Advertisement

Tamil Nadu ಕಳ್ಳಭಟ್ಟಿ ದುರಂತ; ಖರ್ಗೆ, ರಾಹುಲ್ ಎಲ್ಲಿದ್ದಾರೆ?: ನಿರ್ಮಲಾ ಕಿಡಿ

06:35 PM Jun 23, 2024 | Team Udayavani |

ಹೊಸದಿಲ್ಲಿ: ತಮಿಳುನಾಡು ಕಲ್ಲಕುರಿಚಿ ಕಳ್ಳಭಟ್ಟಿ ದುರಂತದ ಕುರಿತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಾಂಗ್ರೆಸ್ ಮತ್ತು ಡಿಎಂಕೆ ವಿರುದ್ಧ ಕಿಡಿ ಕಾರಿದ್ದಾರೆ.

Advertisement

‘ಕಳ್ಳಭಟ್ಟಿ ಸೇವಿಸಿದ 200 ಕ್ಕೂ ಹೆಚ್ಚು ಜನರು ಇನ್ನೂ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿದ್ದಾರೆ. 56 ಜನರು ಸಾವನ್ನಪ್ಪಿದ್ದು, ಅವರಲ್ಲಿ ಹೆಚ್ಚಿನವರು ಪರಿಶಿಷ್ಟ ಜಾತಿಗೆ ಸೇರಿದವರು.ನಾನು ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇನೆ’ ಎಂದರು.

ನಗರದ ಮಧ್ಯಭಾಗದಲ್ಲಿ ಅಂಗಡಿಗಳಲ್ಲಿ ಲೈಸೆನ್ಸ್ ಪಡೆದಿರುವ ಮದ್ಯ ಸಿಗುತ್ತದೆ. ಕಾಂಗ್ರೆಸ್ ನವರು ಇದರ ವಿರುದ್ಧ ಒಂದು ಮಾತನ್ನೂ ಆಡಿಲ್ಲ. ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಲ್ಲಿದ್ದಾರೆ?ರಾಹುಲ್ ಗಾಂಧಿ ಎಲ್ಲಿ?ಅವರು ಗೆಲ್ಲುತ್ತಾರೆ ಎಂಬ ಭರವಸೆಯಿಂದಲೇ ಚುನಾವಣೆಗೆ ಸ್ಪರ್ಧಿಸುತ್ತಾರೆ.ನಕಲಿ ಮದ್ಯದಿಂದ ದಲಿತರು ಸಾಯುತ್ತಿರುವಾಗ ಅವರ ಸದ್ದಿಲ್ಲ. ಈ ಸಂಪೂರ್ಣ ದುರಂತವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ನಾನು ಒತ್ತಾಯಿಸುತ್ತೇನೆ’ ಎಂದು ಸಚಿವೆ ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next