Advertisement

ಇಂದು ವಿಶ್ವ ತಂಬಾಕು ರಹಿತ ದಿನ: ತಂಬಾಕಿನಿಂದ ಪ್ರತಿವರ್ಷ 8 ಮಿಲಿಯನ್ ಸಾವು

02:29 PM May 31, 2021 | Team Udayavani |

ಶ್ವಾಸಕೋಸದ ಕ್ಯಾನ್ಸರ್ ಅತ್ಯಂತ ಸಾಮಾನ್ಯವಾಗಿರುವ ಕ್ಯಾನ್ಸರ್ ಗಳಲ್ಲಿ ಒಂದಾಗಿದೆ ಮತ್ತು ವಿಶ್ವದಾದ್ಯಂತ ಕ್ಯಾನ್ಸರ್-ಸಂಬಂಧಿತ ಮರಣಗಳ ಮುಂಚೂಣಿಯ ಕಾರಣವಾಗಿದೆ. ಇದು ವಿಶ್ವದಾದ್ಯಂತ ಶೇ.13ರಷ್ಟು ಹೊಸ ಕ್ಯಾನ್ಸರ್ ಪ್ರಕರಣಗಳಿಗೆ ಹಾಗೂ ಶೇ.19ರಷ್ಟು ಕ್ಯಾನ್ಸರ್-ಸಂಬಂಧಿತ ಸಾವುಗಳಿಗೆ ಕಾರಣವಾಗಿದೆ.

Advertisement

ಶ್ವಾಸಕೋಶದ ಅತ್ಯಂತ ಪ್ರಮುಖ ರಿಸ್ಕ್ ಅಂಶವೆಂದರೆ ಧೂಮಪಾನ. ಶ್ವಾಸಕೋಶದ ಕ್ಯಾನ್ಸರ್ ಇತರೆ ತಂಬಾಕು ಉತ್ಪನ್ನಗಳಾದ ಸಿಗಾರ್ ಗಳು ಅಥವಾ ಪೈಪ್ ಗಳ ಬಳಕೆಯಿಂದಲೂ ಹೆಚ್ಚಾಗುತ್ತದೆ. ತಂಬಾಕು ಹೊಗೆಯಲ್ಲಿ 7,000 ಸಂಯುಕ್ತಗಳಿದ್ದು ಅವುಗಳಲ್ಲಿ ಹಲವು ವಿಷಕಾರಿಯಾಗಿವೆ.

ಈ ಕುರಿತು ಆಸ್ಟರ್ ಸಿಎಂಐ ಆಸ್ಪತ್ರೆಯ ಕನ್ಸಲ್ಟೆಂಟ್ ಮೆಡಿಕಲ್ ಆಂಕಾಲಜಿಸ್ಟ್ ಡಾ.ಆದಿತ್ಯ ಮುರಳಿ, ಎಂಡಿ ಡಿಎಂ, “ತಂಬಾಕು ಪ್ರತಿವರ್ಷ 8 ಮಿಲಿಯನ್ ಸಾವುಗಳಿಗೆ ಕಾರಣವಾಗುತ್ತದೆ. ಈ ವರ್ಷ ನಡೆಸಲಾದ ಅಧ್ಯಯನಗಳು ಧೂಮಪಾನ ಮಾಡದೇ ಇರುವವರಿಗೆ ಹೋಲಿಸಿದರೆ ಕೋವಿಡ್-19ರ ಗಂಭೀರ ರೋಗ ಅಭಿವೃದ್ಧಿಪಡಿಸಿಕೊಳ್ಳುವ ಸಾಧ್ಯತೆ ಇದೆ ಎಂದು ತೋರಿಸಿವೆ. ಈ ವೈರಸ್ ಪ್ರಾಥಮಿಕವಾಗಿ ಶ್ವಾಸಕೋಶಕ್ಕೆ ದಾಳಿ ನಡೆಸುತ್ತದೆ ಮತ್ತು ಧೂಮಪಾನ
ಶ್ವಾಸಕೋಶವನ್ನು ದುರ್ಬಲಗೊಳಿಸುತ್ತದೆ, ಇದರಿಂದ ಕೋವಿಡ್ ಹಾಗೂ ಇತರೆ ರೋಗಗಳ ವಿರುದ್ಧ ಹೋರಾಟವನ್ನು ಕಠಿಣಗೊಳಿಸುತ್ತದೆ. ಧೂಮಪಾನವು ಹೃದಯರೋಗಗಳು, ಉಸಿರಾಟದ ರೋಗಗಳು, ಕ್ಯಾನ್ಸರ್ ಮತ್ತು ಮಧುಮೇಹ ಉಂಟು ಮಾಡಬಹುದಾಗಿದ್ದು ಇದರಿಂದ ಕೋವಿಡ್ ಅನ್ನು ಹೆಚ್ಚು ಅಪಾಯಕ್ಕೆ ಒಳಪಡಿಸುತ್ತದೆ” ಎಂದು ತಿಳಿಸಿದ್ದಾರೆ.

