Advertisement
ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಹಾಗೂ ಸೀಶೆಲ್ಸ್ ಉಪಾಧ್ಯಕ್ಷ ಅಹ್ಮದ್ ಅಫಿಫ್ ಅವರು ಶನಿವಾರವೇ ಭಾರತಕ್ಕೆ ಆಗಮಿಸಿದ್ದಾರೆ. ಉಳಿದ ನಾಯಕರನ್ನು ಸ್ವಾಗತಿಸಲು ರಾಜಧಾನಿಯಲ್ಲಿ ಸಿದ್ಧತೆಗಳನ್ನು ನಡೆಸಲಾಗಿದೆ.
-ರಾನಿಲ್ ವಿಕ್ರಮ್ ಸಿಂಘೆ -ಶ್ರೀಲಂಕಾ ಅಧ್ಯಕ್ಷ
– ಮೊಹಮ್ಮದ್ ಮುಯಿಝು- ಮಾಲ್ಡೀವ್ಸ್ ಅಧ್ಯಕ್ಷ
– ಪುಷ್ಪಕಮಲ್ ದಹಲ್ ಪ್ರಚಂಡ- ನೇಪಾಳ ಪ್ರಧಾನಿ
– ತ್ಶೆರಿಂಗ್ ಟೋಬ್ಗೇ- ಭೂತಾನ್ ಪ್ರಧಾನಿ
– ಪ್ರವೀಂದ್ ಕುಮಾರ್ ಜಗನ್ನಾಥ್- ಮಾರಿಷಸ್ ಪ್ರಧಾನಿ 8000 ಮಂದಿಗೆ ಆಹ್ವಾನ
ದೇಶದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಪ್ರಮುಖರು, ನೈರ್ಮಲ್ಯ ಕಾರ್ಮಿಕರು, ಸೆಂಟ್ರಲ್ ವಿಸ್ತಾ ಯೋಜನೆಯ ಕಾರ್ಮಿಕರು, ಸಿಲ್ಕ್ಯಾರಾ ರ್ಯಾಟ್‌ಹೋಲ್-ಮೈನರ್ಸ್ ಸೇರಿದಂತೆ ಭಾರತದ ಎಲ್ಲಾ ಕ್ಷೇತ್ರಗಳನ್ನು ಪ್ರತಿನಿಧಿಸುವ 8000 ಮಂದಿಗೆ ಆಹ್ವಾನ ನೀಡಲಾಗಿದೆ. ಈ ಪೈಕಿ ವಂದೇ ಭಾರತ್ ಮೆಟ್ರೋದ ಮೊದಲ ಮಹಿಳಾ ಚಾಲಕಿ ಸುರೇಖಾ ಯಾದವ್ ಪ್ರಮುಖರಾಗಿದ್ದಾರೆ. ಇದಲ್ಲದೆ ಉತ್ತರಾಖಂಡದ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ್ದ ಕಾರ್ಮಿಕರನ್ನು ಕಾಪಾಡಿದ ರ್ಯಾಟ್ ಹೋನ್ ಮೈನರ್ಸ್‌ಗಳನ್ನೂ ಪ್ರಮಾಣ ವಚನಕ್ಕೆ ಆಹ್ವಾನಿಸಲಾಗಿದೆ.