೆಲಸವನ್ನು ಜಿಲ್ಲೆಯಲ್ಲಿ ಮಾಡಲಾಗುತ್ತಿದೆ. ● ರವಿಕುಮಾರ್‌, ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂ.ಗ್ರಾ.

Advertisement

ಕಳೆದ 20ವರ್ಷಗಳಿಂದ ಕಲೆಗೆ ಹೆಚ್ಚಿನ ಮಹತ್ವವನ್ನು ನೀಡಿ ನಾಟಕಗಳನ್ನು ಮಾಡಿಕೊಂಡು ಬರಲಾಗಿದೆ. ಕಲಾವಿದರನ್ನು ಹೆಚ್ಚು ಪ್ರೋತ್ಸಾಹಿಸುವ ಕೆಲಸ ಆಗಬೇಕು. ಸರ್ಕಾರವು ಕಲಾವಿದರಿಗೆ 60ವರ್ಷದ ನಂತರ ಮಾಶಾಸನ ನೀಡುತ್ತಿದ್ದು ಅದನ್ನು 50ವರ್ಷಕ್ಕೆ ಇಳಿಸಬೇಕು. ಕಲಾವಿದರು ಸಾಕಷ್ಟು ಸಮಸ್ಯೆಗಳಲ್ಲಿ ಸಿಲುಕಿದ್ದಾರೆ. ● ಸೀಕಾಯನಹಳ್ಳಿ ಶ್ರೀಧರ್‌ ಗೌಡ, ಜಿಲ್ಲಾ ಕಲಾವಿದರ ಉಪಾಧ್ಯಕ್ಷ

ಕಲಾವಿದರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕಲಾಪೋಷಕರ ಕೊರತೆ ಕಾಡುತ್ತಿದೆ. ಕಲಾವಿದರಿಗೆ ಸರ್ಕಾರ 2000 ಮಾಸಾಶನ ನೀಡುತ್ತಿದೆ. ಅದೂ ಸಾಕಾಗುತ್ತಿಲ್ಲ. ಕಲೆಯನ್ನೇ ನಂಬಿ ಜೀವಿಸುತ್ತಿ ರುವವರಿಗೆ ಪ್ರೋತ್ಸಾಹ ನೀಡಬೇಕು. ● ರಬ್ಬನಹಳ್ಳಿ ಕೆಂಪಣ್ಣ, ಜಿಲ್ಲಾಧ್ಯಕ್ಷರು, ರಂಗಭೂಮಿ ಕಲಾವಿದರ ಸಂಘ.

-ಎಸ್‌ ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next