Advertisement

ಝೂನಲ್ಲಿ ವಿಶ್ವ ಘೇಂಡಾಮೃಗ ದಿನಾಚರಣೆ

09:29 PM Sep 22, 2019 | Lakshmi GovindaRaju |

ಮೈಸೂರು: ವಿಶ್ವ ಘೇಂಡಾಮೃಗ ದಿನದ ಅಂಗವಾಗಿ ಚಾಮರಾಜೇಂದ್ರ ಮೃಗಾಲಯದಲ್ಲಿ ಭಾನುವಾರ ಪ್ರವಾಸಿಗರಿಗೆ ಫೇಂಡಾಮೃಗಗಳ ಬಗ್ಗೆ ಮಾಹಿತಿ ನೀಡುವ ಮೂಲಕ ಅವುಗಳ ಸಂತತಿ ರಕ್ಷಣೆ ಬಗೆಗೆ ಅರಿವು ಮೂಡಿಸಲಾಯಿತು.

Advertisement

ಮೃಗಾಲಯದಲ್ಲಿನ ಘೇಂಡಾಮೃಗಗಳ ಕೇಜ್‌ ಬಳಿ ಮೃಗಾಲಯದ ವತಿಯಿಂದ ವಿಶ್ವ ಘೇಂಡಾಮೃಗಗಳ ದಿನ ಶುಭಾಶಯ ಕೋರುವ ಬ್ಯಾನರ್‌ ಹಾಕಿ, ಘೇಂಡಾಮೃಗಗಳ ಜೀವನ ಕ್ರಮ ವಿವರಣೆ ನೀಡಲು ಓರ್ವ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ದಿನಾಚರಣೆ ಭಾನುವಾರವಾಗಿದ್ದ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿತ್ತು. ಅಲ್ಲದೆ ಯೂತ್‌ ಕ್ಲಬ್‌ ವಿದ್ಯಾರ್ಥಿಗಳ ತರಗತಿಯೂ ನಡೆಯುತ್ತಿದ್ದರಿಂದ ಘೇಂಡಾಮೃಗ ದಿನಾಚರಣೆಯಲ್ಲಿ ಪಾಲ್ಗೊಂಡು ಮಾಹಿತಿ ಕಲೆ ಹಾಕಿದರು.

ಪ್ರವಾಸಿಗರಿಗೆ ವಿವರಿಸಲು ಮೃಗಾಲಯದ ಜೀವಶಾಸ್ತ್ರಜ್ಞರಾದ ಸಿ.ಸ್ನೇಹಾ ಎಂಬುವರನ್ನು ನಿಯೋಜಿಸಲಾಗಿತ್ತು. ಸಸ್ಯಹಾರಿ ಪ್ರಾಣಿಯಾಗಿರುವ ಘೇಂಡಾಮೃಗವು ಐದು ಪ್ರಬೇಧಗಳಲ್ಲಿ ಕಂಡು ಬರುತ್ತವೆ. ಬಿಳಿ ಮತ್ತು ಕಪ್ಪು ಘೇಂಡಾಮೃಗ, ಒಂದು ಕೊಂಬಿನ ಘೇಂಡಾಮೃಗ, ಸುಮಾತ್ರ ಘೇಂಡಾಮೃಗ ಹಾಗೂ ಜಾವನ್‌ ಘೇಂಡಾಮೃಗ ಎಂದು ವಿಂಗಡಿಸಲಾಗಿದೆ.

ವಿಶ್ವದಲ್ಲಿಯೇ ಕೇವಲ 30 ಸಾವಿರವಷ್ಟೇ ಘೇಂಡಾಮೃಗಳಿದ್ದು, ಅಳಿವಿನಂಚಿನಲ್ಲಿರುವ ಪ್ರಾಣಿಯಾಗಿದೆ. ಭಾರತದಲ್ಲಿ 2600 ಘೇಂಡಾಮೃಗಗಳು ಇವೆ. ಅಸ್ಸಾಂ ಹೆಚ್ಚಿನ ಸಂಖ್ಯೆಯಲ್ಲಿ ಘೇಂಡಾಮೃಗ ಹೊಂದಿರುವ ರಾಜ್ಯವಾಗಿದೆ. ಆದರೆ ಈ ಪ್ರಾಣಿಯನ್ನು ಕೊಂಬಿಗಾಗಿ ಬೇಟೆಯಾಡುತ್ತಿದ್ದಾರೆ.

ಇದನ್ನು ತಪ್ಪಿಸಿ ಮುಂದಿನ ಪೀಳಿಗೆಗೆ ಕೊಡುಗೆ ನೀಡುವ ನಿಟ್ಟಿನಲ್ಲಿ ವಿಶ್ವ ವನ್ಯಜೀವಿ ನಿಧಿ ಸಂಸ್ಥೆಯು 2010ರಿಂದ ಸೆ.22ರಂದು ವಿಶ್ವ ಘೇಂಡಾಮೃಗ ದಿನವಾಗಿ ಆಚರಿಸುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಮೈಸೂರು ಮೃಗಾಲಯದಲ್ಲಿ ಒಂದು ಜೊತೆ ಬಿಳಿ ಘೇಂಡಾಮೃಗ, ಒಂದು ಜೋಡಿ ಭಾರತೀಯ ಘೇಂಡಾಮೃಗವಿದೆ ಎಂದು ಪ್ರವಾಗಿಸಿಗರಿಗೆ ವಿವರಿಸಿದರು.

Advertisement

ಇದೇ ವೇಳೆ ಘೇಂಡಾಮೃಗಗಳ ಜೀವಿತಾವಧಿ, ಆಹಾರ ಪದ್ಧತಿ, ಸಂತಾನೋತ್ಪತ್ತಿ ಸೇರಿದಂತೆ ಇನ್ನಿತರ ವಿಷಯವನ್ನು ಪ್ರವಾಸಿಗರು ಕೇಳಿ ತಿಳಿದುಕೊಂಡರು. ಕಾರ್ಯಕ್ರಮದಲ್ಲಿ ಆರ್‌ಎಫ್ಓ ರಕ್ಷಿತ್‌ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಮೈಸೂರಿನ ಮೃಗಾಲಯದಲ್ಲಿ ಭಾನುವಾರ ವಿಶ್ವ ಘೇಂಡಾಮೃಗ ದಿನ ಆಚರಿಸಿ ಪ್ರವಾಸಿಗರಲ್ಲಿ ಘೇಂಡಾ ಮೃಗಗಳ ರಕ್ಷಣೆ ಕುರಿತಂತೆ ಜಾಗೃತಿ ಮೂಡಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next