Advertisement

Modi; ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಶಪಥ ಸ್ವೀಕರಿಸಿದ ನರೇಂದ್ರ ಮೋದಿ

02:07 AM Jun 10, 2024 | Team Udayavani |

ಹೊಸದಿಲ್ಲಿ: ನರೇಂದ್ರ ಮೋದಿ ಅವರು ಭಾನುವಾರ ಸಂಜೆ ಭಾರತದ ಪ್ರಧಾನಮಂತ್ರಿಯಾಗಿ ಸತತ ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

Advertisement

ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಮಾಣವಚನ ಬೋಧಿಸಿದರು. ವಿದೇಶಿ ಗಣ್ಯರು ಸೇರಿ ವಿವಿಧ ರಂಗದ ಗಣ್ಯಾತೀಗಣ್ಯರ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. 8 ಸಾವಿರಕ್ಕೂ ಹೆಚ್ಚು ಗಣ್ಯರು ಸಮಾರಂಭದಲ್ಲಿ ಭಾಗಿಯಾಗಿ ಕ್ಷಣವನ್ನು ಕಣ್ತುಂಬಿಸಿಕೊಂಡರು.

ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್‌ ಮುಯಿಜ್ಜು, ನೇಪಾಳ ಪ್ರಧಾನಿ ಪ್ರಚಂಡ, ಶ್ರೀಲಂಕಾ ಅಧ್ಯಕ್ಷ ರಣಿಲ್‌ ವಿಕ್ರಮ್‌ ಸಿಂಘೆ, ಮಾರಿಷಸ್‌ ಪ್ರಧಾನಿ ಪ್ರವಿಂದ್‌ ಕುಮಾರ್‌ ಜಗನ್ನಾಥ್‌, ಭೂತಾನ್‌ ದೊರೆ ಶೇರಿಂಗ್‌ ತೊಬೆY, ಬಾಂಗ್ಲಾ ಪ್ರಧಾನಿ ಶೇಖ್‌ ಹಸೀನಾ, ಸೀಶೆಲ್ಸ್‌ ಉಪಾಧ್ಯಕ್ಷ ಅಹಮದ್‌ ಅಫಿಫ್ ಭಾಗಿಯಾ ಗಿದ್ದರು. ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್‌ ಮುಯಿಜ್ಜು 2 ದೇಶಗಳ ಬಾಂಧವ್ಯ ಹದೆಗೆಟ್ಟರೂ ಭಾಗವಹಿಸಿದ್ದರು.

ಖ್ಯಾತ ನಟ ರಜನಿಕಾಂತ್‌, ಶಾರುಕ್‌ ಖಾನ್‌, ಅಕ್ಷಯ್‌ ಕುಮಾರ್‌, ಅನೀಲ್‌ ಕಪೂರ್‌, ಅನುಪಮ್‌ ಖೇರ್‌, ನಟಿ ಹಾಗೂ ರವೀನಾ ಟಂಡನ್‌, ದಿನೇಶ್‌ಲಾಲ್‌ ಯಾದವ್‌, ವಿಕ್ರಾಂತ್‌ ಮೆಸ್ಸಿ, ನಿರ್ದೇಶಕ ರಾಜ ಕುಮಾರ್‌ ಹಿರಾನಿ, ನಿರ್ಮಾಪಕ ಮಹಾವೀರ್‌ ಜೈನ್‌ ಸಮಾರಂಭದಲ್ಲಿ ಭಾಗಿ ಯಾಗಿದ್ದರು.

ಪ್ರಧಾನಿ ಮೋದಿ ಅವರು ಪ್ರಮಾಣವಚನ ಸ್ವೀಕರಿಸಿದ ಬಳಿಕ ರಾಜನಾಥ್ ಸಿಂಗ್, ಅಮಿತ್ ಶಾ, ನಿತಿನ್ ಗಡ್ಗರಿ ಜೆ.ಪಿ.ನಡ್ಡಾ,ಶಿವರಾಜ್ ಸಿಂಗ್ ಚೌಹಾಣ್, ನಿರ್ಮಲಾ ಸೀತಾರಾಮನ್, ಎಸ್. ಜೈಶಂಕರ್, ಮನೋಹರ್ ಲಾಲ್ ಕಟ್ಟರ್, ಎಚ್.ಡಿ.ಕುಮಾರಸ್ವಾಮಿ,ಪಿಯೂಷ್ ಗೋಯಲ್, ಜೀತನ್ ರಾಮ್ ಮಾಂಜಿ, ಜೆಡಿಯು ನಾಯಕ ರಾಜೀವ್ ರಂಜನ್ ಸಿಂಗ್, ಸರ್ಬಾನಂದ್ ಸೋನಾವಾಲ್, ಡಾ. ವಿರೇಂದ್ರ ಕುಮಾರ್, 36 ರ ಹರೆಯದ ಟಿಡಿಪಿ ಸಂಸದ ಕಿಂಜರಾಪು ರಾಮ್ ಮೋಹನ್ ನಾಯ್ಡು, ಪ್ರಹ್ಲಾದ್ ಜೋಶಿ,ಜುಯಲ್ ಓರಮ್, ಗಿರಿರಾಜ್ ಸಿಂಗ್, ಅಶ್ವಿನಿ ವೈಷ್ಣವ್, ಜ್ಯೋತಿರಾದಿತ್ಯ ಸಿಂಧಿಯಾ, ಗಜೇಂದ್ರ ಸಿಂಗ್ ಶೇಖಾವತ್, ಅನ್ನ ಪೂರ್ಣ ದೇವಿ, ಹರದೀಪ್ ಸಿಂಗ್ ಪುರಿ, ಮನ್ಸುಖ್ ಮಾಂಡವೀಯ ಅವರು ಕ್ಯಾಬಿನೆಟ್ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

Advertisement

ಪ್ರಮಾಣ ವಚನ ಸಮಾರಂಭದಲ್ಲಿ ಕೈಗಾರಿಕೋದ್ಯಮಿಗಳಾದ ಗೌತಮ್ ಅದಾನಿ, ಮುಖೇಶ್ ಅಂಬಾನಿ, ಸೂಪರ್‌ಸ್ಟಾರ್‌ಗಳಾದ ಶಾರುಖ್ ಖಾನ್, ರಜನಿಕಾಂತ್, ಅಕ್ಷಯ್ ಕುಮಾರ್ ಸೇರಿದಂತೆ ಸಾವಿರಾರು ಅತಿಥಿಗಳು ಭಾಗಿಯಾದರು.

Advertisement

Udayavani is now on Telegram. Click here to join our channel and stay updated with the latest news.

Next