Advertisement

ಡೇವಿಸ್‌ ಕಪ್‌: ಪೇಸ್‌ ವಿಶ್ವದಾಖಲೆಗೆ ಕ್ಷಣಗಣನೆ

07:20 AM Apr 06, 2018 | Team Udayavani |

ಹೊಸದಿಲ್ಲಿ: ಶುಕ್ರವಾರದಿಂದ ಭಾರತ ಮತ್ತು ಚೀನ ನಡುವೆ ಡೇವಿಸ್‌ ಕಪ್‌ನ ಏಷ್ಯಾ-ಒಶಿಯಾನಿಯಾ ಗುಂಪು-1ರ ಪಂದ್ಯಗಳು ಆರಂಭವಾಗಲಿವೆ. ಖ್ಯಾತ ಟೆನಿಸ್‌ ಆಟಗಾರ ಲಿಯಾಂಡರ್‌ ಪೇಸ್‌ ಪಾಲಿಗೆ ವಿಶ್ವದಾಖಲೆಗೈಯುವ ಉತ್ಸಾಹದಲ್ಲಿದ್ದಾರೆ. ಈ ಹೋರಾಟದ ಡಬಲ್ಸ್‌ನಲ್ಲಿ ಒಂದೇ ಒಂದು ಗೆಲುವು ಸಾಧಿಸಿದರೆ ಪೇಸ್‌ ವಿಶ್ವ ದಾಖಲೆ  ನಿರ್ಮಿಸುವ ಅವಕಾಶ ಪಡೆದಿದ್ದಾರೆ.

Advertisement

44 ವರ್ಷದ ಪೇಸ್‌ ಇಲ್ಲಿಯವರೆಗೆ ಡೇವಿಸ್‌ ಕಪ್‌ನಲ್ಲಿ 42 ಡಬಲ್ಸ್‌ ಪಂದ್ಯಗಳಲ್ಲಿ ಗೆಲುವು ಸಾಧಿಸಿ, ಇಟಲಿಯ ಖ್ಯಾತ ಟೆನಿಸ್‌ ಆಟಗಾರ ನಿಕೊಲಾ ಪೀತ್ರಾಂಜಲಿ ದಾಖಲೆಯನ್ನು ಸಮಗಟ್ಟಿದ್ದಾರೆ. ಹೀಗಾಗಿ ಒಂದು ಪಂದ್ಯ ಗೆದ್ದರೆ ಡೇವಿಸ್‌ ಕಪ್‌ನಲ್ಲಿ ಗರಿಷ್ಠ ಪಂದ್ಯ ಗೆದ್ದ ಡಬಲ್ಸ್‌ ಆಟಗಾರ ಎಂಬ ದಾಖಲೆ ನಿರ್ಮಿಸಲಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಪೇಸ್‌, ನನಗೆ ವಿಶ್ವದಾಖಲೆಯ ಪಂದ್ಯ ಅನ್ನುವುದಕ್ಕಿಂತ ತಂಡದ ಗೆಲುವು ಮುಖ್ಯ. ಈ ನಿಟ್ಟಿನಲ್ಲಿ ಶ್ರಮವಹಿಸುತ್ತೇನೆ. ಬೋಪಣ್ಣ ಜತೆ ಆಡಲು ಕಾತುರನಾಗಿದ್ದೇನೆ ಎಂದು ತಿಳಿಸಿದ್ದಾರೆ.

ಚೀನ ತಂಡಕ್ಕೆ ಹೋಲಿಸಿದರೆ ಭಾರತೀಯ ಆಟಗಾರರು ಶ್ರೇಯಾಂಕದಲ್ಲಿ ಮೇಲಿನ ಕ್ರಮಾಂಕದಲ್ಲಿದ್ದಾರೆ. ಜತೆಗೆ ಪೇಸ್‌ ಮತ್ತು ಬೋಪಣ್ಣ ಅನುಭವಿ ಆಟಗಾರರಾಗಿರುವುದರಿಂದ ತಂಡಕ್ಕೆ ನೆರವಾಗಲಿದೆ. ಸಿಂಗಲ್ಸ್‌ನಲ್ಲಿ ಯೂಕಿ ಭಾಂಬ್ರಿ ಗಾಯಗೊಂಡು ತಂಡದಿಂದ ಹೊರಬಿದ್ದಿರುವುದರಿಂದ ರಾಮಕುಮಾರ್‌ (132ನೇ ಶ್ರೇಯಾಂಕ), ಸುಮಿತ್‌ ನಗಲ್‌ (213ನೇ ಶ್ರೇಯಾಂಕ) ಮೇಲೆ ಹೆಚ್ಚಿನ ಒತ್ತಡವಿದೆ.

Advertisement

Udayavani is now on Telegram. Click here to join our channel and stay updated with the latest news.

Next