Advertisement
ಭಾರತ ಬೇರೆ ತಂಡಗಳ ಹಂಗಿ ಲ್ಲದೆ ಫೈನಲ್ ಪ್ರವೇಶಿಸಬೇಕಾದರೆ ಮುಂಬರುವ ಆಸ್ಟ್ರೇಲಿಯ ಪ್ರವಾಸದ 5 ಟೆಸ್ಟ್ಗಳಲ್ಲಿ ನಾಲ್ಕನ್ನು ಗೆಲ್ಲಬೇಕು. ಇಲ್ಲವಾದರೆ ಶ್ರೀಲಂಕಾದ ಟೆಸ್ಟ್ ಫಲಿತಾಂಶವನ್ನು ಅವಲಂಬಿಸಬೇಕು. ಅದು ಆಸ್ಟ್ರೇಲಿಯ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಆಡಲಿದೆ.
ಎರಡೂ ಇನ್ನಿಂಗ್ಸ್ಗಳಲ್ಲಿ (60, 64) ರಿಷಭ್ ಪಂತ್ ಹೋರಾಟಕಾರಿ ಬ್ಯಾಟಿಂಗ್ ಮಾಡಿ ಇನ್ನಿಂಗ್ಸ್ ಅನ್ನು ಕಟ್ಟಿದ್ದರು. 2ನೇ ಇನ್ನಿಂಗ್ಸ್ನಲ್ಲಿ ಅವರು 7ನೇಯವರಾಗಿ ಔಟಾಗುವಾಗ ಭಾರತದ ಮೊತ್ತ 106 ಆಗಿತ್ತು. ಆ ಹೊತ್ತಿನಲ್ಲಿ ಅಜಾಜ್ ಎಸೆತದಲ್ಲಿ ಪಂತ್ ಬಾರಿಸಿದ ಚೆಂಡು ವಿಕೆಟ್ ಕೀಪರ್ ಕೈಸೇರಿತು. ಆನ್ಫೀಲ್ಡ್ ಅಂಪಾಯರ್ ನಾಟೌಟ್ ಕೊಟ್ಟರು. ಡಿಆರ್ಎಸ್ನಲ್ಲೂ ಔಟ್ ಸ್ಪಷ್ಟವಾಗಲಿಲ್ಲ. ಕಡೆಗೆ ತೃತೀಯ ಅಂಪಾಯರ್ ಇಲ್ಲಿಂಗ್ವರ್ತ್ ಚೆಂಡು ಬ್ಯಾಟ್ಗೆ ತಾಕಿರುವ ಸಣ್ಣ ಸುಳಿವಿನ ಆಧಾರದಲ್ಲಿ ಔಟ್ ನೀಡಿದರು. ಇದನ್ನು ಪಂತ್ ಬಲವಾಗಿ ಪ್ರತಿಭಟಿಸಿದರು. ಮೂರೇ ದಿನಕ್ಕೆ ಮುಗಿದ ಮೂರೂ ಟೆಸ್ಟ್ !
ಮುಂಬಯಿಯ ವಾಂಖೇಡೆ ಟೆಸ್ಟ್ ಕೇವಲ ಎರಡೂವರೆ ದಿನಗಳಲ್ಲಿ ಮುಗಿದು ಹೋಯಿತು. ವಿಚಿತ್ರವೆಂದರೆ ಬೆಂಗಳೂರು ಹಾಗೂ ಪುಣೆ ಪಂದ್ಯಗಳು ಕೂಡ 3 ದಿನಗಳಲ್ಲೇ ಮುಗಿದು ಹೋಗಿದ್ದವು. ಬೆಂಗಳೂರು ಪಂದ್ಯದ ವೇಳೆ ಮಳೆ ಸುರಿದಿದ್ದರಿಂದ 2 ದಿನಕ್ಕೂ ಹೆಚ್ಚು ಕಾಲ ಪಂದ್ಯ ನಡೆದಿರಲೇ ಇಲ್ಲ.
Related Articles
ಭಾರತೀಯ ತಂಡದ ಸೋಲಿಗೆ ಬ್ಯಾಟಿಂಗ್ ಕೈಕೊಟ್ಟಿದ್ದು ಪ್ರಧಾನ ಕಾರಣ. ಅದರಲ್ಲೂ ಹಿರಿಯ ಬ್ಯಾಟರ್ಗಳಾದ ವಿರಾಟ್ ಕೊಹ್ಲಿ, ನಾಯಕ ರೋಹಿತ್ ಶರ್ಮ ಸಂಪೂರ್ಣ ವೈಫಲ್ಯ ಅನುಭವಿಸಿದರು. ಇಬ್ಬರೂ 3 ಟೆಸ್ಟ್ಗಳ 6 ಇನ್ನಿಂಗ್ಸ್ಗಳಲ್ಲಿ ಕ್ರಮವಾಗಿ 93, 91 ರನ್ ಗಳಿಸಿದ್ದಾರೆ.
Advertisement