Advertisement

ವಿಶ್ವ ಲೀಗ್‌ ಹಾಕಿ ಫೈನಲ್‌: “ಬಿ’ಗುಂಪಿನಲ್ಲಿ ಸ್ಥಾನ ಪಡೆದ ಭಾರತ

10:09 AM Sep 08, 2017 | |

ನವದೆಹಲಿ: ಡಿ.1 ರಿಂದ ಭಾರತ ಆತಿಥ್ಯದಲ್ಲಿ ಹಾಕಿ ವಿಶ್ವ ಲೀಗ್‌ ಫೈನಲ್‌ ಕೂಟ ಆರಂಭವಾಗಲಿದೆ. ಕೂಟದಲ್ಲಿ ಭಾರತ ಸೇರಿದಂತೆ 8 ತಂಡಗಳು ಸ್ಥಾನ ಪಡೆದಿವೆ. ತಂಡಗಳನ್ನು “ಎ’ ಮತ್ತು “ಬಿ’ ಎರಡು ಗುಂಪುಗಳನ್ನಾಗಿ ವಿಂಗಡಿಸಲಾಗಿದ್ದು, ಭಾರತ ಬಲಿಷ್ಠ “ಬಿ’ ಗುಂಪಿನಲ್ಲಿ ಸ್ಥಾನ ಪಡೆದಿದೆ.

Advertisement

ಉಳಿದಂತೆ “ಬಿ’ ಗುಂಪಿನಲ್ಲಿ ಬಲಾಡ್ಯ ತಂಡಗಳಾದ ಆಸ್ಟ್ರೇಲಿಯಾ, ಜರ್ಮನಿ ಮತ್ತು ಇಂಗ್ಲೆಂಡ್‌ ತಂಡಗಳು ಸ್ಥಾನ ಪಡೆದಿವೆ. ಇತ್ತೀಚಿನ ಟೂರ್ನಿಗಳಲ್ಲಿ ಭಾರತ ಕಳಪೆ ಪ್ರದರ್ಶನ ನೀಡುತ್ತಿದೆ. ಇದರಿಂದ ತಂಡದ ಕೋಚ್‌ ಸ್ಥಾನವೂ ಬದಲಾವಣೆಯಾಗಿದೆ. ಹೀಗಾಗಿ ಭಾರತಕ್ಕೆ ಮಹತ್ವದ ಟೂರ್ನಿಯಾಗಿದೆ. “ಎ’ ಗುಂಪಿನಲ್ಲಿ ಅರ್ಜೆಂಟೀನಾ, ಬೆಲ್ಜಿಯಂ, ಹಾಲೆಂಡ್‌, ಸ್ಪೇನ್‌ ತಂಡಗಳು ಸ್ಥಾನ ಪಡೆದಿವೆ. ಎಲ್ಲಾ ತಂಡ ಗಳು ಬಲಿಷ್ಠ ತಂಡಗಳಾ  ಗಿರುವುದರಿಂದ ತೀವ್ರ ಸ್ಪರ್ಧೆಯನ್ನು ನಿರೀಕ್ಷಿಸಬಹುದು. ಭಾರತ ಡಿ.1ರಂದು ಆಸ್ಟ್ರೇಲಿಯಾ, ಡಿ.2 ರಂದು ಇಂಗ್ಲೆಂಡ್‌, ಡಿ.4 ರಂದು ಜರ್ಮನಿ ತಂಡವನ್ನು ಎದುರಿಸಲಿದೆ. ಡಿ.7 ರಿಂದ ಕ್ವಾರ್ಟರ್‌ ಫೈನಲ್‌, ಡಿ.10 ರಂದು ಫೈನಲ್‌ ಪಂದ್ಯ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next