Advertisement

Modi ಪದಗ್ರಹಣಕ್ಕೆ ವಿಶ್ವ ನಾಯಕರ ಹಾಜರಿ

10:00 PM Jun 08, 2024 | Team Udayavani |

ನವದಹೆಲಿ: ನರೇಂದ್ರ ಮೋದಿ ಪ್ರಮಾಣ ವಚನಕ್ಕೆ ಭಾರತದ ನೆರೆಯ ರಾಷ್ಟ್ರಗಳ ಸರ್ಕಾರಿ ಮುಖ್ಯಸ್ಥರು ಆಗಮಿಸುತ್ತಿದ್ದಾರೆ. “ನೆರೆ-ಹೊರೆ ಮೊದಲು’ ನೀತಿ ಅನ್ವಯ ಭಾರತದ ನೆರೆ ಹೊರೆಯ ರಾಷ್ಟ್ರಗಳಾದ ಲಂಕಾ, ಭೂತಾನ್‌, ನೇಪಾಳ, ಬಾಂಗ್ಲಾದೇಶದ ನಾಯಕರಿಗೆ ವಿಶೇಷ ಆಹ್ವಾನ ನೀಡಲಾಗಿದೆ.

Advertisement

ಬಾಂಗ್ಲಾದೇಶ ಪ್ರಧಾನಿ ಶೇಖ್‌ ಹಸೀನಾ ಹಾಗೂ ಸೀಶೆಲ್ಸ್‌ ಉಪಾಧ್ಯಕ್ಷ ಅಹ್ಮದ್‌ ಅಫಿಫ್ ಅವರು ಶನಿವಾರವೇ ಭಾರತಕ್ಕೆ ಆಗಮಿಸಿದ್ದಾರೆ. ಉಳಿದ ನಾಯಕರನ್ನು ಸ್ವಾಗತಿಸಲು ರಾಜಧಾನಿಯಲ್ಲಿ ಸಿದ್ಧತೆಗಳನ್ನು ನಡೆಸಲಾಗಿದೆ.

ಪ್ರಮುಖ ಆಹ್ವಾನಿತರು
-ರಾನಿಲ್‌ ವಿಕ್ರಮ್‌ ಸಿಂಘೆ -ಶ್ರೀಲಂಕಾ ಅಧ್ಯಕ್ಷ
– ಮೊಹಮ್ಮದ್‌ ಮುಯಿಝು- ಮಾಲ್ಡೀವ್ಸ್‌ ಅಧ್ಯಕ್ಷ
– ಪುಷ್ಪಕಮಲ್‌ ದಹಲ್‌ ಪ್ರಚಂಡ- ನೇಪಾಳ ಪ್ರಧಾನಿ
– ತ್ಶೆರಿಂಗ್ ಟೋಬ್ಗೇ- ಭೂತಾನ್‌ ಪ್ರಧಾನಿ
– ಪ್ರವೀಂದ್‌ ಕುಮಾರ್‌ ಜಗನ್ನಾಥ್‌- ಮಾರಿಷಸ್‌ ಪ್ರಧಾನಿ

8000 ಮಂದಿಗೆ ಆಹ್ವಾನ
ದೇಶದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಪ್ರಮುಖರು, ನೈರ್ಮಲ್ಯ ಕಾರ್ಮಿಕರು, ಸೆಂಟ್ರಲ್‌ ವಿಸ್ತಾ ಯೋಜನೆಯ ಕಾರ್ಮಿಕರು, ಸಿಲ್ಕ್ಯಾರಾ ರ್ಯಾಟ್‌ಹೋಲ್‌-ಮೈನರ್ಸ್‌ ಸೇರಿದಂತೆ ಭಾರತದ ಎಲ್ಲಾ ಕ್ಷೇತ್ರಗಳನ್ನು ಪ್ರತಿನಿಧಿಸುವ 8000 ಮಂದಿಗೆ ಆಹ್ವಾನ ನೀಡಲಾಗಿದೆ. ಈ ಪೈಕಿ ವಂದೇ ಭಾರತ್‌ ಮೆಟ್ರೋದ ಮೊದಲ ಮಹಿಳಾ ಚಾಲಕಿ ಸುರೇಖಾ ಯಾದವ್‌ ಪ್ರಮುಖರಾಗಿದ್ದಾರೆ. ಇದಲ್ಲದೆ ಉತ್ತರಾಖಂಡದ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ್ದ ಕಾರ್ಮಿಕರನ್ನು ಕಾಪಾಡಿದ ರ್ಯಾಟ್‌ ಹೋನ್‌ ಮೈನರ್ಸ್‌ಗಳನ್ನೂ ಪ್ರಮಾಣ ವಚನಕ್ಕೆ ಆಹ್ವಾನಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next