Advertisement

World Record; 24 ಗಂಟೆಗಳಲ್ಲಿ 150 ಫಾಸ್ಟ್‌ ಫುಡ್‌ ರೆಸ್ಟೋರೆಂಟ್‌ ಗಳಲ್ಲಿ ತಿಂದು ದಾಖಲೆ

07:27 PM Aug 16, 2024 | Team Udayavani |

ಅಬುಜಾ: ನೈಜೀರಿಯಾದ ವ್ಯಕ್ತಿಯೊಬ್ಬ 24 ಗಂಟೆ ಅವಧಿಯೊಳಗೆ ಅತಿ ಹೆಚ್ಚು ಫಾಸ್ಟ್‌ ಫುಡ್‌ ರೆಸ್ಟೋರೆಂಟ್‌ ಗಳಿಗೆ ಭೇಟಿ ನೀಡಿದ ದಾಖಲೆಯೊಂದನ್ನು ಮುರಿದಿದ್ದಾನೆ. 22 ವರ್ಷದ ಮುನಾಚಿಮ್ಸೊ ಬ್ರಿಯಾನ್ ನ್ವಾನಾ ಎಂಬಾತನೇ ಈ ದಾಖಲೆ ಬರೆದಾತ.

Advertisement

ನೈಜೀರಿಯಾದ ರಾಜಧಾನಿ ಅಬುಜಾದಲ್ಲಿ ಮುನಾಚಿಮ್ಸೊ ಬ್ರಿಯಾನ್ ನ್ವಾನಾ ( Munachimso Brian Nwana) ಈ ದಾಖಲೆ ಬರೆದಿದ್ದಾನೆ. ಕಂಟೆಟ್‌ ಕ್ರಿಯೇಟರ್‌ ಆದ ಈತ ಈ ಹಿಂದಿನ 100 ಫಾಸ್ಟ್‌ ಫುಡ್‌ ರೆಸ್ಟೋರೆಂಟ್‌ ಗಳ ದಾಖಲೆ ಮುರಿದಿದ್ದಾನೆ. ಇದೀಗ ಮುನಾಚಿಮ್ಸೋ ಅವರು 150 ರೆಸ್ಟೋರೆಂಟ್‌ ಗಳಿಗೆ ಭೇಟಿ ನೀಡಿದ್ದಾರೆ.

ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ (GWR) ಪ್ರಕಾರ, “ಈ ದಾಖಲೆಯನ್ನು ಪ್ರಯತ್ನಿಸುವಾಗ ಯಾವುದೇ ರೀತಿಯ ಖಾಸಗಿ ಸಾರಿಗೆಯನ್ನು ಬಳಸಲಾಗುವುದಿಲ್ಲ, ಮತ್ತು ನಗರದ ಸೀಮಿತ ಸಾರ್ವಜನಿಕ ಸಾರಿಗೆ ಮೂಲಸೌಕರ್ಯದಿಂದಾಗಿ, ಬ್ರಿಯಾನ್ ತನ್ನ ಸಂಪೂರ್ಣ ಮಾರ್ಗವನ್ನು ಕಾಲ್ನಡಿಗೆಯಲ್ಲಿ ಪೂರ್ಣಗೊಳಿಸಿದನು”. ಈ ದಾಖಲೆಗಾಗಿ ಆತ 25 ಕಿಲೋಮೀಟರ್‌ ಗಳಷ್ಟು ನಡೆದಿದ್ದಾರೆ.

“ಈ ದಾಖಲೆಯನ್ನು ಯಶಸ್ವಿಯಾಗಿ ನಡೆಸಲು ಪ್ರತಿ ರೆಸ್ಟೋರೆಂಟ್‌ ನಲ್ಲಿ ಕನಿಷ್ಠ ಒಂದು ಆಹಾರ ಅಥವಾ ಪಾನೀಯವನ್ನು ಖರೀದಿಸಬೇಕು ಮತ್ತು ಸೇವಿಸಬೇಕು. ಕನಿಷ್ಠ 75% ಆರ್ಡರ್‌ ಗಳು ಆಹಾರವಾಗಿರಬೇಕು” ಎಂದು ಗಿನ್ನಿಸ್‌ ದಾಖಲೆ ಸೂಚಿಸುತ್ತದೆ.

Advertisement

ಈ ದಾಖಲೆಗಾಗಿ ಬ್ರಿಯಾನ್‌ ಸಂಜೆ 5 ಗಂಟೆಗೆ ತನ್ನ ಪ್ರಯಾಣ ಆರಂಭಿಸಿದ್ದ. ಮಧ್ಯರಾತ್ರಿಯಿಂದ ಬೆಳಗ್ಗೆ 9 ಗಂಟೆಯವರೆಗೆ ನಿದ್ರೆಗಾಗಿ ವಿರಾಮ ಪಡೆದಿದ್ದ. ಅವರು ಭೇಟಿ ನೀಡಿದ ಹೆಚ್ಚಿನ ರೆಸ್ಟೋರೆಂಟ್‌ ಗಳಿಂದ ಏನನ್ನಾದರೂ ರುಚಿ ನೋಡಲು ಪ್ರಯತ್ನಿಸಿದರು. ಉಳಿದಿರುವ ಆಹಾರವನ್ನೆಲ್ಲ ಅವರ ತಂಡ ಮತ್ತು ಸಾರ್ವಜನಿಕರು ಸೇವಿಸಿದರು ಎಂದು GWR ಹೇಳಿದೆ.

ಶವರ್ಮಾ, ಪಿಜ್ಜಾ, ಫ್ರೈಡ್‌ ಚಿಕನ್‌, ಬರ್ಗರ್‌, ನೈಜೀರಿಯನ್‌ ಫುಡ್‌ ಗಳಾದ ಮೊಯಿನ್‌ ಮೊಯಿನ್‌, ಆಮಲಾ ಮುಂತಾದ ಆಹಾರ ಖಾದ್ಯಗಳನ್ನು ಅವರು ಸೇವಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next