Advertisement

ಇಂದಿನಿಂದ ವರ್ಲ್ಡ್ ಒಲಿಂಪಿಕ್‌ ಕ್ವಾಲಿಫೈಯರ್  ರೆಸ್ಲಿಂಗ್‌

09:59 PM May 05, 2021 | Team Udayavani |

ಸೋಫಿಯಾ (ಬಲ್ಗೇರಿಯಾ): ಟೋಕಿಯೊ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕಾಗಿ ಅಂತಿಮ ಸುತ್ತಿನ ಅರ್ಹತಾ ಕುಸ್ತಿ ಸ್ಪರ್ಧೆಗೆ ಸೋಫಿಯಾ ಸಜ್ಜಾಗಿದೆ. ಇಲ್ಲಿ ಗುರುವಾರದಿಂದ “ವರ್ಲ್ಡ್ ಒಲಿಂಪಿಕ್‌ ಕ್ವಾಲಿಫೈಯರ್ ರೆಸ್ಲಿಂಗ್‌’ ನಡೆಯಲಿದ್ದು, ಭಾರತದ 12 ಮಂದಿ ಕುಸ್ತಿಪಟುಗಳು ಅಖಾಡಕ್ಕೆ ಧುಮುಕಲಿದ್ದಾರೆ.

Advertisement

ಮೂರು ಬಾರಿಯ ಕಾಮನ್ವೆಲ್ತ್‌ ಗೇಮ್ಸ್‌ ಚಾಂಪಿಯನ್‌, 32 ವರ್ಷದ ಅಮಿತ್‌ ಧನ್ಕರ್‌ ಮೇಲೆ ಭಾರತ ಹೆಚ್ಚಿನ ನಿರೀಕ್ಷೆ ಇರಿಸಿದೆ. ಅವರಿಲ್ಲಿ 74 ಕೆ.ಜಿ. ವಿಭಾಗದಲ್ಲಿ ಸ್ಪರ್ಧೆಗೆ ಇಳಿಯಲಿದ್ದಾರೆ. ಆದರೆ ಇಲ್ಲಿನ ಸವಾಲು ಸುಲಭದ್ದಲ್ಲ. ಬರೋಬ್ಬರಿ 36 ಮಂದಿ ಕುಸ್ತಿಪಟುಗಳು ಇಲ್ಲಿ ಹೋರಾಟಕ್ಕೆ ಅಣಿಯಾದ್ದಾರೆ. ರಿಯೋ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತ ಸೋನರ್‌ ಡಿಮಿರ್ಟಸ್‌ (ಟರ್ಕಿ), ವಿಶ್ವ ಚಾಂಪಿಯನ್‌ ಹೇಟಿಕ್‌ ಕ್ಯಾಬೊಲೋವ್‌ (ಸರ್ಬಿಯಾ), ಯುರೋಪಿಯನ್‌ ಚಾಂಪಿಯನ್‌ ತಜ್ಮುರಾಝ್ ಸಲ್ಕಝ ನೋವ್‌ (ಸ್ಲೊವಾಕಿಯಾ), ಆಫ್ರಿಕನ್‌ ಚಾಂಪಿಯನ್‌ ಓಗ್ಬೋನ ಜಾನ್‌ (ನೈಜೀರಿಯಾ) ಮೊದಲಾದ ಬಲಿಷ್ಠರು ಈ ವಿಭಾಗದಲ್ಲಿದ್ದಾರೆ. ಇವರೆಲ್ಲರೂ ಧನ್ಕರ್‌ ಅವರಿಗಿಂತ ಮೇಲ್ಮಟ್ಟದ ಸ್ಪರ್ಧಿಗಳು ಎಂಬುದನ್ನು ಮರೆಯುವಂತಿಲ್ಲ.

ಫ್ರೀಸ್ಟೈಲ್‌ ವಿಭಾಗದಲ್ಲಿರುವ ಭಾರತದ ಪ್ರಮುಖ ಸ್ಪರ್ಧಿಗಳೆಂದರೆ, 2018ರ ಕಾಮನ್ವೆಲ್ತ್‌ ಗೇಮ್ಸ್‌ ಚಾಂಪಿಯನ್‌ ಸುಮಿತ್‌ ಮಲಿಕ್‌ (125 ಕೆ.ಜಿ.) ಮತ್ತು ಸತ್ಯವೃತ್‌ ಕಾದಿಯಾನ್‌ (97 ಕೆ.ಜಿ.).

ವನಿತಾ ವಿಭಾಗದಲ್ಲಿ ಸೀಮಾ ಬಿಸ್ಲಾ (50 ಕೆ.ಜಿ.) ಭಾರತದ ನೆಚ್ಚಿನ ಸ್ಪರ್ಧಿ ಆಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next