ಕೆ.ಎಸ್.ಹೆಗ್ಡೆ ಹಾಸ್ಪಿಟಲ್ ಮಂಗಳೂರಿನ ಕನ್ಸಲ್ಟೆಂಟ್ ಮೆಡಿಕಲ್ ಆಂಕಾಲಜಿಸ್ಟ್ ಡಾ.ವಿಜಿತ್ ಶೆಟ್ಟಿ, ಎಂಡಿ ಡಿಎಂ, “ಸಿಗರೇಟುಗಳು ಅಥವಾ ಧೂಮಪಾನದ ತಂಬಾಕು ಉತ್ಪನ್ನಗಳಿಗಿಂತ ತಂಬಾಕು ಸೇವನೆ ಸುರಕ್ಷಿತ ಎಂದು ಭಾವಿಸಲಾಗುತ್ತದೆ. ಆದಾಗ್ಯೂ, ತಂಬಾಕು ಜಗಿಯುವುದು ಬಾಯಿ ಕ್ಯಾನ್ಸರ್ ಗಳು ಮತ್ತು ಪೂರ್ವ ಕ್ಯಾನ್ಸರ್ ಗಳ ಅಭಿವೃದ್ಧಿಯ ರಿಸ್ಕ್ ಅಂಶವಾಗಿವೆ(ಕೆಲವು ಬದಲಾವಣೆಗಳಿಗೆ ಒಳಗಾದ ಅಸಹಜ ಜೀವಕೋಶಗಳು ಕ್ಯಾನ್ಸರ್ ಉಂಟು
ಮಾಡಬಲ್ಲವು). ತಂಬಾಕು ಜಗಿಯುವುದು ಕೂಡಾ ನಿಮ್ಮನ್ನು ಹೃದಯ ಸಂಬಂಧಿ ರೋಗಗಳು, ವಸಡಿನ ರೋಗ, ಹಲ್ಲಿನ ಕ್ಷಯ ಮತ್ತು ಹಲ್ಲುಗಳ ನಷ್ಟ ಉಂಟು ಮಾಡಬಲ್ಲದು” ಎಂದರು.

ಸಿಗರೇಟುಗಳನ್ನು ಸೇವನೆ ಮಾಡುವವರು ಶ್ವಾಸಕೋಶದ ಕ್ಯಾನ್ಸರ್ ಗೆ ಒಳಗಾಗುವ 15ರಿಂದ 30 ಪಟ್ಟು ಹೆಚ್ಚು ಸಾಧ್ಯತೆ ಇರುತ್ತದೆ ಅಥವಾ ಧೂಮಪಾನ ಮಾಡದೇ ಇರುವವರಿಗಿಂತ ಶ್ವಾಸಕೋಶ ಕ್ಯಾನ್ಸರ್ ನಿಂದ ಮರಣಿಸುವ ಸಂಭವನೀಯತೆ ಇರುತ್ತದೆ. ಶ್ವಾಸಕೋಶ ಕ್ಯಾನ್ಸರ್ ದಿನಕ್ಕೆ ಕೆಲವೇ ಸಿಗರೇಟುಗಳನ್ನು ಸೇದಿದರೂ ಅಥವಾ ಆಗಾಗ್ಗೆ ಸೇದಿದರೂ ಹೆಚ್ಚಾಗಬಹುದು. ವ್ಯಕ್ತಿ ಎಷ್ಟು ದೀರ್ಘಕಾಲ ಸಿಗರೇಟು ಸೇದುತ್ತಾನೆ ಮತ್ತು ದಿನಕ್ಕೆ ಎಷ್ಟು ಹೆಚ್ಚು ಸಿಗರೇಟುಗಳನ್ನು ಸೇದುತ್ತಾನೆ ಎನ್ನುವುದನ್ನು ಆಧರಿಸಿ ಅಪಾಯವೂ ಅಷ್ಟೇ ಹೆಚ್ಚಾಗಿರುತ್ತದೆ.

