Advertisement
ರೇಬೀಸ್‌ನ ಹೆಚ್ಚಿನ ಪ್ರಕರಣಗಳು ಭಾರತದಲ್ಲಿ ವರದಿಯಾಗಿವೆ. ಅದರಲ್ಲೂ ದೇಶದಲ್ಲಿ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ರೇಬೀಸ್‌ನಿಂದ ಹೆಚ್ಚು ಪ್ರಭಾವಿತರಾಗಿದ್ದಾರೆ.
Related Articles
Advertisement
ವಿಶ್ವ ರೇಬೀಸ್ ದಿನ 2024: ಥೀಮ್
ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ 2024 ರ ವಿಶ್ವ ರೇಬೀಸ್ ದಿನದ ಥೀಮ್ ‘ಬ್ರೇಕಿಂಗ್ ರೇಬೀಸ್ ಬೌಂಡರೀಸ್ʼ (Breaking Rabies Boundaries) ಎಂಬುದು. ಈ ಥೀಮ್ ಅನ್ನು ವಿವರವಾಗಿ ಹೇಳಬೇಕೆಂದರೆ, ರೇಬೀಸ್ ವಿರುದ್ಧದ ಹೋರಾಟದಲ್ಲಿ ಪ್ರಗತಿಯನ್ನು ಇನ್ನಷ್ಟು ವಿಸ್ತಾರಗೊಳಿಸುವುದು ಮತ್ತು ಪ್ರಸ್ತುತ ಸ್ಥಿತಿಯನ್ನು ಮೀರಿ ರೇಬೀಸ್ ತಡೆಗಟ್ಟುವಿಕೆ ಬಗ್ಗೆ ಹೆಚ್ಚು ಗಮನ ಕೇಂದ್ರೀಕರಿಸುವುದು. ಲಸಿಕೆಗಳು, ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ಸಂಪನ್ಮೂಲಗಳ ಪ್ರವೇಶಕ್ಕೆ ಅಡ್ಡಿಯಾಗುವ ಅಡೆತಡೆಗಳನ್ನು ಮುರಿಯಲು ಜಾಗತಿಕ ಬದ್ಧತೆಗೆ ಇದು ಕರೆ ನೀಡುತ್ತದೆ. ವಿಶೇಷವಾಗಿ ಗ್ರಾಮೀಣ ಮತ್ತು ಅಭಿವೃದ್ಧಿಯಾಗದ ಪ್ರದೇಶಗಳಲ್ಲಿ ರೇಬೀಸ್ ಕುರಿತಾದ ಜಾಗೃತಿ ಅಗತ್ಯ.
ರೇಬೀಸ್ ರೋಗ ಹೇಗೆ ಹರಡುತ್ತದೆ?
ಹೆಚ್ಚಿನ ಜನರು ರೇಬೀಸ್ ಬಗ್ಗೆ ತಪ್ಪು ಕಲ್ಪನೆ ಹೊಂದಿದ್ದಾರೆ. ಅದೇನೆಂದರೆ, ರೇಬೀಸ್ ನಾಯಿ ಕಡಿತದಿಂದ ಮಾತ್ರ ಉಂಟಾಗುತ್ತದೆ ಎಂಬುದು. ಆದರೆ ಅದು ನಿಜವಲ್ಲ. ಈ ರೋಗವು ಇತರ ಅನೇಕ ಪ್ರಾಣಿಗಳ ಕಡಿತದಿಂದ ಕೂಡ ಉಂಟಾಗುತ್ತದೆ. ನಾಯಿಯ ಲಾಲಾರಸದಲ್ಲಿ ಲಸ್ಸಾ ಎಂಬ ವೈರಸ್ ಕಂಡುಬರುತ್ತದೆ. ಇದು ರೇಬೀಸ್ ರೋಗವನ್ನು ಹರಡುತ್ತದೆ. ನಾಯಿಯು ವ್ಯಕ್ತಿಯನ್ನು ಕಚ್ಚಿದಾಗ, ನಂತರ ವ್ಯಕ್ತಿಯ ದೇಹದಲ್ಲಿ ರೇಬೀಸ್ ಹರಡುತ್ತದೆ. ನಾಯಿ ಕಚ್ಚಿದ 24 ಗಂಟೆಯೊಳಗೆ ಆ್ಯಂಟಿ ರೇಬೀಸ್ ಲಸಿಕೆ ತೆಗೆದುಕೊಳ್ಳದಿದ್ದರೆ ಪರಿಸ್ಥಿತಿ ಗಂಭೀರವಾಗುವ ಸಾಧ್ಯತೆ ಇದೆ.