Advertisement
ದಕ್ಷಿಣ ಆಫ್ರಿಕಾ ತನ್ನ ಗೆಲುವಿನ ಪ್ರತಿಶತ ಸಾಧನೆಯ ಅಂಕವನ್ನು (ಪಿಸಿಟಿ) 66.67ಕ್ಕೆ ಏರಿಸಿಕೊಂಡಿದೆ. ಆಸ್ಟ್ರೇಲಿಯ ದ್ವಿತೀಯ (58.89), ಭಾರತ ತೃತೀಯ ಸ್ಥಾನದಲ್ಲಿದೆ (55.88).ಗೆಲುವಿಗೆ 148 ರನ್ನುಗಳ ಸುಲಭ ಸವಾಲು ಪಡೆದಿದ್ದ ದಕ್ಷಿಣ ಆಫ್ರಿಕಾ, 3ನೇ ದಿನದಾಟದ ಅಂತ್ಯಕ್ಕೆ 27 ರನ್ನಿಗೆ 3 ವಿಕೆಟ್ ಉದುರಿಸಿಕೊಂಡಿತ್ತು.
ದಕ್ಷಿಣ ಆಫ್ರಿಕಾ ಐಸಿಸಿ ಟೆಸ್ಟ್ ಚಾಂಪಿ ಯನ್ಶಿಪ್ ಫೈನಲ್ ಪ್ರವೇಶಿಸಿದ್ದು ಇದೇ ಮೊದಲು. ಅದು ತನ್ನ 3ನೇ ಆವೃತ್ತಿಯನ್ನು ನ್ಯೂಜಿಲ್ಯಾಂಡ್ ವಿರುದ್ಧ ಸೋಲಿನೊಂದಿಗೆ ಆರಂಭಿಸಿತ್ತು. ಬಳಿಕ ಭಾರತದ ವಿರುದ್ಧ 1-1 ಸಮಬಲ ಸಾಧಿಸಿತು. ಅನಂತರ ವೆಸ್ಟ್ ಇಂಡೀಸ್, ಬಾಂಗ್ಲಾದೇಶ, ಶ್ರೀಲಂಕಾವನ್ನು ಮಣಿಸಿ ಅಗ್ರಸ್ಥಾನಕ್ಕೆ ನೆಗೆಯಿತು. ಇದೀಗ ಪಾಕಿಸ್ಥಾನವನ್ನು ಮಣಿಸಿ ಪ್ರಶಸ್ತಿ ಸುತ್ತು ಪ್ರವೇಶಿಸಿದೆ.
Related Articles
Advertisement
ಸಂಕ್ಷಿಪ್ತ ಸ್ಕೋರ್: ಪಾಕಿಸ್ಥಾನ-211 ಮತ್ತು 237. ದಕ್ಷಿಣ ಆಫ್ರಿಕಾ-301 ಮತ್ತು 8 ವಿಕೆಟಿಗೆ 150.