Advertisement

ಎಚ್ ಸಿಜಿ ಆಸ್ಪತ್ರೆ ಬೆಂಗಳೂರಿನ ಮೆಡಿಕಲ್ ಆಂಕಾಲಜಿಸ್ಟ್ ಡಾ.ಶ್ರೀನಿವಾಸ್ ಬಿ.ಜೆ., ಎಂಡಿ ಡಿಎನ್ ಬಿ, “ಧೂಮಪಾನವು ಧ್ವನಿಪೆಟ್ಟಿಗೆ, ಮೂತ್ರನಾಳ, ಮೂತ್ರಕೋಶ, ಗರ್ಭಗೊರಳು, ಅನ್ನನಾಳ, ಯಕೃತ್ತು, ಶ್ವಾಸಕೋಶ, ಮೇದೋಜಿರಕ ಗ್ರಂಥಿ, ಹೊಟ್ಟೆ, ಕರುಳು ಅಥವಾ ಗುದನಾಳ, ನಾಲಿಗೆ ಮತ್ತು ಟಾನ್ಸಿಲ್ ಗಳು ಮತ್ತಿತರ ದೇಹದ ಯಾವುದೇ ಭಾಗದಲ್ಲಿ ಕ್ಯಾನ್ಸರ್ ಉಂಟು ಮಾಡಬಹುದು. ಧೂಮಪಾನವು ಕ್ಯಾನ್ಸರ್ ಮತ್ತಿತರೆ  ರೋಗಗಳಿಗೆ ಒಳಗಾಗುವ ಸಾಧ್ಯತೆಗಳನ್ನು ಕೂಡಾ ಹೆಚ್ಚಿಸುತ್ತದೆ” ಎಂದರು.

ಇತರೆ ಪ್ರಮುಖ ತೊಂದರೆಯ ಅಂಶಗಳು ಹೀಗಿವೆ:
-ವಾಯು ಮಾಲಿನ್ಯ(ಕಲ್ಲಿದ್ದಲು ಸುಡುವುದು, ಮರ ಅಥವಾ ಘನ ಇಂಧನಗಳನ್ನು ಸುಡುವುದು)
-ತಂಬಾಕು ಸೇದುವುದು/ಧೂಮಪಾನಿಗಳ ಹೊಗೆ ಸೇವಿಸುವುದು(ಧೂಮಪಾನಿಗಳಿಗಿತ 20-50 ಪಟ್ಟು ಹೆಚ್ಚು ರಿಸ್ಕ್)
-ವೈದ್ಯಕೀಯ ಪರಿಸ್ಥಿತಿ(ಟ್ಯೂಬರ್ಕುಲೋಸಿಸ್ ಮತ್ತು ಸಿಒಪಿಡಿಯು ಶ್ವಾಸಕೋಶದ ಕ್ಯಾನ್ಸರ್ ರಿಸ್ಕ್ ಹೆಚ್ಚಿಸುತ್ತದೆ)
-ಕೌಟುಂಬಿಕ ಇತಿಹಾಸ(ಕೌಟುಂಬಿಕ ಇತಿಹಾಸವುಳ್ಳವರಿಗೆ ಹೆಚ್ಚಿನ ರಿಸ್ಕ್)
-ವೃತ್ತಿ ಸಂಬಂಧಿತ ಒಡ್ಡಿಕೊಳ್ಳುವಿಕೆ(ಆಸ್ಬೆಸ್ಟಾಸ್, ಸಿಲಿಕಾ, ಭಾರದ ಲೋಹಗಳು, ಪಾಲಿಸಿಸಿಲಿಕ್ ಆರೊಮ್ಯಾಟಿಕ್
ಹೈಡ್ರೊಕಾರ್ಬನ್ ಮತ್ತು ಡೀಸಲ್ ಎಕ್ಸಾಸ್ಟ್ ಉಸಿರು ಸೇವನೆ).

Advertisement

Udayavani is now on Telegram. Click here to join our channel and stay updated with the latest news.

Next