ಮುಳಬಾಗಿಲು: ಆರೋಗ್ಯವಾದ ವ್ಯಕ್ತಿಯಿಂದ ಮಾತ್ರ ಆರೋಗ್ಯವಂತವಾದ ಸಮಾಜದ ನಿರ್ಮಾಣ ಸಾಧ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಈಶ್ವರ್ ಹೇಳಿದರು.
ನಗರದ ಶಿವಕೇಶವ ನಗರದ ಸಮುದಾಯಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ,ತಾಲೂಕು ವಕೀಲರ ಸಂಘ ಮತ್ತು ಮಹಿಳಾಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಪೌಷ್ಟಿಕ ಆಹಾರ ದಿನಾಚರಣೆ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
1975ರಲ್ಲಿ ಅಮೇರಿಕಾ ದೇಶ ವಿಶ್ವ ಪೌಷ್ಟಿಕ ಆಹಾರ ದಿನಾಚರಣೆಯ ಕುರಿತು ಪ್ರಸ್ತಾವನೆಯನ್ನು ಮಂಡಿಸಿ ಅದನ್ನು 1980 ರವೇಳೆಗೆ ಜಾರಿಗೆ ತಂದಿತು, 1982 ರಿಂದ ಭಾರತ ಸರ್ಕಾರಜಾರಿಗೆ ತಂದಿತು. ಶ್ರೀಮಂತರು ಉತ್ತಮ ಪೌಷ್ಟಿಕ ಆಹಾರವನ್ನು ಸೇವಿಸುತ್ತಾರೆ ಆದರೆ ಪೌಷ್ಟಿಕ ಆಹಾರಕ್ಕೆ ಬಡವ ಶ್ರೀಮಂತರೆಂಬ ಭೇದವಿರಬಾರದೆಂಬ ಉದ್ದೇಶದಿಂದ ಹಾಗೂ ಪ್ರತಿಯೊಬ್ಬರಿಗೂ ಪೌಷ್ಟಿಕ ಆಹಾರ ಸಿಗಬೇಕೆಂದು ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆತಂದಿದೆ ಅವುಗಳನ್ನು ಜಾರಿಗೆ ತರಲು ಮಹಿಳಾಮತ್ತು ಮಕ್ಕಳ ಇಲಾಖೆ ಅಂಗನವಾಡಿ ಕೇಂದ್ರದಮೂಲಕ ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ಹೇಳಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಎಂ.ನರಸಿಂಹ ಮೂರ್ತಿ ಮಾತನಾಡಿ, ಹಿಂದಿನ ಜೀವನ ಶೈಲಿಯಲ್ಲಿ ಯಾವುದೇ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿರಲಿಲ್ಲ. ಇಂದಿನ ಜೀವನ ಶೈಲಿ ಹಾಗೂ ಕೃತಿಮ ಆಹಾರ ಪದ್ಧತಿಗಳು ಚಿಕ್ಕವಯಸ್ಸಿನಲ್ಲಿಯೇ ಹಲವಾರು ರೋಗ ರುಜಿನಗಳಿಗೆ ಕಾರಣವಾಗಿದೆ. ಮುಂದಿನ ಆರೋಗ್ಯವಂತ ಜನಾಂಗದ ಬೆಳವಣಿ ಗೆಗೆ ಪ್ರಕೃತಿದತ್ತ ಆಹಾರ ಸೇವನೆಯಬಗ್ಗೆ ಅರಿವು ಮುಖ್ಯವಾಗಿದೆ. ಕೃಷಿಯಲ್ಲಿನ ಹಲವಾರು ಹಳೇ ಪದ್ಧತಿಗಳಿಂದ ಇಂದಿನಕಲುಷಿತ ಆಹಾರವನ್ನು ಬದಲಾಯಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಿದರು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ಪಿ.ಎಂ. ಸದಾಶಿವಯ್ಯ, ಗೌರವಾಧ್ಯಕ್ಷ ಎಂ.ಎಸ್.ಶ್ರೀನಿವಾಸರೆಡ್ಡಿ ಮಾತನಾಡಿ ಅಂಗನವಾಡಿ ಕೇಂದ್ರಗಳು ಅರಿವು ನೀಡುವ ಕೇಂದ್ರಗಳಾಗಬೇಕು. ಮುಂದಿನ ಜನಾಂಗದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಸರ್ಕಾರದ ಹಲವಾರು ಪೌಷ್ಟಿಕ ಆಹಾರ ಸೇವನೆಯ ಕಾರ್ಯಕ್ರಮಗಳು ಎಲ್ಲರಿಗೂ ತಲುಪಲು ಶ್ರಮಿಸಬೇಕು. ರಾಸಾಯನಿಕ ಪದ್ಧತಿಯ ಆಹಾರ ಸೇವನೆಗಿಂತಲೂ ಸಾವಯವ ಪ್ರಕೃತಿ ದತ್ತವಾದ ಆಹಾರ ಪದ್ಧತಿಯನ್ನು ಆಳವಡಿಸಿಕೊಳ್ಳ ಬೇಕು ಎಂದರು.
ಶಿಶು ಅಭಿವೃದ್ಧಿ ಯೋಜನಾಧಿ ಕಾರಿ ರಮ್ಯ ನಾಲ್ವರು ಗರ್ಭಿಣಿ ಮಹಿಳೆಯರಿಗೆ ಶ್ರೀಮಂತ ಕಾರ್ಯಕ್ರಮ ನಡೆಸಿದರು.
ತಾಲೂಕು ವಕೀಲರ ಸಂಘದ ಕಾರ್ಯದರ್ಶಿ ಸಿ.ಸುಬ್ರಮಣಿ, ಜಂಟಿ ಕಾರ್ಯದರ್ಶಿ ಸುಬ್ರಮಣಿ, ವಕೀಲರಾದ ಕುರುಡುಮಲೆ ಮಂಜುನಾಥ್, ಹಿರಿಯ ವಕೀಲ ವಿ.ಜಯಪ್ಪ, ವಕೀಲ ಕೃಷ್ಣಾರೆಡ್ಡಿ, ಎಂ.ದಯಾನಂದ್. ಎಸ್. ಎಂ.ಅಶೋಲ್, ಕೀಲಾಗಾಣಿ ಹೊನ್ನೆಗೌಡ, ನಾಗೇಶ್, ಸಿ.ಎನ್.ರಾಜ್‌ಕುಮಾರ್, ಬಿ.ಜಿ. ಮುನಿರತ್ನಂ, ಜಯರಾಮ್, ಕೃಷ್ಣಪ್ಪ, ಸಂತೋಷ್. ಮಂಡಿಕಲ್ ಪುರುಷೋತ್ತಮ್ ಹಾಗೂ ಅಂಗನವಾಡಿ ಅಧಿಕಾರಿಗಳಾದ ಅಮೃತಾ, ಭಾರತಿಬಾಯ್, ರೇಣುಕಾ ಇತರರಿದ್ದರು.