ದಕ್ಷಿಣ ಕೊರಿಯಾದಲ್ಲಿ ನಡೆಯುತ್ತಿ ರುವ ಶೂಟಿಂಗ್ ವಿಶ್ವಚಾಂಪಿಯನ್‌ಶಿಪ್‌ನ 50ಮೀ. ಪಿಸ್ತೂಲ್ ವಿಭಾಗದಲ್ಲಿ ಓಂಪ್ರಕಾಶ್ ಮಿತರ್ವಾಲ್ 564 ಅಂಕ ಗಳಿಸುವ ಮೂಲಕ ಚಿನ್ನದ ಪದಕ ಪಡೆದಿದ್ದಾರೆ. ಸರ್ಬಿಯಾದ ದಮಿರ್ ಮಿಕೆಕ್ ಬೆಳ್ಳಿ (562), ಸ್ಥಳೀಯ ಫೇವರಿಟ್ ದೇಯಾಂಗ್ ಲೀ ಕಂಚು (560) ಪದಕ ಗೆದ್ದರು.
Advertisement
23ರ ಹರೆಯದ ಮಿತರ್ವಾಲ್ ಈ ವರ್ಷ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನ 10 ಮೀ. ಏರ್ ಪಿಸ್ತೂಲ್‌ನಲ್ಲಿ ಮತ್ತು 50 ಮೀ. ಪಿಸ್ತೂಲ್ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದರು. ಇಲ್ಲಿ ಅಮೋಘ ನಿರ್ವಹಣೆ ನೀಡುವ ಮೂಲಕ ಮಿತರ್ವಾಲ್ ಚಿನ್ನ ಗೆದ್ದು ಸಂಭ್ರಮಿಸಿದರು. 2014ರ ಕೂಟದಲ್ಲಿ ಬೆಳ್ಳಿಯ ಪದಕ ಜಯಿಸಿದ್ದ ಅನುಭವಿ ಜಿತು ರಾಯ್ 552 ಅಂಕ ಗಳಿಸುವ ಮೂಲಕ 17ನೇ ಸ್ಥಾನಕ್ಕೆ ಜಾರಿ ನಿರಾಶೆಗೊಳಿಸಿದರು. ಇದೇ ವಿಭಾಗದಲ್ಲಿ ನಡೆದ ತಂಡ ಸ್ಪರ್ಧೆಯಲ್ಲಿ ಮಿತರ್ವಾಲ್, ರಾಯ್, ಮನ್‌ಜಿàತ್ ಒಟ್ಟು 1648 ಅಂಕಗಳೊಂದಿಗೆ 5ನೇ ಸ್ಥಾನ ಪಡೆದರು. ವೈಯಕ್ತಿಕ ವಿಭಾಗದಲ್ಲಿ ಮನ್‌ಜಿàತ್ ಅವರು ಜಿತು ರಾಯ್ ಅವರೊಂದಿಗೆ ಫೈನಲ್ ಪ್ರವೇಶಿಸುವಲ್ಲಿ ವಿಫಲರಾದರು.
ಒಲಿಂಪಿಕ್ಸ್ ಅರ್ಹತೆ ಗಿಟ್ಟಿಸಿಕೊಳ್ಳ ಬಹುದಾಗಿದ್ದ ಭಾರತದ ವನಿತಾ ಶೂಟರ್‌ಗಳು 10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಮುಗ್ಗರಿಸಿದ್ದಾರೆ. ಶೂಟರ್‌ಗಳಾದ ಮನು ಭಾಕರ್, ಹೀನಾ ಸಿಧು ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ಶಕ್ತರಾಗಲಿಲ್ಲ. ಭಾಕರ್ 574 ಅಂಕಗಳೊಂದಿಗೆ 13ನೇ ಸ್ಥಾನ ಪಡೆದರೆ, ಹೀನಾ ಸಿಧು 571 ಅಂಕಗಳೊಂದಿಗೆ 29ನೇ ಸ್ಥಾನಕ್ಕೆ ಇಳಿದರು. ವನಿತಾ ತಂಡ ವಿಭಾಗದಲ್ಲಿ ಭಾಕರ್, ಸಿಧು, ಶ್ವೇತಾ ಸಿಂಗ್ ಅವರನ್ನೊಳಗೊಂಡ ತಂಡ ಒಟ್ಟು 1713 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆಯಿತು. ಸೌರಭ್ ಜೋಡಿಗೆ ಕಂಚು
ಕಿರಿಯರ ವಿಭಾಗದಲ್ಲಿ ಏಶ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಸೌರಭ್ ಚೌಧುರಿ-ಅಭಿದನ್ಯಾ ಪಾಟೀಲ್ ಜೋಡಿ 10ಮೀ. ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದಲ್ಲಿ 329.6 ಅಂಕ ಪಡೆದು ಕಂಚಿನ ಪದಕ ಬಾಚಿಕೊಂಡಿದೆ. ಚಿನ್ನ, ಬೆಳ್ಳಿ ಎರಡೂ ಪದಕಗಳು ದಕ್ಷಿಣ ಕೊರಿಯಾ ಪಾಲಾಗಿವೆ.